ಬೈಕ್ ಗೆ ಅಡ್ಡ ಬಂದ ನಾಯಿ: ಬೈಕ್ ಸವಾರನ ದಾರುಣ ಸಾವು - Mahanayaka

ಬೈಕ್ ಗೆ ಅಡ್ಡ ಬಂದ ನಾಯಿ: ಬೈಕ್ ಸವಾರನ ದಾರುಣ ಸಾವು

jafar
01/11/2024

ಗೋಣಿಬೀಡು:  ಬೈಕಿಗೆ ಬೀದಿನಾಯಿ ಅಡ್ಡಬಂದು ಅಪಘಾತ ಸಂಭವಿಸಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಪಟ್ಟಣದಲ್ಲಿ ನಡೆದಿದೆ.

ಮೃತ ಯುವಕ ಗೋಣಿಬೀಡು ಸಮೀಪದ ಆನೆದಿಬ್ಬ ನಿವಾಸಿ ಜಾಫರ್ (24 ವರ್ಷ) ಮೃತಪಟ್ಟವರಾಗಿದ್ದಾರೆ.

ಆನೆದಿಬ್ಬ ಗ್ರಾಮದ ಇಸಾಕ್ ಎಂಬುವವರ ಪುತ್ರ ಜಾಫರ್ ಶುಕ್ರವಾರ ಬೆಳಿಗ್ಗೆ ಸಮೀಪದ ಬೆಟ್ಟದಮನೆಯ ಗ್ರಾಮದಲ್ಲಿ ತಾನು ಕೆಲಸ ಮಾಡಿದ್ದ ಹಣವನ್ನು ಪಡೆಯಲು ಹೋಗಿದ್ದರು ಎನ್ನಲಾಗಿದೆ.

ಬೆಟ್ಟದಮನೆಯಿಂದ ವಾಪಸಾಗುತ್ತಿದ್ದ ವೇಳೆ ಗೋಣಿಬೀಡು ಪಟ್ಟಣ ವ್ಯಾಪ್ತಿಯಲ್ಲಿ ಬೀದಿನಾಯಿಯೊಂದು ಬೈಕಿಗೆ ಅಡ್ಡಬಂದಿದ್ದು, ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಚರಂಡಿಗೆ ಮಗುಚಿದೆ. ಈ ಸಂದರ್ಭ ಚರಂಡಿಗೆ ಅಳವಡಿಸಿದ್ದ ಸಿಮೆಂಟ್ ಚಪ್ಪಡಿಗಳಿಗೆ ಜಾಫರ್ ತಲೆ ಹೊಡೆದಿದ್ದು, ತೀವ್ರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ನಾಯಿಯೂ ಕೂಡ ಸ್ಥಳದಲ್ಲೇ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸ್ನೇಹಜೀವಿಯಾಗಿದ್ದ ಜಾಫರ್ ನಿಧನಕ್ಕೆ ಸ್ಥಳೀಯರು ಕಂಬನಿ ಮಿಡಿದಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ