ಭಾರತ ರಾಷ್ಟ್ರವೇ ಅಲ್ಲ: ಡಿಎಂಕೆ ಸಂಸದ ಎ.ರಾಜಾ ವಿವಾದಾತ್ಮಕ ಹೇಳಿಕೆ - Mahanayaka
6:05 PM Saturday 21 - September 2024

ಭಾರತ ರಾಷ್ಟ್ರವೇ ಅಲ್ಲ: ಡಿಎಂಕೆ ಸಂಸದ ಎ.ರಾಜಾ ವಿವಾದಾತ್ಮಕ ಹೇಳಿಕೆ

05/03/2024

ಭಾರತ ಎಂದಿಗೂ ಒಂದು ರಾಷ್ಟ್ರವಾಗಿರಲಿಲ್ಲ. ಇದು ವೈವಿಧ್ಯಮಯ ಆಚರಣೆಗಳು ಮತ್ತು ಸಂಸ್ಕೃತಿಗಳ ಒಂದು ಉಪಖಂಡವಾಗಿದೆ ಎಂದು ಡಿಎಂಕೆ ಸಂಸದ ಎ.ರಾಜಾ ಹೇಳಿದ್ದಾರೆ. ಒಂದು ರಾಷ್ಟ್ರವಾಗಬೇಕಿದ್ದರೆ ಒಂದು ಭಾಷೆ, ಒಂದು ಸಂಪ್ರದಾಯ ಮತ್ತು ಒಂದು ಸಂಸ್ಕೃತಿಯನ್ನು ಹೊಂದಿರಬೇಕು. ಅಂತಹ ಗುಣಲಕ್ಷಣಗಳು ಮಾತ್ರ ಒಂದು ರಾಷ್ಟ್ರವನ್ನು ರೂಪಿಸುತ್ತವೆ ಎಂದು ಅವರು ಹೇಳಿದ್ದಾರೆ.

ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಡಿ ಎಂ ಕೆ ಸಂಸದ ರಾಜಾ, “ಭಾರತವು ಒಂದು ರಾಷ್ಟ್ರವಲ್ಲ. ಇದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ. ಭಾರತ ಎಂದಿಗೂ ಒಂದು ರಾಷ್ಟ್ರವಾಗಿರಲಿಲ್ಲ. ಒಂದು ಎಂದು ಹೇಳಿದ್ದಾರೆ.

ಭಾರತವು ಒಂದು ರಾಷ್ಟ್ರವಲ್ಲ, ಬದಲಾಗಿ ಉಪಖಂಡವಾಗಿದೆ ಎಂದು ಪ್ರತಿಪಾದಿಸಿದ ರಾಜ, “ಇಲ್ಲಿ, ತಮಿಳು ಒಂದು ರಾಷ್ಟ್ರ ಮತ್ತು ಒಂದು ದೇಶ, ಮಲಯಾಳಂ ಒಂದು ಭಾಷೆ, ಒಂದು ರಾಷ್ಟ್ರ ಮತ್ತು ಒಂದು ದೇಶ, ಒರಿಯಾ ಒಂದು ರಾಷ್ಟ್ರ, ಒಂದು ಭಾಷೆ ಮತ್ತು ಒಂದು ದೇಶ. ಅಂತಹ ಎಲ್ಲಾ ರಾಷ್ಟ್ರೀಯ ಜನಾಂಗಗಳು ಭಾರತವನ್ನು ರೂಪಿಸುತ್ತವೆ, ಆದ್ದರಿಂದ ಭಾರತವು ಒಂದು ದೇಶವಲ್ಲ, ಇದು ವಿವಿಧ ಆಚರಣೆಗಳು, ಸಂಪ್ರದಾಯಗಳು ಮತ್ತು ಸಂಸ್ಕೃತಿಗಳನ್ನು ಹೊಂದಿರುವ ಉಪಖಂಡವಾಗಿದೆ” ಎಂದು ಹೇಳಿದ್ದಾರೆ.


Provided by

”ತಮಿಳುನಾಡಿನಲ್ಲಿ ಒಂದು ಸಂಸ್ಕೃತಿ, ಕೇರಳದಲ್ಲಿ ಮತ್ತೊಂದು ಸಂಸ್ಕೃತಿ. ಅದೇ ರೀತಿ ದಿಲ್ಲಿಯಲ್ಲಿ ಒಂದು ಸಂಸ್ಕೃತಿ. ಒಡಿಶಾದಲ್ಲಿ ಮತ್ತೊಂದು ಸಂಸ್ಕೃತಿ. ಮಣಿಪುರದಲ್ಲಿ ನಾಯಿ ಮಾಂಸ ತಿನ್ನುವುದು ಸಾಂಸ್ಕೃತಿಕ ಅಂಶ. ಕಾಶ್ಮೀರದಲ್ಲಿ ಒಂದೊಂದು ಸಂಸ್ಕೃತಿ ಇದೆ, ಪ್ರತಿಯೊಂದು ಸಂಸ್ಕೃತಿಯನ್ನು ಗುರುತಿಸಬೇಕು, ಒಂದು ಸಮುದಾಯವು ಗೋಮಾಂಸ ತಿಂದರೆ, ಅದನ್ನು ಗುರುತಿಸಿ, ನಿಮ್ಮ ಸಮಸ್ಯೆ ಏನು? ಅವರು ನಿಮ್ಮನ್ನು ಕೇಳಿ ತಿನ್ನಬೇಕೆ? ಎಂದು ಸಂಸದ ರಾಜಾ ಪ್ರಶ್ನಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ