ಡೊನಾಲ್ಡ್ ಟ್ರಂಪ್ ಮನೆಗೆ ಎಫ್ ಬಿ ಐ ದಾಳಿ: ಹಲವು ದಾಖಲೆಗಳಿಗಾಗಿ ಹುಡುಕಾಟ
ಫ್ಲೋರಿಡಾ: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾರ್-ಎ-ಲಾಗೊ ಎಸ್ಟೇಟ್ ಗೆ ಎಫ್ ಬಿಐ ಏಜೆಂಟ್ ಗಳು ದಾಳಿ ನಡೆಸಿದ್ದು, ಟ್ರಂಪ್ ಮನೆಯಲ್ಲಿ ಹಲವು ದಾಖಲೆಗಳಿಗಾಗಿ ಹುಡುಕಾಟ ನಡೆಸಿದೆ.
ಇದು ಟ್ರಂಪ್ ಅವರ ಕಚೇರಿಯಲ್ಲಿ ಮತ್ತು ಖಾಸಗಿ ವ್ಯವಹಾರದಲ್ಲಿ ಎದುರಿಸುತ್ತಿರುವ ಹಲವಾರು ತನಿಖೆಗಳಲ್ಲಿ ಒಂದಾಗಿದೆ. ನ್ಯಾಯಾಂಗ ಇಲಾಖೆಯು ದಾಳಿಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ.
ಟ್ರಂಪ್ ತನ್ನೊಂದಿಗೆ ಶ್ವೇತಭವನದಿಂದ ಫ್ಲೋರಿಡಾ ಕ್ಲಬ್ ಗೆ ತಂದಿದ್ದ ದಾಖಲೆಗಳ ಬಾಕ್ಸ್ ಗಳಿಗೆ ಸಂಬಂಧಿಸಿದಂತೆ ಹುಡುಕಾಟವು ಕಂಡುಬಂದಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಯಾಕೆ ಟ್ರಂಪ್ ಮೇಲೆ ದಾಳಿ ಮಾಡಿದ್ದಾರೆ ಎಂದು ಬಹಿರಂಗ ಪಡಿಸಿಲ್ಲ. ಸರ್ಕಾರಿ ಏಜೆನ್ಸಿಗಳೊಂದಿಗೆ ಕೆಲಸ ಮಾಡಿದ ಬಳಿಕವೂ ನನ್ನ ಮನೆಯ ಮೇಲಿನ ಈ ಸೂಚನೆ ರಹಿತ ದಾಳಿಯು ಸರಿಯಲ್ಲ ಮತ್ತು ಅದರ ಅಗತ್ಯವಿರಲಿಲ್ಲ. ಅಲ್ಲದೆ ನನ್ನ ಸುರಕ್ಷತೆಯನ್ನೂ ಹಾಳು ಮಾಡಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka