ಡಿಎಂಕೆ ಮತ್ತು ಕಾಂಗ್ರೆಸ್ ಜನರು ಮತ್ತು ಸಮಾಜದ ನಡುವೆ ಬಿರುಕು ಮೂಡಿಸುತ್ತಾರೆ: ಪ್ರಧಾನಿ ಮೋದಿ ವಾಗ್ದಾಳಿ
ತಿರುನೆಲ್ವೇಲಿ: ಡಿಎಂಕೆ ಮತ್ತು ಕಾಂಗ್ರೆಸ್ ಜನರು ಮತ್ತು ಸಮಾಜದ ನಡುವೆ ಬಿರುಕು ಮೂಡಿಸಲು ನವೀನ ಆಲೋಚನೆಗಳನ್ನು ಮಂಡಿಸುತ್ತಿದ್ದಾರೆ ಎಂದು ತಮಿಳುನಾಡಿನಲ್ಲಿ ಆಡಳಿತರೂಢ ಡಿಎಂಕೆ ಹಾಗೂ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ಮಾತನಾಡಿದ ಅವರು, ಆಡಳಿತಾರೂಢ ಡಿಎಂಕೆ ಕೇಂದ್ರದ ಯೋಜನೆಗಳಿಗೆ ಸಹಕರಿಸುತ್ತಿಲ್ಲ, ಡಿಎಂಕೆ ಪಲಾಯನ ಜನರ ನಂಬಿಕೆಯ ಮೇಲಿನ ದ್ವೇಷವನ್ನು ತೋರಿಸುತ್ತದೆ. ಡಿಎಂಕೆ ಮತ್ತು ಅದರ ಮಿತ್ರ ಪಕ್ಷವಾದ ಕಾಂಗ್ರೆಸ್ ಜನರ ನಡುವೆ ಬಿರುಕು ಮೂಡಿಸುತ್ತಿವೆ ಎಂದು ಅವರು ಆರೋಪಿಸಿದರು.
ತಮಿಳುನಾಡು ಶ್ರೀರಾಮನೊಂದಿಗೆ ಜನರಿಗೆ ಹೆಚ್ಚು ಚಿರಪರಿತವಾಗಿದೆ. ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾಪನೆಗೆ ಮುನ್ನ ಧನುಷ್ಕೋಡಿ ಸೇರಿದಂತೆ ವಿವಿಧ ದೇವಾಲಯಗಳಿಗೆ ಭೇಟಿ ನೀಡಿದ್ದೆ.
ಇಷ್ಟು ವರ್ಷಗಳ ನಂತರ ಮಂದಿರ ನಿರ್ಮಾಣವಾಗುತ್ತಿರುವುದಕ್ಕೆ ಇಡೀ ದೇಶವೇ ಸಂತಸ ವ್ಯಕ್ತಪಡಿಸಿದೆ. ಸಂಸತ್ತಿನಲ್ಲಿ ಸಂಬಂಧಿತ ವಿಷಯ ಪ್ರಸ್ತಾಪವಾಯಿತು ಆದರೆ ಡಿಎಂಕೆ ಸಂಸದರು ಓಡಿಹೋದರು ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಹೇಳಿದರು.
ಡಿಎಂಕೆ ನಿಮ್ಮ ನಂಬಿಕೆಯನ್ನು ಎಷ್ಟು ದ್ವೇಷಿಸುತ್ತದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಡಿಎಂಕೆ ಮತ್ತು ಕಾಂಗ್ರೆಸ್ ಜನರು ಮತ್ತು ಸಮಾಜದ ನಡುವೆ ಬಿರುಕು ಮೂಡಿಸಲು ‘ನವೀನ ಆಲೋಚನೆಗಳನ್ನು’ ಮಂಡಿಸುತ್ತಿದ್ದಾರೆ ಎಂದು ಟೀಕಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth