ಡಾ.ಡಿ.ವೀರೇಂದ್ರ ಹೆಗ್ಗಡೆ ಜನ್ಮ ದಿನಾಚರಣೆ ಪ್ರಯುಕ್ತ ಶ್ರಮದಾನ, ಸ್ವಚ್ಚತಾ ಅಭಿಯಾನ

ಉಳ್ಳಾಲ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ 75ನೇ ವರ್ಷದ ಜನ್ಮದಿನಾಚರಣೆಯ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ. ಸಿ. ಟ್ರಸ್ಟ್, ಆಶ್ರಯದ ಉಳ್ಳಾಲ ಶೌರ್ಯ ವಿಪತ್ತು ನಿರ್ವಹಣಾ ಘಟಕದ ನೇತೃತ್ವದಲ್ಲಿ ಉಳ್ಳಾಲ ಮಾಸ್ತಿಕಟ್ಟೆ ಶ್ರೀ ಪಾಡಾಂಗರ ಪೂಮಲೆ ಭಗವತಿ ಕ್ಷೇತ್ರದ ಆವರಣವನ್ನು ಶುಚಿಗೊಳಿಸುವ, ಶ್ರಮದಾನ, ಸ್ವಚ್ಚತಾ ಅಭಿಯಾನ ಶುಕ್ರವಾರ ನಡೆಯಿತು.
ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಳ್ಳಾಲ ವಲಯ ಮೇಲ್ವಿಚಾರಕಿ ಜಯಂತಿ, ಉಳ್ಳಾಲ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಪರಮೇಶ್ವರ್, ಉಳ್ಳಾಲ ವಲಯ ಶೌರ್ಯ ವಿಪತ್ತು ನಿರ್ವಹಾಣಾ ಘಟಕ ಸಂಯೋಜಕಿ ಶ್ರೀಮತಿ ರೇಣುಕಾ ಬಿ., ಧರ್ಮ ರಕ್ಷಾ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಸುಷ್ಮಾ ಶರತ್, ತೊಕ್ಕೋಟ್ಟು ಉಳ್ಳಾಲ ವಲಯ ಸೇವಾ ಪ್ರತಿನಿಧಿ ಶ್ರೀಮತಿ ಶಣ್ಮಾ ರವೀಂದ್ರ, ಮೊಗವೀರ ಪಟ್ಣ ಸೇವಾಪ್ರತಿನಿಧಿ ಕಾವ್ಯಶ್ರೀ, ಸುಭಾಷ್ ನಗರ ಸೇವಾಪ್ರತಿನಿಧಿ ರೇವತಿ ವಸಂತ್, ಶ್ರೀ ಚೀರುಂಭ ಭಗವತಿ ಕ್ಷೇತ್ರದ ಗುರಿಕಾರರು ಅಶೋಕ್, ಯೋಗಗುರು ಬಾಳಪ್ಪ ಪೂಜಾರಿ, ಶಂಕರ್ ಉಚ್ಚಿಲ್ ಮತ್ತು ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka