ಅಷ್ಟಕ್ಕೂ ಸೋನು ಮಾಡಿದ ತಪ್ಪೇನು?: ದತ್ತು ಪಡೆಯಲು ಇಷ್ಟೆಲ್ಲ ನಿಯಮ ಇದೆ ಗೊತ್ತಾ?
ಬೆಂಗಳೂರು: ಮಕ್ಕಳನ್ನು ದತ್ತು ಪಡೆಯುವಾಗ ಪಾಲಿಸಬೇಕಾದ ಕಾನೂನು ಕ್ರಮಗಳನ್ನು ನಿರ್ಲಕ್ಷ್ಯಿಸಿದ ಹಿನ್ನೆಲೆಯಲ್ಲಿ ಸೋನು ಶ್ರೀನಿವಾಸ ಗೌಡ(Sonu Srinivas Gowda) ಅವರನ್ನು ಬಂಧಿಸಲಾಗಿದೆ.
ಸೋನು ಗೌಡ ಬಂಧನದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಕಾನೂನು ಪರಿವೀಕ್ಷಣಾಧಿಕಾರಿ ಗೀತಾ , ಸೋನು ಗೌಡ ಮಗುವನ್ನು ಅಕ್ರಮವಾಗಿ ದತ್ತು ಪಡೆದ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ನಿಯಮದ ಪ್ರಕಾರ, ದತ್ತು ಪಡೆಯುವಾಗಿ ಅರ್ಜಿ ಸಲ್ಲಿಸಬೇಕು. ಆದರೆ ಸೋನು ಅರ್ಜಿ ಸಲ್ಲಿಸಿಲ್ಲ.
ಮಗುವನ್ನು ಹೊರಗಡೆ ತೋರಿಸುವಂತಿಲ್ಲ ಮತ್ತು ಕುಟುಂಬದ ಮಾಹಿತಿ ಬಹಿರಂಗ ಪಡಿಸುವಂತಿಲ್ಲ. ಆದರೆ ಸೋನು ಗೌಡ ಲೈವ್ ನಲ್ಲಿ ಎಲ್ಲ ಬಹಿರಂಗ ಪಡಿಸಿದ್ದಾರೆ.
ಮಗುವನ್ನು ಸಾಕುವ ಸಾಮರ್ಥ್ಯ ಇದೆಯೇ ಎನ್ನುವುದನ್ನೂ ಪರಿಗಣಿಸಲಾಗುತ್ತದೆ. ಸೋನು ಗೌಡಗೆ ಮದುವೆ ಸಹ ಆಗಿಲ್ಲ, ದತ್ತು ಪಡೆಯುವವರಿಗೂ ಮಗುವಿಗೂ 25 ವರ್ಷಗಳ ಅಂತರವಿರಬೇಕಾಗುತ್ತದೆ. ಜೊತೆಗೆ ಕುಟುಂಬದ ಅನುಮತಿ ಪಡೆದಿದ್ದೇನೆ ಎಂದು ಸೋನು ಹೇಳಿದ್ದಾರೆ. ಹೀಗಾಗಿ ಮಾರಾಟ ಮಾಡಿದ್ದಾರಾ? ಎನ್ನುವ ಪ್ರಶ್ನೆಯೂ ಎದ್ದಿದೆ. ಮಗುವನ್ನು ಮಾರಾಟ ಮಾಡಲು ನಿಷೇಧ ಇರುವ ಕಾರಣ ಪೋಷಕರನ್ನೂ ವಿಚಾರಣೆ ನಡೆಸಲಾಗುತ್ತದೆ.
ಬಾಲ ನ್ಯಾಯ ಕಾಯ್ದೆ 2000 ಕಲಂ 29ರ ಪ್ರಕಾರ ಪೋಷಕರು ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರು ಪಡಿಸಿ ಸಮಿತಿಯ ಆದೇಶದ ಪ್ರಕಾರವೇ ದತ್ತು ನೀಡಬೇಕು. ಆದ್ರೆ ಸೋನು ಗೌಡ ಯಾವುದೇ ನಿಯಮಗಳನ್ನೂ ಪಾಲಿಸದೇ ಲೈವ್ ನಲ್ಲಿ ಬರಿ ಮಾತಲ್ಲೇ ದತ್ತು ಪಡೆದಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈ ವಿಚಾರಗಳು ಸೋನು ಗೌಡ ಬಂಧನಕ್ಕೆ ಕಾರಣವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth