ಡೊನಾಲ್ಡ್ ಟ್ರಂಪ್ ಹತ್ಯೆ ಯತ್ನ ಪ್ರಕರಣ: ಆರೋಪಿ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಭಾವಚಿತ್ರ ಬಿಡುಗಡೆ
ಅಮೆರಿಕದ ಪೆನ್ಸಿಲ್ವೇನಿಯಾದ ಬಟ್ಲರ್ ನಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಪ್ರಯತ್ನವು ವಿಶ್ವದಾದ್ಯಂತ ಬಹಳ ಚರ್ಚೆಯನ್ನುಂಟು ಮಾಡಿತು. ಗುಂಡೊಂದು ಟ್ರಂಪ್ ಅವರ ಕಿವಿಯನ್ನು ಹೊಕ್ಕಿ ಗಾಯವನ್ನುಂಟು ಮಾಡಿತು. ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್ಬಿಐ) ಶೂಟರ್ ಅನ್ನು ಪೆನ್ಸಿಲ್ವೇನಿಯಾದ ಬೆತೆಲ್ ಪಾರ್ಕ್ ನ 20 ವರ್ಷದ ಯುವಕ ಎಂದು ಗುರುತಿಸಿದ್ದು ಅವನ ಫೋಟೋವನ್ನು ಬಿಡುಗಡೆ ಮಾಡಿದೆ.
2022 ರಲ್ಲಿ ಬೆತೆಲ್ ಪಾರ್ಕ್ ಹೈಸ್ಕೂಲ್ ನಿಂದ ಪದವಿ ಪಡೆದ ಯುವಕನು ಹತ್ತಿರದ ಕಟ್ಟಡದ ಮೇಲ್ಛಾವಣಿಯಿಂದ ಟ್ರಂಪ್ ಮೇಲೆ ಅನೇಕ ಗುಂಡುಗಳನ್ನು ಹಾರಿಸಿದ್ದಾನೆ. ನಂತರ ಸೀಕ್ರೆಟ್ ಸರ್ವಿಸ್ ಸ್ನೈಪರ್ ಗಳ ಮೇಲೆ ಗುಂಡಿಕ್ಕಿ ಕೊಂದಿದ್ದಾನೆ. ಅವರ ಶವದ ಬಳಿ ಎಆರ್ -15 ಎಂಬ ಅಸಾಲ್ಟ್ ರೈಫಲ್ ಪತ್ತೆಯಾಗಿದೆ.
ರ್ಯಾಲಿಯಲ್ಲಿ ವ್ಯಕ್ತಿಯೊಬ್ಬ ಮೇಲ್ಛಾವಣಿಗಳ ನಡುವೆ ಚಲಿಸಿ ಬಂದೂಕನ್ನು ಹಿಡಿದು ನಿಂತಿದ್ದ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದು ಅವರು ಭದ್ರತಾ ಅಧಿಕಾರಿಗಳನ್ನು ಎಚ್ಚರಿಸಲು ಪ್ರಯತ್ನಿಸಿದ್ದರು.
ಈ ದಾಳಿಯ ನಂತರ ಕ್ರೂಕ್ಸ್ ಕಾರಿನಲ್ಲಿ ಅನುಮಾನಾಸ್ಪದ ಸಾಧನ ಪತ್ತೆಯಾಗಿದ್ದು, ಬಾಂಬ್ ತಂತ್ರಜ್ಞರು ತಪಾಸಣೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಅಧಿಕಾರಿಗಳು ಅವರ ಫೋನ್ ಅನ್ನು ಪರಿಶೀಲಿಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth