ನೀಲಿ ಹಕ್ಕಿಯ ಜಾಗದಲ್ಲಿ ನಾಯಿ: ಟ್ವಿಟ್ಟರ್ ಲೋಗೋ ಬದಲಾವಣೆ!

ಟ್ವಿಟ್ಟರ್ ನ ಜನಪ್ರಿಯ ಲೋಗೋ ಇದೀಗ ಬದಲಾವಣೆಯಾಗಿದ್ದು, ಬಳಕೆದಾರರು ಅಚ್ಚರಿಗೊಳಗಾಗಿದ್ದಾರೆ. ನೀಲಿ ಹಕ್ಕಿಯ ಚಿತ್ರದ ಜಾಗಕ್ಕೆ ಕ್ರಿಪ್ಟೋಕರೆನ್ಸಿ ಡಾಗ್ ಕಾಯಿನ್ ನ ನಾಯಿಯ ಫೋಟೋವನ್ನು ಹಾಕಲಾಗಿದೆ.
ಸಿಇಒ ಎಲಾನ್ ಮಸ್ಕ್ ಅಧಿಕಾರವಹಿಸಿಕೊಂಡ ಬಳಿಕ ಟ್ವಿಟ್ಟರ್ ಒಂದಲ್ಲ ಒಂದು ಕಾರಣಕ್ಕೆ ವಿವಾದ, ಅಚ್ಚರಿಗಳನ್ನು ಸೃಷ್ಟಿಸಿದೆ. ಟ್ವಿಟ್ಟರ್ ನ ಲೋಗೋ ಬದಲಾವಣೆಯಾಗಿರುವುದು ಇದೀಗ ಭಾರೀ ಟ್ರೋಲ್ ಗೊಳಗಾಗಿದೆ. ಈವರೆಗೆ ಬೇರೆ ಬೇರೆ ವಿಚಾರಗಳು ಟ್ವಿಟ್ಟರ್ ನಲ್ಲಿ ಟ್ರೋಲ್ ಆಗುತ್ತಿದ್ದವು. ಆದರೆ ಈ ಬಾರಿ ಟ್ವಿಟ್ವರ್ ನಲ್ಲೇ ಟ್ವಿಟ್ಟರ್ ಟ್ರೋಲ್ ಗೀಡಾಗಿದೆ.
ಇನ್ನೂ ಟ್ವಿಟರ್ ನ ಲೋಗೋವು ವೆಬ್ ಆವೃತ್ತಿಗೆ ಮಾತ್ರವೇ ಬದಲಾವಣೆಯಾಗಿದೆ. ಮೊಬೈಲ್ ನಲ್ಲಿ ನೀಲಿ ಪಕ್ಷಿಯ ಲೋಗೋವೇ ಕಾಣ ಸಿಗಲಿದೆ.
ಬಿಟ್ ಕಾಯಿನ್ನಂತಹ ಇತರೆ ಕ್ರಿಪ್ಟೋ ಕರೆನ್ಸಿಯನ್ನು ಅಪಹಾಸ್ಯ ಮಾಡಲು 2013ರಲ್ಲಿ ತಮಾಷೆಗಾಗಿ ಈ ನಾಯಿ ಚಿತ್ರ ರಚಿಸಲಾಗಿತ್ತು. 2022ರ ಏಪ್ರಿಲ್ನಲ್ಲಿ ಟ್ವಿಟ್ಟರ್ ಖರೀದಿಸುವ 22 ಬಿಲಿಯನ್ ಡಾಲರ್ ಒಪ್ಪಂದವನ್ನು ಮಸ್ಕ್ ಆರಂಭಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw