ಮದುವೆ ಸಮಾರಂಭದ ದೋಣಿ ಮುಳುಗಡೆ 26 ಮಂದಿ ಸಾವು: 27 ಮಂದಿ ನಾಪತ್ತೆ!

pakisthan
20/07/2022

ಪಾಕಿಸ್ತಾನ:  ಮದುವೆ ಸಮಾರಂಭದ ದೋಣಿ ಮುಳುಗಿದ ಪರಿಣಾಮ 26 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದ್ದು, ಘಟನೆಯಲ್ಲಿ ಇನ್ನೂ 27 ಮಂದಿ ನಾಪತ್ತೆಯಾಗಿದ್ದಾರೆ.

ಸೋಮವಾರ ಖೋರ್ ಗ್ರಾಮದಿಂದ ಎರಡು ದೋಣಿಗಳಲ್ಲಿ ಮದುವೆಯ ತಂಡವು ಮದುವೆಗೆ  ಹೋಗಿ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಮೃತರ ಪೈಕಿ  ಇಬ್ಬರು ಮಕ್ಕಳು ಮತ್ತು ಮಹಿಳೆಯರು ಸೇರಿದ್ದಾರೆ.

 ಇದನ್ನೂ ಓದಿ:

ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಶಾಲಾ ಕಟ್ಟಡದಿಂದ ಹಾರಿದ ಬಾಲಕಿ!

ಸುಮಾರು 90 ಮಂದಿಯನ್ನು ಮುಳುಗುಗಾರರು ರಕ್ಷಿಸಿದ್ದು, ಮಿತಿ ಮೀರಿದ ಭಾರದಿಂದ ಮದುವೆಯ ಗುಂಪು ಪ್ರಯಾಣಿಸುತ್ತಿದ್ದ ದೋಣಿಯು ಮಗುಚಿ ಬಿದ್ದಿದೆ ಎಂದು ಹೇಳಲಾಗಿದೆ. ಘಟನೆಯು ಪಂಜಾಬ್–ಸಿಂಧ್ ಗಡಿಯ ಬಳಿ ನಡೆದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version