ಮತಾಂತರ, ಗೋಹತ್ಯೆ ನಿಷೇಧ ಕಾಯಿದೆ ಹಿಂಪಡೆಯುವ ದುಸ್ಸಹಾಸ ಬೇಡ: ಪೇಜಾವರ ಶ್ರೀ
ಉಡುಪಿ: ಈ ಹಿಂದಿನ ರಾಜ್ಯ ಸರಕಾರ ಜಾರಿಗೆ ತಂದ ಮತಾಂತರ ನಿಷೇಧ ಹಾಗೂ ಗೋಹತ್ಯೆ ನಿಷೇಧ ಕಾಯಿದೆಯನ್ನು ಹಿಂಪಡೆಯುವ ದುಸ್ಸಾಹಸವನ್ನು ಪ್ರಸಕ್ತ ಸರಕಾರ ಮಾಡಬಾರದು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಈ ಮತಾಂತರ ಹಾವಳಿಯಿಂದ ಒಂದು ಮನೆಯಲ್ಲಿ ತಂದೆ ಮಕ್ಕಳು, ತಾಯಿ ಮಕ್ಕಳು, ಗಂಡ ಹೆಂಡತಿ ಮಧ್ಯೆ ವೈಮನಸ್ಸು ಉಂಟಾಗಿ ಇಡೀ ಕುಟುಂಬವೇ ಛಿದ್ರವಾಗುವ ಪರಿಸ್ಥಿತಿ ಬಂದು ಒದಗಿತ್ತು. ಅದನ್ನು ತಪ್ಪಿಸಲು ಮತಾಂತರ ನಿಷೇಧ ಕಾಯಿದೆ ಜಾರಿಗೆ ತರಲಾಗಿತ್ತು. ಮನೆಗೆ ರಾತ್ರೋರಾತ್ರಿ ನುಗ್ಗಿ ತಲವಾರು ಜಳಪಿಸಿ ಹಸುಗಳನ್ನು ಕದ್ದೊಯ್ಯುತ್ತಿ ದ್ದರು. ಇದನ್ನು ತಡೆಯಲು ಗೋಹತ್ಯೆ ನಿಷೇಧ ಕಾಯಿದೆಯನ್ನು ಕೂಡ ಜಾರಿಗೆ ತರಲಾಗಿತ್ತು.
ಈಗಿನ ಸರಕಾರ ಈ ಎರಡೂ ಕಾಯಿದೆಯನ್ನು ಹಿಂಪಡೆಯುವ ತೀರ್ಮಾನ ಮಾಡಿರುವುದು ಕಳವಳಕಾರಿಯಾಗಿದೆ. ಈ ವಿಷಯದಲ್ಲಿ ಸರಕಾರ ತಮ್ಮ ಜನಪ್ರತಿನಿಧಿಗಳ ಮೂಲಕ ಜನಾಭಿಪ್ರಾಯ ವನ್ನು ರೂಪಿಸಿಕೊಂಡು ಆ ಕಾಯಿದೆಯನ್ನು ಹಿಂಪಡೆಯುವ ದುಸ್ಸಹಾಸಕ್ಕೆ ಕೈ ಹಾಕದೆ ತಟಸ್ಥ ನೀತಿಯನ್ನು ಮುಂದುವರೆಸಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw