ದೋಣಿ ಮಗುಚಿ ಮೂವರು ಮಕ್ಕಳು ಸೇರಿದಂತೆ 6 ಮಂದಿ ಜಲಸಮಾಧಿ!
ಮಿರ್ಜಾಪುರ: ಉತ್ತರ ಪ್ರದೇಶದ ಗಂಗಾ ನದಿಯಲ್ಲಿ ಬುಧವಾರ ದೋಣಿ ಮಗುಚಿ ಮೂವರು ಮಕ್ಕಳು ಸೇರಿದಂತೆ ಆರು ಜನರು ನಾಪತ್ತೆಯಾಗಿದ್ದು, ದೋಣಿಯಲ್ಲಿ ಒಟ್ಟು 14 ಜನರಿದ್ದರು ಮತ್ತು ಅವರಲ್ಲಿ 8 ಜನರನ್ನು ಸ್ಥಳೀಯರು ರಕ್ಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಖರಾ ಘಾಟ್ ಬಳಿ ನಡೆದ ಘಟನೆಯ ನಂತರ ಮೂವರು ಮಹಿಳೆಯರು ಮತ್ತು ಅನೇಕ ಮಕ್ಕಳು ಕಾಣೆಯಾಗಿದ್ದಾರೆ. ನಾಪತ್ತೆಯಾದವರ ಪೈಕಿ ಜಾರ್ಖಂಡ್ ನ ರಾಂಚಿಯಿಂದ ಬಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ವಿಂಧ್ಯಾಚಲ ಪೊಲೀಸ್ ಠಾಣೆಯ ಹಿರಿಯ ಸಬ್ ಇನ್ಸ್‌ಪೆಕ್ಟರ್ ಅಖಿಲೇಶ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
14 ಮಂದಿ ನದಿಯನ್ನು ದಾಟಲು ಮಧ್ಯಾಹ್ನ ದೋಣಿಯಲ್ಲಿ ತೆರಳುತ್ತಿದ್ದರು. ಈ ವೇಳೆ ದೋಣಿ ಮಗುಚಿತು ಎಂದು ಪಾಂಡೆ ಹೇಳಿದ್ದಾರೆ. ಸ್ಥಳೀಯರು ಅವರಲ್ಲಿ ಎಂಟು ಮಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಆರು ಮಂದಿ ಕಾಣೆಯಾಗಿದ್ದಾರೆ ಮತ್ತು ಅವರನ್ನು ಹುಡುಕಲು ಶೋಧ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಳು…
ಪಕ್ಷ ಯಾವುದೇ ಇರಲಿ, ಮುಂದಿನ ಬಾರಿ ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು | ಜೆಡಿಎಸ್ ಶಾಸಕ ಗೌರಿಶಂಕರ್ ಕರೆ
ಜೆಸಿಬಿ ಅಡಿಗೆ ಸಿಲುಕಿ ಪೌರ ಕಾರ್ಮಿಕ ಸಹಿತ ಇಬ್ಬರು ಸಾವು!
ಲೈಂಗಿಕ ಆಯಾಸ ಪರಿಹಾರ ಸೇರಿದಂತೆ ಹಲವು ಸಮಸ್ಯೆಗಳಿಗೆ ಖರ್ಜೂರದಲ್ಲಿದೆ ಪರಿಹಾರ
ತಾಲಿಬಾನ್ ಉಗ್ರನ ಬಂದೂಕಿಗೆ ಎದೆಯೊಡ್ಡಿದ ಅಫ್ಘಾನಿಸ್ತಾನದ ಮಹಿಳೆಯ ಧೈರ್ಯಕ್ಕೆ ಭೇಷ್ ಎಂದ ನೆಟ್ಟಿಗರು!
ಲಿಫ್ಟ್ ನೀಡುವ ನೆಪದಲ್ಲಿ ಆಹಾರದಲ್ಲಿ ಅಮಲು ಪದಾರ್ಥ ಬೆರೆಸಿ, ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ!
ಶಶಿಕಲಾಗೆ ಮತ್ತೆ ಶಾಕ್: 100 ಕೋಟಿ ರೂಪಾಯಿ ಬೆಲೆ ಬಾಳುವ 11 ಆಸ್ತಿಗಳು ಜಪ್ತಿ
ಸ್ನಾನಕ್ಕೆ ಹೋಗಿ 2 ಗಂಟೆಯಾದರೂ ವಿದ್ಯಾರ್ಥಿನಿ ಮರಳಿ ಬರಲಿಲ್ಲ | ಬಾತ್ ರೂಮ್ ಬಾಗಿಲು ಮುರಿದು ನೋಡಿದಾಗ ಕಾದಿತ್ತು ಶಾಕ್