ಈ 5 ಪದಾರ್ಥಗಳ ಜೊತೆಗೆ ಅಪ್ಪಿತಪ್ಪಿಯೂ ಮೂಲಂಗಿ ತಿನ್ನಬೇಡಿ!
ಮೂಲಂಗಿ ವಾಸನೆ ಇರುವ ಕಾರಣ ಕೆಲವರಿಗೆ ಇದು ಇಷ್ಟವಾಗುವುದಿಲ್ಲ. ಆದರೆ ಅದು ಆರೋಗ್ಯಕ್ಕೆ ಬಹಳ ಉತ್ತಮ. ವಿಟಮಿನ್, ಪೊಟ್ಯಾಶಿಯಂ, ನಾರಿನಾಂಶ ಇದರಲ್ಲಿ ಸಮೃದ್ಧವಾಗಿದೆ. ಕರುಳಿನ ವಿಷವನ್ನು ತೊಡೆದು ಹಾಕುವ ಶಕ್ತಿಯನ್ನು ಕೂಡ ಇದು ಹೊಂದಿದೆ. ಮೂಲಂಗಿಯಲ್ಲಿ ಪ್ರೊಟೀನ್, ಕ್ಯಾಲ್ಸಿಯಂ, ಕಬ್ಬಿಣಾಂಶ, ನಾರಿನಾಂಶ ಮತ್ತು ವಿಟಮಿನ್ ಎ, ಬಿ ಮತ್ತು ಸಿ ಹೇರಳವಾಗಿ ಇರುತ್ತದೆ.
ಸಾಕಷ್ಟು ಪ್ರಯೋಜನವನ್ನು ಮೂಲಂಗಿ ಹೊಂದಿದ್ದರು. ಕೆಲವು ವಸ್ತುಗಳ ಜೊತೆಗೆ ಮೂಲಂಗಿಯನ್ನು ಸೇವನೆ ಮಾಡಿದ್ರೆ, ಆರೋಗ್ಯ ಕೆಡುವ ಅಥವಾ ಅಡ್ಡ ಪರಿಣಾಮ ಉಂಟಾಗಬಹುದಂತೆ. ಈ ಪ್ರಮುಖ 5 ವಸ್ತುಗಳ ಜೊತೆಗೆ ಅಪ್ಪಿತಪ್ಪಿಯೂ ಮೂಲಂಗಿಯನ್ನು ತಿನ್ನಬೇಡಿ. ಅವು ಯಾವುದು ತಿಳಿದುಕೊಳ್ಳೋಣ…
ಹಾಲು: ಮೂಲಂಗಿ ಅಥವಾ ಮೂಲಂಗಿಯಿಂದ ಮಾಡಿದ ಯಾವುದೇ ಪದಾರ್ಥಗಳನ್ನ ತಿನ್ನುವ ಮೊದಲು ಹಾಗೂ ತಿಂದ ನಂತರ ಹಾಲು ಕುಡಿಯಬಾರದು. ಇದರಿಂದ ಚರ್ಮದ ಸಮಸ್ಯೆಗಳು, ಅಲರ್ಜಿ ಉಂಟಾಗಬಹುದು. ಇದರಿಂದ ಚೇತರಿಸಿಕೊಳ್ಳಲು ಬಹಳ ಸಮಯ ಬೇಕಾಗುತ್ತದೆ.
ಚಹಾ: ಮೂಲಂಗಿ ಸೇವಿಸಿದ ಸಮಯದಲ್ಲಿ ಚಹಾ ಕುಡಿಯವುದು ಬಹಳ ಅಪಾಯಕಾರಿ. ಈ ಎರಡರ ಸಂಯೋಜನೆಯು ಮಲಬದ್ಧತೆ ಮತ್ತು ಅಸಿಡಿಟಿ ಸಮಸ್ಯೆಗಳನ್ನು ಉಂಟಾಗಬಹುದು.ಇದರ ಹಿಂದಿರುವ ಕಾರಣವೆಂದರೆ ಮೂಲಂಗಿ ತಣ್ಣನೆಯ ಗುಣವನ್ನು ಹೊಂದಿದ್ದರೆ ಚಹಾವು ಬಿಸಿಯ ಸ್ವಭಾವವನ್ನು ಹೊಂದಿದೆ. ಇವೆರಡೂ ಪರಸ್ಪರ ವಿರುದ್ಧವಾಗಿರುವ ಸ್ವಭಾವದಿಂದಾಗಿ, ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು.
ಕಿತ್ತಳೆ: ಮೂಲಂಗಿ ಜೊತೆ ಕಿತ್ತಳೆ ಹಣ್ಣು ತಿನ್ನುವುದನ್ನು ಕೂಡ ತಪ್ಪಿಸಬೇಕು. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು.
ಹಾಗಲಕಾಯಿ: ಹಾಗಲಕಾಯಿಗೂ ಮೂಲಂಗಿಗೂ ಆಗಿ ಬರೋದಿಲ್ಲ. ಹಾಗಾಗಿ ಯಾವತ್ತು ಹಾಗಲಕಾಯಿ ಮೂಲಂಗಿ ಒಟ್ಟಿಗೆ ತಿನ್ನಬಾರದು. ಇದರಿಂದ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ಈ ಸಮಸ್ಯೆ ರಾತ್ರಿ ಹೊತ್ತು ಹೆಚ್ಚಾಗುತ್ತದೆ.
ಚೀಸ್: ಮೂಲಂಗಿ ಹಾಗೂ ಚೀಸ್ ಒಟ್ಟಿಗೆ ತಿನ್ನುವುದು ಕೂಡ ಒಳ್ಳೆಯದಲ್ಲ. ಇದು ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ಚರ್ಮದ ಕಾಯಿಲೆಗಳನ್ನು ಹೆಚ್ಚಿಸುತ್ತದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: