ಹಠಾತ್ ಹೃದಯಾಘಾತಕ್ಕೆ ಕಾರಣ ತಿಳಿಸಿದ ಡಾ.ಸಿ.ಎನ್. ಮಂಜುನಾಥ್ - Mahanayaka
2:29 PM Wednesday 5 - February 2025

ಹಠಾತ್ ಹೃದಯಾಘಾತಕ್ಕೆ ಕಾರಣ ತಿಳಿಸಿದ ಡಾ.ಸಿ.ಎನ್. ಮಂಜುನಾಥ್

dr. cn manjunath
07/11/2023

ಬೆಂಗಳೂರು: ಇತ್ತೀಚೆಗೆ ಮಕ್ಕಳು, ಯುವಕರು ಎನ್ನದೇ ಹಠಾತ್ ಹೃದಯಾಘಾತ ಪ್ರಕರಣಗಳು ದೇಶಾದ್ಯಂತ ಹೆಚ್ಚಾಗುತ್ತಿದೆ. ಕೋವಿಡ್ ಬಳಿಕ ಈ ರೀತಿಯ ಪ್ರಕರಣಗಳು ಹೆಚ್ಚಾಗಿರುವ ಬಗ್ಗೆ ದೇಶಾದ್ಯಂತ ಸಾಕಷ್ಟು ಅನುಮಾನಗಳು ಕೂಡ ಇವೆ. ಈ ನಡುವೆ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಒತ್ತಡ, ಆಹಾರ ಕ್ರಮ, ಬೊಜ್ಜು ಹಾಗೂ ವಾಯುಮಾಲಿನ್ಯದಂತಹ ಕಾರಣಗಳಿಂದಲೂ ಹೃದಯಾಘಾತವಾಗುತ್ತಿದೆ ಎಂದು ಅವರು ಹೇಳಿದ್ದಾರೆ. ವಾಯುಮಾಲಿನ್ಯದಿಂದಲೇ ಶೇ.10ರಷ್ಟು ಜನರಿಗೆ ಹೃದ್ರೋಗ ಸಮಸ್ಯೆ ಕಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಮಾಲಿನ್ಯದ ಅಪಾಯಕಾರಿ ಅಂಶಗಳು ಹೃದಯದ ರಕ್ತನಾಳಗಳ ಕಾಯಿಲೆಗಳಿಗೆ ಪ್ರಮುಖ ಕಾರಣವಾಗುತ್ತಿದೆ. ಅಸ್ತಮಾದಂತಹ ಸಮಸ್ಯೆಗಳು ಉಸಿರಾಟದ ತೊಂದರೆಗಳನ್ನು ಉಂಟು ಮಾಡುತ್ತಿದೆ. 2.5 ಮೈಕ್ರಾನ್ ಗಳಿಗಿಂತ ಕಡಿಮೆಯಿರುವ ಪರ್ಟಿಕ್ಯುಲೇಟ್ ಮ್ಯಾಟರ್ ನಿಂದ ಅಪಾಯ ಎಂದು ಅವರು ಹೇಳಿದ್ದಾರೆ.

ವಾಯು ಮಾಲಿನ್ಯ ಕಾರಣದಿಂದ ಭಾರತದಲ್ಲಿ 22 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ಡಾ.ಸಿ.ಎನ್.ಮಂಜುನಾಥ್ ಅಚ್ಚರಿಯ ವಿಚಾರವೊಂದನ್ನು ತಿಳಿಸಿದರು.

ಇತ್ತೀಚಿನ ಸುದ್ದಿ