ಆಕ್ಸಿಜನ್ ಬಗ್ಗೆ ಅಧ್ಯಯನ ಮಾಡುತ್ತಿದ್ದ ವಿಜ್ಞಾನಿಯೇ , ಆಕ್ಸಿಜನ್ ಸಿಗದೇ ಸಾವು - Mahanayaka
8:49 PM Thursday 6 - February 2025

ಆಕ್ಸಿಜನ್ ಬಗ್ಗೆ ಅಧ್ಯಯನ ಮಾಡುತ್ತಿದ್ದ ವಿಜ್ಞಾನಿಯೇ , ಆಕ್ಸಿಜನ್ ಸಿಗದೇ ಸಾವು

balachandra kakade
08/05/2021

ಕೊಲ್ಹಾಪುರ:  ಆಕ್ಸಿಜನ್ ಬಗ್ಗೆ ಸಂಶೋಧನೆ ಮಾಡಿದ ವಿಜ್ಞಾನಿಯೇ ಕೊರೋನಾ ಸೋಂಕಿಗೊಳಪಟ್ಟಿದ್ದು, ಕೊನೆಯ ಕ್ಷಣದಲ್ಲಿ ಆಕ್ಸಿಜನ್ ಸಿಗದೇ ಮೃತಪಟ್ಟ ದುರಂತ ಸಂಗತಿ ವರದಿಯಾಗಿದೆ.

ವಿಜ್ಞಾನಿ ಡಾ.ಬಾಲಚಂದ್ರ ಕಾಕಡೆ ಅವರು ಮೃತಪಟ್ಟವರಾಗಿದ್ದಾರೆ.  ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಅವರು ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದಾರೆ. ಡಾ.ಬಾಲಚಂದ್ರ ಅವರು,  ಆಕ್ಸಿಜನ್ ಮತ್ತು ಹೈಡ್ರೋಜನ್ ನ್ನು ಇಂಧನವಾಗಿ ರೈಲಿನಲ್ಲಿ ಬಳಸುವ ಕುರಿತ  ಸಂಶೋಧನೆ ಮಾಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಆಕ್ಸಿಜನ್ ಇಲ್ಲದೆಯೇ ಅವರು ಚೆನ್ನೈನ ಕೊವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

44 ವರ್ಷ ವಯಸ್ಸಿನ ಕಾಕಡೆ ಅವರು, ಮೂಲತಃ ಕೊಲ್ಹಾಪುರದವರಾಗಿದ್ದು, ಚೆನ್ನೈ ಎಸ್ ಆರ್ ಎಂ ಇನ್ಸ್ ಟ್ಯೂಟ್ ನಲ್ಲಿ ಸಂಶೋಧಕರಾಗಿದ್ದರು. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮೊದಲ 4 ದಿನಗಳ ಕಾಲ ಮನೆಯಲ್ಲಿಯೇ ಚಿಕಿತ್ಸೆ ಪಡೆದಿದ್ದ ಅವರು, ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರು.

ಶುಕ್ರವಾರ ರಾತ್ರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಾಗಿದ್ದು, 10 ಕೊವಿಡ್ ಸೋಂಕಿತರು ಮೃತಪಟ್ಟಿದ್ದಾರೆ. ಈ ಪೈಕಿ ಡಾ.ಕಾಕಡೆ ಕೂಡ ಒಬ್ಬರಾಗಿದ್ದಾರೆ. ಈ ಸುದ್ದಿಯಿಂದ ಚೆನ್ನೈ ಹಾಗೂ ಕೊಲ್ಹಾಪುರದಲ್ಲಿರುವ ಜನರು ಬೆಚ್ಚಿಬೀಳಿಸಿದೆ.

ಇತ್ತೀಚಿನ ಸುದ್ದಿ