ಹೆಸರಾಂತ ಮಕ್ಕಳ ತಜ್ಞ ಡಾ.ದಿನೇಶ್ ಅವರ ಸ್ಮರಣಾರ್ಥ ಚಾಲ್ಸ್ ಆಂಬುನೆಲ್ಸ್ ನಿಂದ ಉಚಿತ ಸೇವೆ
ಹಾಸನ: ಜಿಲ್ಲೆಯ ಹೆಸರಾಂತ ಮಕ್ಕಳ ತಜ್ಞ, ಸಮಾಜ ಸೇವಕರಾದ ಡಾ.ದಿನೇಶ್ ಅವರ 5ನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಇಂದು ಹಾಸನದಲ್ಲಿ ಚಾಲ್ಸ್ ಆಂಬುನೆಲ್ಸ್ ವತಿಯಿಂದ ಉಚಿತ ಸೇವೆಯನ್ನು ಒದಗಿಸಲಾಗುತ್ತದೆ.
ಡಾ.ದಿನೇಶ್ ಅವರು ತಮ್ಮ ಎಸ್ ಎಸ್ ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮೂಲಕ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಮಾದರಿ ವೈದ್ಯರಾಗಿದ್ದಾರೆ. ಅವರ ಸ್ಮರಣಾರ್ಥವಾಗಿ ಇಂದು ಚಾಲ್ಸ್ ಆಂಬುಲೆನ್ಸ್ ಹಾಸನ ಉಚಿತ ಸೇವೆಯನ್ನು ನೀಡುತ್ತಿದೆ.
ಡಾ.ದಿನೇಶ್ ಅವರು ತಮ್ಮ ಆಸ್ಪತ್ರೆಯಲ್ಲಿ ಬಡ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದರು. ಹಣ ನೀಡದಿದ್ದರೂ ಚಿಕಿತ್ಸೆ ನೀಡುವ ಮೂಲಕ ವೈದ್ಯರು ದೇವರ ಸಮಾನ ಎನ್ನುವ ಮಾತಿಗೆ ಅರ್ಥ ತಂದುಕೊಟ್ಟವರಾಗಿದ್ದಾರೆ. ಚಿಕಿತ್ಸೆ ಬಂದ ಬಡವರಿಗೆ ಮನೆಗೆ ತೆರಳಲು ಹಣ ಇಲ್ಲದಿದ್ದಾಗ ಬಸ್ ಚಾರ್ಜ್‌ಗೆ ಹಣ ನೀಡುವ ಮೂಲಕ ಮಾನವೀಯತೆ ಮೆರೆದವರಾಗಿದ್ದಾರೆ.
ಹಲವಾರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಡಾ.ದಿನೇಶ್ ನೆರವಾಗುತ್ತಿದ್ದರು. ಅವರು ನಿಧನರಾದ ಬಳಿಕವೂ ಅವರ ಸಾಮಾಜಿಕ ಕಾರ್ಯಗಳು ನಡೆಯುತ್ತಿವೆ. ಇಂದಿಗೂ ಅವರ ಹೆಸರಿನಲ್ಲಿ ಸಾಮಾಜಿಕ ಕಾರ್ಯಗಳು ನಡೆಯುತ್ತಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಬಿಜೆಪಿ ಶಾಸಕ ಅನಿಲ್ ಬೆನಕೆಯಿಂದ ಕೋವಿಡ್ ನಿಯಮ ಉಲ್ಲಂಘನೆ: ಪ್ರಕರಣ ದಾಖಲು
ಬ್ರಹ್ಮಾವರ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು
ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು: ದಕ್ಷಿಣ ಕನ್ನಡದ 5 ಶಾಲೆ, 1 ಪಿಯು ಕಾಲೇಜು ಸ್ಥಗಿತ
ಯುವಕನನ್ನು ನಗ್ನಗೊಳಿಸಿ ಹಲ್ಲೆ: ಬೆಳ್ಳಾರೆ ಠಾಣೆ ಪೊಲೀಸರ ವಿರುದ್ಧ ಗಂಭೀರ ಆರೋಪ