ಈ ಹಣ್ಣುಗಳನ್ನು ಖಾಲಿ ಹೊಟ್ಟೆಗೆ ಸೇವಿಸಲೇಬೇಡಿ | ಸೇವಿಸಿದರೆ ಏನಾಗುತ್ತದೆ ಗೊತ್ತಾ? - Mahanayaka
6:04 PM Wednesday 30 - October 2024

ಈ ಹಣ್ಣುಗಳನ್ನು ಖಾಲಿ ಹೊಟ್ಟೆಗೆ ಸೇವಿಸಲೇಬೇಡಿ | ಸೇವಿಸಿದರೆ ಏನಾಗುತ್ತದೆ ಗೊತ್ತಾ?

27/10/2020

ಹಣ್ಣುಗಳನ್ನು ತಿನ್ನುವುದು ಒಳ್ಳೆಯದು ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಹಣ್ಣನ್ನು ಯಾವ ಸಮಯಗಳಲ್ಲಿ ಸೇವಿಸಬೇಕು ಎನ್ನುವುದನ್ನೂ ಅರಿತುಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಕೆಲವು ಹಣ್ಣುಗಳನ್ನು ನೀವು ಬೆಳಗ್ಗಿನ ಸಮಯದಲ್ಲಿ ಅಂದರೆ ಖಾಲಿ ಹೊಟ್ಟೆಯಲ್ಲಿ ತಿಂದರೆ, ಈ ಎಲ್ಲ ಸಮಸ್ಯೆಗಳಿಗೆ ಕಾರಣವಾಗುತ್ತದೆ.

 

ಬಾಳೆ ಹಣ್ಣು:


 

ಬಾಳೆಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದಂತೆ, ಕೆಲವರು ಉಪವಾಸ ತೊರೆಯುವ ಸಂದರ್ಭಗಳಲ್ಲಿ ಬಾಳೆ ಹಣ್ಣನ್ನೇ ತಿನ್ನುತ್ತಾರೆ. ಆದರೆ, ಬಾಳೆ ಹಣ್ಣಿನಲ್ಲಿ ಮೆಗ್ನೀಶಿಯಂ ಇರುವ ಕಾರಣ ಅದು ಹೃದಯಕ್ಕೆ ಅಪಾಯಕಾರಿ ಎಂದು ಹೇಳುತ್ತಾರೆ.

 

ಮಾವಿನ ಹಣ್ಣು:

ಮಾವಿನ ಹಣ್ಣನ್ನು ಕೂಡ ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದಂತೆ.  ಮಾವಿನ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ,  ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚಾಗಿ, ಮಧುಮೇಹ ಸಮಸ್ಯೆ ಕಾಣಿಸಿಕೊಳ್ಳುತ್ತದೆಯಂತೆ.


 

ದ್ರಾಕ್ಷಿ:

ದ್ರಾಕ್ಷಿಯಲ್ಲಿ ಸಿಟ್ರಿಕ್ ಹಾಗೂ ಆಮ್ಲ ಇರುವ ಕಾರಣ ಅದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ, ಗ್ಯಾಸ್ಟಿಕ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆಯಂತೆ.


 

ಪೇರಳೆ ಹಣ್ಣು:

ಪೇರಳೆ ಹಣ್ಣನ್ನು  ಖಾಲಿ ಹೊಟ್ಟೆಗೆ ಸೇವಿಸಿದರೆ, ಹೊಟ್ಟೆಗಳ ಸೂಕ್ಷ್ಮ ಪೊರೆಗಳ ಮೇಲೆ ಹಾಗೂ ಜೀರ್ಣಾಂಗ ವ್ಯವಸ್ಥೆಯ ಮೇಲೆ ಇದು ಪರಿಣಾಮ ಬೀರುತ್ತದೆಯಂತೆ.

 

ಇನ್ನಷ್ಟು ಸುದ್ದಿಗಳಿಗಾಗಿ ಮಹಾನಾಯಕ ಗ್ರೂಪ್ ಗೆ ಜಾಯಿನ್ ಆಗಿ
https://chat.whatsapp.com/JQKrdyOeQGnCQDAhdgOU0Z

ಇತ್ತೀಚಿನ ಸುದ್ದಿ