ರೇಪ್ ಕೇಸ್ ಹಾಕಬೇಡಿ ಡಿಕೆಶಿ, ನಿಮ್ಮ ನೋಟ ಭಯ ನನಗೆ: ಬಿಜೆಪಿ ಶಾಸಕ ಮುನಿರತ್ನ - Mahanayaka

ರೇಪ್ ಕೇಸ್ ಹಾಕಬೇಡಿ ಡಿಕೆಶಿ, ನಿಮ್ಮ ನೋಟ ಭಯ ನನಗೆ: ಬಿಜೆಪಿ ಶಾಸಕ ಮುನಿರತ್ನ

munirathna d k shivakumar
05/03/2025

ಬೆಂಗಳೂರು: ನನ್ನ ಮೇಲೆ ರೇಪ್ ಕೇಸ್ ಹಾಕಬೇಡಿ, ದಲಿತ ಕಾಯ್ದೆ ದುರುಪಯೋಗ ಮಾಡಿಕೊಂಡು ಅಟ್ರಾಸಿಟಿ ಹಾಕಬೇಡಿ. ಶಿವಕುಮಾರ್ ಅವರೇ ಕೈ ಮುಗಿದು ಕೇಳಿಕೊಳ್ಳುತ್ತೇನೆ, ನಿಮ್ಮ ನೋಟದ ಭಯ ನನಗೆ ಎಂದು ಬಿಜೆಪಿ ಶಾಸಕ ಮುನಿರತ್ನ ಹೇಳಿರುವ ಘಟನೆ  ನಡೆದಿದೆ.

ಬುಧವಾರ ಎಸ್ ಸಿ, ಎಸ್ ಟಿ ಮೀಸಲು ನಿಧಿಗಳ ದುರ್ಬಳಕೆ ಆರೋಪದಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದು, ಫ್ರೀಡಂ ಪಾರ್ಕ್ ಬಳಿ ನಡೆದ ಪ್ರತಿಭಟನೆಯಲ್ಲಿ ಮುನಿರತ್ನ ಮಾತನಾಡುತ್ತಿದ್ದರು.

ಎಲ್ಲ ಕಡೆ ಹಣ ನುಂಗುತ್ತಿದ್ದೀರಾ, ಬಿಬಿಎಂಪಿ ಸಾಲುತ್ತಿಲ್ಲ, ಬಿಡಿಎ ಸಾಲುತ್ತಿಲ್ಲ, ಜಲಮಂಡಳಿ ಸಾಲುತ್ತಿಲ್ಲ ಇನ್ನೆಲ್ಲಿ ಬೇಕು? ಎಸ್ ಸಿ, ಎಸ್ ಟಿ ಹಣ ತಿಂದ್ರೆ ನಿಮಗೆ ಪಾಪ ಬಿಡಲ್ಲ. ಗ್ಯಾರೆಂಟಿಗಳನ್ನು ಸರಿಯಾಗಿ ಕೊಡೋಕೆ ಆಗುತ್ತಿಲ್ಲ, ಗುಂಡಿ ಮಚ್ಚೋಕೆ ಆಗ್ತಾ ಇಲ್ಲ, ಬೆಂಗಳೂರು ಗಬ್ಬೆದ್ದು ಹೋಗಿದೆ, ಕಾಂಗ್ರೆಸ್ ಶಾಸಕರ ಮುಖ ನೋಡಲು ಆಗ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಎಸ್ ಸಿ—ಎಸ್ ಟಿ ಹಣವನ್ನು ಸಿಎಂ ಸಿದ್ದರಾಮಯ್ಯನವರು ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್  ಬೇರೆ ರಾಜ್ಯಗಳಿಗೆ ಕಳುಹಿಸುತ್ತಿದ್ದಾರೆ. ಬೇರೆಯದಕ್ಕೆ ಹಣ ಬಳಸಿಕೊಳ್ಳುತ್ತಿದ್ದಾರೆ ಎಂದು ಮುನಿರತ್ನ ಆರೋಪಿಸಿದರು.

ನನ್ನ ಮೇಲೆ ರೇಪ್ ಕೇಸ್ ಹಾಕಬೇಡಿ, ದಲಿತ ಕಾಯ್ದೆ ದುರುಪಯೋಗ ಮಾಡಿಕೊಂಡು ಅಟ್ರಾಸಿಟಿ ಹಾಕಬೇಡಿ. ಶಿವಕುಮಾರ್ ಅವರೇ ಕೈ ಮುಗಿದು ಕೇಳಿಕೊಳ್ಳುತ್ತೇನೆ, ನಿಮ್ಮ ನೋಟದ ಭಯ ನನಗೆ ಎಂದರು.

 


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ