ಪಿಟಿಸಿಎಲ್ ಕಾಯ್ದೆ ತಿದ್ದುಪಡಿಗಾಗಿ ಒತ್ತಾಯಿಸಿ ಆಹೋರಾತ್ರಿ ನಡೆಯುತ್ತಿರುವ ಧರಣಿಗೆ ಬೆಂಬಲಿಸಿ: ವೇಣುಗೋಪಾಲ್ ಮೌರ್ಯ

ಬೆಂಗಳೂರು: ಎಸ್‌ಸಿ ಮತ್ತು ಎಸ್ ಟಿ ಭೂ ಪರಭಾರೆ ನಿಷೇಧ ಕಾಯ್ದೆ—1978—79(PTCL ACT) ಕಾಲಮಿತಿ ಅನ್ವಯಿಸುವುದಿಲ್ಲವೆಂದು ಸಮಗ್ರ ತಿದ್ದುಪಡಿ ಮಾಡಿ ಸುಗ್ರಿವಾಜ್ಞೆಗೆ ಆಗ್ರಹಿಸಿ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದೆ.
ಧರಣಿ ಸತ್ಯಾಗ್ರಹದ ಮೂರನೇ ದಿನವಾದ ಬುಧವಾರ ಧರಣಿ ಸತ್ಯಾಗ್ರಹದ ಕುರಿತು ಮಹಾನಾಯಕಕ್ಕೆ ಮಾಹಿತಿ ನೀಡಿದ ಹೋರಾಟಗಾರರಾದ ವೇಣುಗೋಪಾಲ್ ಮೌರ್ಯ, ಎಸ್ ಸಿ. ಎಸ್ ಟಿಗಳಿಂದ ಬಲವಂತವಾಗಿ ಅಥವಾ ಆಮಿಷವೊಡ್ಡಿ ಬೇರೆ ಜಾತಿಯವರು ಕಬಳಿಸಿರುವ ಭೂಮಿಯನ್ನು ಪುನಃ ವಾರಸುದಾರ ಎಸ್ ಸಿ, ಎಸ್ ಟಿಯವರಿಗೆ ಹಿಂದಿರುಗಿಸುವುದು ಈ ಕಾಯ್ದೆಯ ಉದ್ದೇಶವಾಗಿದೆ. ಆದರೆ, ಕೋರ್ಟ್ ಕೇಸ್ ನಲ್ಲಿರುವ ಇಂತಹ ಎಲ್ಲ ಕೇಸ್ ಗಳನ್ನು ಎಸಿ ಹಂತದಲ್ಲಿ ಮತ್ತು ಡಿಸಿ ಹಂತದಲ್ಲಿ ವಜಾ ಮಾಡಲಾಗಿದೆ. ಇದರ ವಿರುದ್ಧ ಸುಮಾರು 2 ವರ್ಷಗಳಿಂದ ಹೋರಾಟಗಾರರು ಪಿಟಿಸಿಎಲ್ ಕಾಯ್ದೆ ತಿದ್ದುಪಡಿಗಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಈ ಹೋರಾಟಕ್ಕೆ ಎಲ್ಲರೂ ಬೆಂಬಲಿಸುವ ಮೂಲಕ ಪಿಟಿಸಿಎಲ್ ಕಾಯ್ದೆ ತಿದ್ದುಪಡಿಗಾಗಿ ಒತ್ತಾಯಿಸ ಬೇಕಾಗಿದೆ ಎಂದು ವೇಣುಗೋಪಾಲ್ ಮೌರ್ಯ ಮನವಿ ಮಾಡಿಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw