ಕಾಂಗ್ರೆಸ್ ಗೆ ಮತ ನೀಡಿ ನಿಮ್ಮ ಮತ ವ್ಯರ್ಥ ಮಾಡಬೇಡಿ: ಅಸಾದುದ್ದೀನ್ ಓವೈಸಿ
ಭೋಪಾಲ್: ಕಾಂಗ್ರೆಸ್ ದೇಶದಲ್ಲಿ ನಾಶವಾಗಿದೆ, ಕಾಂಗ್ರೆಸ್ ಗೆ ಮತ ನೀಡಿ ಜನರು ತಮ್ಮ ಮತವನ್ನು ವ್ಯರ್ಥ ಮಾಡಬಾರದು ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿಕೆ ನೀಡಿದ್ದಾರೆ.
ಸಾರ್ವಜನಿಕ ಸಭೆಯೊಂದರಲ್ಲಿ ಭಾಗವಹಿಸಿ ಮಾತನಾಡಿದ ಓವೈಸಿ, ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ದೇಶದಲ್ಲಿ ಕಾಂಗ್ರೆಸ್ ನಿಷ್ಪ್ರಯೋಜಕ ಶಕ್ತಿಯಾಗಿದೆ, ಅದು ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ, ಅದಕ್ಕಾಗಿ ನಿಮ್ಮ ಮತವನ್ನು ವ್ಯರ್ಥ ಮಾಡಬೇಡಿ ಎಂದರು.
ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಓವೈಸಿ, ಭಾರತದ ಭೂಪ್ರದೇಶಕ್ಕೆ ಚೀನಾದ ಒಳನುಗ್ಗುವಿಕೆಯನ್ನು ತಡೆಯಲು ವಿಫಲವಾಗಿದೆ ಎಂದು ಆರೋಪಿಸಿದರು.
ಗಡಿಯತ್ತ ಗಮನಹರಿಸಿ, ಚೀನಾದ ಆಕ್ರಮಣವನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಬೇಕು. ಚೀನಾ ಭಾರತದ ಭೂಮಿಯನ್ನು ರಹಸ್ಯವಾಗಿ ಅತಿಕ್ರಮಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಅಂಬೇಡ್ಕರ್ ಸಮಾಜ ಸೇವಾ ಸಂಘದಿಂದ ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಪ್ರೋತ್ಸಾಹ ಧನ
ಮಂಗಳೂರಿನ ಸಮುದ್ರದಲ್ಲಿ ಮುಳುಗಡೆಯಾದ ಚೀನಾದ ಹಡಗು!
ತಾಯಿ ಮಗಳ ಮೇಲೆ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ: ಕೃತ್ಯದ ಬಳಿಕ ಕಾಲುವೆಗೆ ಎಸೆದ ಪಾಪಿಗಳು
ಮಗುಚಿ ಬಿದ್ದ ಬೈಕ್ ಗೆ ಹತ್ತಿಕೊಂಡ ಬೆಂಕಿ: ಇಬ್ಬರು ಸವಾರರಿಗೆ ತೀವ್ರ ಗಾಯ