ಗಡ್ಡದ ಬಗ್ಗೆ ಗುಡ್ಡದಷ್ಟು ಬರೆದ ಡಾ.ಕೂಡ್ಲೂರು ವೆಂಕಟಪ್ಪ - Mahanayaka

ಗಡ್ಡದ ಬಗ್ಗೆ ಗುಡ್ಡದಷ್ಟು ಬರೆದ ಡಾ.ಕೂಡ್ಲೂರು ವೆಂಕಟಪ್ಪ

dammapriya
13/04/2025

  • ದಮ್ಮಪ್ರಿಯ, ಬೆಂಗಳೂರು

ಕನ್ನಡ ಸಾಹಿತ್ಯಕ್ಕೆ ಒಂದು ವಿಶಿಷ್ಟವಾದಂತಹ ತಾಕತ್ತಿದೆ ಎಂದು ಪದೇಪದೇ ಕನ್ನಡ ಸಾಹಿತ್ಯ ಜಗತ್ತು ನಿರೂಪಿಸಿಕೊಳ್ಳುತ್ತಿರುತ್ತದೆ, ಒಂದು ಬೆಂಕಿ ಕಡ್ಡಿಯಿಂದ ಹಿಡಿದು ಇಡೀ ಜಗತ್ತಿನ ಇತಿಹಾಸವನ್ನೇ ಮುಖ್ಯ ವಿಷಯವನ್ನಾಗಿಸಿಕೊಂಡು ಕನ್ನಡ ಸಾಹಿತ್ಯ ಸೃಷ್ಟಿಯಾಗಿರುವುದು ಬಹಳ ಹೆಮ್ಮೆಯ ವಿಚಾರ. ಕನ್ನಡ ಸಾಹಿತ್ಯವನ್ನು ಇತರೆ ಸಾಹಿತ್ಯಗಳಿಗೆ ಹೋಲಿಸಿದಾಗ ಬಹಳ ವಿಶಿಷ್ಟವಾದದ್ದು, ಮತ್ತು ವಿಭಿನ್ನವಾದದ್ದು ಎನಿಸುತ್ತದೆ.


Provided by

ಕೆಲವರು ಪ್ರಕೃತಿಯನ್ನು, ಇನ್ನು ಕೆಲವರು ಪ್ರೀತಿ ಪ್ರೇಮಗಳನ್ನು, ಸ್ನೇಹವನ್ನು, ಹೆಣ್ಣನ್ನು ಮುಖ್ಯ ವಿಷಯವನ್ನಾಗಿಸಿ, ಸಾಮಾಜಿಕ ಪಿಡುಗುಗಳನ್ನು, ಶೈಕ್ಷಣಿಕ ವಿಚಾರಗಳನ್ನು, ಸಮಾಜದ ಅಸಮಾನತೆಯನ್ನು, ಕುರಿತು ಸಾಹಿತ್ಯ ರಚಿಸಿದರೆ, 90ರ ದಶಕದಲ್ಲಿ ಇಲ್ಲೊಬ್ಬ ಕವಿಯು ತನ್ನ ಗಡ್ಡವನ್ನೇ ಕಾವ್ಯದ ವಸ್ತುವಿಷಯವನ್ನಾಗಿಸಿಕೊಂಡು, ಇಡೀ ಸಮಾಜವನ್ನು ಪ್ರಶ್ನಿಸುವ ಸಾಹಿತ್ಯ ರಚನೆ ಮಾಡಿರುವುದು ಬಹಳ ವಿಶೇಷ ಎನಿಸುತ್ತದೆ.

ತನ್ನ ಗಡ್ಡವನ್ನೇ ಗುಡ್ಡದಷ್ಟು ದೊಡ್ಡದು ಮಾಡಿ ರಾಜ್ಯ ಪ್ರಶಸ್ತಿ ಗಿಟ್ಟಿಸುವಷ್ಟು ತಾಕತ್ತಿರುವ ಕವನವನ್ನು ಬರೆದ ಕವಿ ಕತೆಗಾರ ಶ್ರೀಯುತ ಡಾ. ಕೂಡ್ಲೂರು  ವೆಂಕಟಪ್ಪ ನವರು. ತನ್ನ “ಗಡ್ಡ ನನ್ನದು”  ಕವಿತೆಯನ್ನು ತಾನೇ ಓದಿ ಎಲ್ಲರ ಮುಂದೆ ಹಸನ್ಮುಖಿಯಾಗಿ ನಗುವುದನ್ನು ಒಮ್ಮೊಮ್ಮೆ ನೋಡಿದರೆ, ಅವರನ್ನು ನೋಡಿದ ಪ್ರತಿಯೊಬ್ಬ ಓದುಗನು, “ಹೌದು ಸರ್ ನಿಮ್ಮದೇ ಗಡ್ಡ” ಎಂದು ಮತ್ತೆ ಚುಡಾಯಿಸಿ ನಗುವಂತೆ ಮಾಡುತ್ತದೆ. ಹಾಗಿದೆ ಇವತ್ತಿಗೂ ಅವರ ಗಡ್ಡ ಸಿರಿ, ಅದಕ್ಕೆ ಕವಿಗಳು ಬಹಳ ಧೈರ್ಯದಿಂದ “ಗಡ್ಡ ನನ್ನದು” ಕವಿತೆ ಬರೆದಿರಬಹುದು ಎನಿಸುತ್ತದೆ.


Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by <
Provided by
Provided by
Provided by
Provided by

“ಗಡ್ಡ ನನ್ನದು” ಕವಿತೆಗೆ 1990ರಲ್ಲಿ ರಾಜ್ಯಮಟ್ಟದ ಉದಯೋನ್ಮುಖ ಕವಿಗಳ ಎರಡನೇ ಪ್ರಶಸ್ತಿಯನ್ನು ಪಡೆದಿರುವುದನ್ನು ಗಮನಿಸಿದಾಗ ಗಡ್ಡಕ್ಕೂ ಇಷ್ಟು ಮಹತ್ವವಿದೆಯಾ ಎನ್ನುತ್ತದೆ ಓದುಗ ಬಳಗ .

ಈಗ ಗಡ್ಡದ ಹಿಂದಿರುವ ಗುಡ್ಡದಷ್ಟು ಗಾತ್ರದ ವಿಚಾರಗಳನ್ನು ಒಮ್ಮೆ ಅವಲೋಕಿಸಿದರೆ ಗಡ್ಡದ ಬಗ್ಗೆ ಮಾತನಾಡುವುದು ಬಹಳ ಕಷ್ಟ ಅನಿಸುತ್ತದೆ, ನಾಡಿನ ಸಾಂಸ್ಕೃತಿಕ ಜಗತ್ತಿನಲ್ಲಿ ಗಡ್ಡ ಬಿಟ್ಟವನ ಹಿಂದೆ ಒಂದು ಕಾರಣವಿರುತ್ತದೆ ಎನ್ನುವುದು ಜಾನಪದರ ನಂಬಿಕೆ.

ಆದರೆ ಕವಿಯ ಸಂವೇದನೆ ಹೇಗಿದೆ ಎಂದರೆ ತನ್ನ ಕವನದ ಕೊನೆಯಲ್ಲಿ  ನನ್ನ ಗಡ್ಡದ ವಿಚಾರವನ್ನು  ಯಾಕಿಷ್ಟು ಗುಡ್ಡ ಮಾಡುತ್ತಿದ್ದಾರೆ, ಇವರಿಗೆ ಯೋಚಿಸಲು ಬೇರೆ ಕೆಲಸವಿಲ್ಲವೇ ಎನ್ನುವುದನ್ನು ಗಮನಿಸಬಹುದು. ಕವಿಯ ಪಾಲಿಗೆ ಗಡ್ಡ ಕೇವಲ ತನಗೆ ಸ್ವಂತದ್ದು. ಆದರೆ ಜಾನಪದ ಜಗತ್ತಿಗೆ ಅದರ ಹಿಂದೆ ಒಂದು ಮುಖ್ಯ ಕಾರಣವೇ  ಅಡಗಿರುತ್ತದೆ ಎನ್ನುವುದು “ಗಡ್ಡ ನನ್ನದು” ಕವಿತೆ ಬರೆದ ನಂತರವೇ ಬರಹಗಾರರಿಗೂ ಅರಿವಾದದ್ದು.

ಗಡ್ಡ ನನ್ನದು ಅಷ್ಟೇ ಅಲ್ಲ
ನನ್ನ ಸ್ವಂತದ್ದು ದಡ್ಡ ಇವರೇಕೆ
ಪ್ರಶ್ನೆಸುತ್ತಾರೆ ಹೀಗೆ…..?

ಕವಿಯ ಈ ಸಾಲಿನಲ್ಲಿ ನನ್ನ ಸ್ವತಂತ್ರವನ್ನು ಪ್ರಶ್ನಿಸುತ್ತಿರುವ, ಸಮಾಜ ನಮ್ಮೊಟ್ಟಿಗೆ ಇದೆ. ಅಂತಹ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ ಎನ್ನುವ ಅರಿವನ್ನು ತೋರಿಸುತ್ತಾರೆ. ನಾನು ಬಿಟ್ಟಿರುವ ಗಡ್ಡವನ್ನು ಪ್ರಶ್ನಿಸುವ ಹಕ್ಕು ಇವರಿಗೇಕೆ ? ಇದನ್ನೇಕೆ ಗುಡ್ಡದಷ್ಟು ವಿಷಯವನ್ನಾಗಿ ಮಾಡಿ ಪ್ರಶ್ನಿಸುತ್ತಿದ್ದಾರೆ ? ಸಮಾಜದಲ್ಲಿ ಪ್ರಶ್ನಿಸಬೇಕಾದ ಹಲವಾರು ಸಮಸ್ಯೆಗಳಿರುವಾಗ ನನ್ನ ಗಡ್ಡದ ಬಗ್ಗೆ ಇವರಿಗೆ ಏಕೆ ಇಷ್ಟೊಂದು ಪ್ರಶ್ನೆಗಳು ಎನ್ನುವಂತೆ ಕವಿ ಪ್ರಶ್ನಿಸುತ್ತಿದ್ದಾರೆ.

ನಿನ್ನ ಗಡ್ಡ ಭಾರಿ ಗಡ್ಡ
ಅದನೇಕೆ ಬಿಟ್ಟೆ ಎಡ್ಡ
ಆಗುತ್ತೀಯಾ ಗುಡ್ಡ
ಎಂದೆಲ್ಲ ಅಡ್ಡ ಪ್ರಶ್ನೆಗಳನ್ನಾಕುತ್ತಾರೆ….?

ಪರೀಕ್ಷೆ ಕಟ್ಟಿರುವೆಯಾ….? ಎಂದ ಒಬ್ಬ,
ಹೆಂಡತಿ ಬಸುರಿಯೇ…? ಎಂದ ಇನ್ನೊಬ್ಬ,
ಗಂಡು ಮಗುವಾಗಲೆಂದೆ…? ಎಂದ ಮತ್ತೊಬ್ಬ,
ದೇವರಿಗೆ ಮುಡಿಯೇ….? ಎಂದ ಮಗದೊಬ್ಬ

ನಮ್ಮ ಸುತ್ತಲಿನ  ಜನಪದ ಜಗತ್ತು  ಹೇಗೆ ತನ್ನದಲ್ಲದ ಕೆಲವು ಮೂಡನಂಬಿಕೆಗಳನ್ನ ನನ್ನದು ಎನ್ನುವಂತೆ ಬಿಂಬಿಸುತ್ತಿದ್ದಾರೆ ಎನ್ನುವುದನ್ನು ಕವಿ ಪ್ರಶ್ನಿಸುತ್ತ, ಅಂತಹ ಪ್ರಶ್ನೆಗಳಿಂದ ಆಶ್ಚರ್ಯ ಪಡುತ್ತಾ ತನ್ನ ಕವಿತೆಯಲ್ಲಿ ಸಾಮಾನ್ಯ ಜನರ ಮನಸ್ಥಿತಿಯನ್ನು ಬಿಚ್ಚಿಡುತ್ತಾರೆ. ಹಿಂದಿನ ಕಾಲದಲ್ಲಿ ಸಾಮಾನ್ಯ ಜನರು ತನ್ನ ಮಗ ಪರೀಕ್ಷೆಯ ಸಮಯದಲ್ಲಿ ಗಡ್ಡ ಗೀಚಿಕೊಳ್ಳುವುದಕ್ಕೂ ಸಮಯವಿಲ್ಲದೆ ಓದುತ್ತಿದ್ದ ಪರಿಯನ್ನ , ತನ್ನ ಹೆಂಡತಿ ಬಸುರಿಯಾದರೆ ಮಗು ಹುಟ್ಟುವವರೆಗೂ, ಹೆಂಡತಿ ಮಗು ಚೆನ್ನಾಗಿರಲೆಂದು ಹರಕೆ ಹೊತ್ತು ಗಡ್ಡ ಮೀಸೆಗಳನ್ನು ಬೋಳಿಸದೆ ಹಾಗೆಯೇ ಬಿಡುತ್ತಿದ್ದ ಸಂಪ್ರದಾಯ ಜಗತ್ತನ್ನು ಕವಿ ತನ್ನ ಕವಿತೆಯಲ್ಲಿ ತಿಳಿಸಿದ್ದಾರೆ.

“ನಾನವರಿಗೆ ಮುತ್ತು ಕೊಟ್ಟಿಲ್ಲ
ಮತ್ತೆ ಚುಚ್ಚಿಸಲಿಲ್ಲ….
ಆದರೂ ಏಕೆ ಪ್ರಶ್ನಿಸಬೇಕು
ಗಡ್ಡ ನನ್ನದು…..”

ಕವಿಗಿರುವ ಬಹುದೊಡ್ಡ ಸಿಟ್ಟು ಕೋಪ ಎಂದರೆ ನನ್ನ ಗಡ್ಡ ಮೀಸೆಗಳು ಯಾರಿಗೂ ಚುಚ್ಚಲಿಲ್ಲ, ಯಾಕೆಂದರೆ ನಾನು ಯಾರಿಗೂ ಒತ್ತಾಯಪೂರ್ವಕವಾಗಿ ಮುತ್ತು ಕೊಟ್ಟವನಲ್ಲ. ಅದರಿಂದ ಯಾರು ಕಸವಿಸಿಯಾದ ಪ್ರಸಂಗವೇ ಇಲ್ಲ. ಆದರೂ ನನ್ನ ಗಡ್ಡದ ಬಗ್ಗೆ  ಇವರಿಗೆ ಈ ರೀತಿಯ ಪ್ರಶ್ನೆಗಳು ಏಕೆ ಹುಟ್ಟುತ್ತಿವೆ ? ಹಲವಾರು ಸಮಸ್ಯೆಗಳು ಈ ಸಮಾಜದಲ್ಲಿ ತಾಂಡವಡುತ್ತಿರುವಾಗ ಈ ಗಡ್ಡದ ಸುದ್ದಿ ಯಾಕೆ ಎನ್ನುವುದರ ಹಿಂದೆ ಕವಿ ಜನರನ್ನು ಜಾಗೃತಿಯ ಸಮಾಜದ ಕಡೆಗೆ ಚಿಂತಿಸಿ ಎಚ್ಚರವಹಿಸುವಂತೆ ಮಾತನಾಡುತ್ತಾರೆ.

ಬೋಳಿಸಲಿಕ್ಕೆ ಕಾಸಿಲ್ಲವೆಂದು
ಅವರ್ಯಾರನ್ನು ಕೇಳಿಲ್ಲ
ಅವರ್ಯಾಕೆ ಕೇಳಬೇಕು
ಗಡ್ಡ ನನ್ನದು……?

ಕವಿಗಿರುವ ಸ್ವಾಭಿಮಾನವನ್ನು ಈ ಸಮಾಜ ಬೇರೆಯಾಗಿ ನೋಡಿ ಪ್ರಶ್ನೆಸುತ್ತಿದೆ. ನನ್ನಿಚ್ಚೆಯಂತೆ ನಾನು ಬದುಕಲು ಬಿಡುತ್ತಿಲ್ಲಾ, ನನಗೂ ಸ್ವಾಭಿಮಾನ, ಸ್ವಾತಂತ್ರ್ಯವಿದೆ, ನಾನು ಇವರ ಮುಂದೆ ಬೇಡಿ ಕುಳಿತವನಲ್ಲ, ಇವರಿಗ್ಯಾಕೆ ನನ್ನ ಗಡ್ಡದ ವಿಚಾರ, ಗಡ್ಡ ನನ್ನದು.

ನನ್ನ ಗಡ್ಡದ ಬಗ್ಗೆ
ತಲೆಕೆಡಿಸಿಕೊಳ್ಳುವ  ಇವರು
ಸಮಯ ಹಾಳುಮಾಡುವುದರ ಬಗ್ಗೆ,
ಇನ್ನಾದರೂ ಯೋಚಿಸಬೇಡವೇ….?

ಈ ಸಾಲುಗಳು ಇಂದಿಗೂ ಬಹಳ ಮುಖ್ಯವಾದವುಗಳು 90ರ ದಶಕದ  ಈ ಕವಿಯ ಬರಹ ಮತ್ತು ತನ್ನಿಚ್ಚೆಯಂತೆ ಬದುಕುವ ಮನಸ್ಸು ಇವತ್ತಿಗೂ ಪ್ರಸ್ತುತವೆನಿಸುತ್ತದೆ. ಕವಿಯ ದೂರ ದೃಷ್ಟಿಯ ಸಮಾಜಪರ ಚಿಂತನೆಗಳು ಈ ಸಾಲುಗಳಲ್ಲಿ ಬಹಳ ಗಂಭೀರವಾಗಿವೆ. ಒಂದು ಗಡ್ಡದ ವಿಚಾರವನ್ನು ಗುಡ್ಡದಷ್ಟು ಬರೆದ ಕವಿಗೆ ನನ್ನ ಗಡ್ಡದಲ್ಲಿ ಇಂತಹ ಗುಡ್ಡದಷ್ಟು ವಿಚಾರವಿದೆ ಎನ್ನುವುದನ್ನು, ಜಾನಪದ ಜಗತ್ತಿನ ಒಳಗಿರುವ ನಂಬಿಕೆಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ.

ಹಾಗೆಯೇ ಇಂದಿಗೂ ಸಮಾಜದಲ್ಲಿ ಮುಖ್ಯವಾಗಿ ಚರ್ಚಿಸಬೇಕಾದ, ಬಗೆಹರಿಸಬೇಕಾದ, ತಲುಪಿಸಬೇಕಾದ ಸವಲತ್ತುಗಳನ್ನು, ಸಾಮಾನ್ಯ ಜನರಿಗೆ ಒದಗಿಸಬೇಕಾದ ಹಲವಾರು ಸಮಸ್ಯೆಗಳು ಇಂದಿಗೂ ತಾಂಡವವಾಡುತ್ತಿದ್ದರು, ಇಂದಿನ ಮುಖ್ಯವಾಹಿನಿಯಲ್ಲಿರುವ ರಾಜಕೀಯ ನಾಯಕರುಗಳು, ಬರಹಗಾರರು, ಚಿಂತಕರು, ಇತರೆ ಧರ್ಮ ಪ್ರಚಾರಕರು, ಸ್ವಾಮೀಜಿಗಳು ಎಲ್ಲರೂ ಮುಖ್ಯ ವಿಚಾರಗಳನ್ನ ಬದಿಗೊತ್ತಿ, ಜನರಿಗೆ ಅಗತ್ಯವಿಲ್ಲದ ವಿಚಾರಗಳ ಕಡೆಗೆ ಗಮನಹರಿಸುವಂತೆ ಮಾಧ್ಯಮಗಳ ಮೂಲಕ ದಿಕ್ಕು ತಪ್ಪಿಸುತ್ತಿರುವುದನ್ನು ಕವಿ ಮನಸ್ಸು , 90ರ ದಶಕದಲ್ಲಿಯೇ ಸೂಕ್ಷ್ಮವಾಗಿ ಪ್ರಶ್ನೆ ಮಾಡಿರುವುದನ್ನು ಗಮನಿಸಬಹುದಾಗಿದೆ.

ಕೇವಲ ಒಂದು ಗಡ್ಡದ ವಿಚಾರವನ್ನು ಗುಡ್ಡದ ವಿಚಾರವನ್ನಾಗಿ ಬೆಳೆಸುವ ಮೂಲಕ ಈ ಸಮಾಜಕ್ಕೆ, ತನ್ನೊಳಗಿರುವ ಹಲವಾರು ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಲು ಬೇಕಾದಷ್ಟು ವಿಚಾರಗಳಿವೆ, ಅವುಗಳ ಕಡೆಗೆ ಗಮನಹರಿಸಬೇಕೆಂದು, ಮೂಢನಂಬಿಕೆಯ ವಿಚಾರಗಳ ಕಡೆಗೆ ಗಮನ ಕೊಡುವ ಬದಲು ವೈಜ್ಞಾನಿಕವಾಗಿ ಚಿಂತಿಸಬೇಕೆಂದು ಬರೆದಿರುವ ಈ ಕವಿತೆ “ಗಡ್ಡ ನನ್ನದು” ಈ ಕವಿತೆ ಸಾಮಾಜಿಕ ಬದಲಾವಣೆಗೆ ಇವತ್ತಿಗೂ ಪ್ರಸ್ತುತ ಎನಿಸುತ್ತದೆ.  ಈ ಕವಿತೆಯನ್ನು ಬರೆದ ಉದಯೋನ್ಮುಖ ಕವಿಗಳು ಇಂದಿನ ಪ್ರಸ್ತುತ ಸಾಹಿತ್ಯ ಚಿಂತಕರು ಆದಂತಹ ಶ್ರೀಯುತ ಡಾ. ಕೂಡ್ಲೂರು ವೆಂಕಟಪ್ಪನವರಿಗೆ ತುಂಬು ಹೃದಯದ ಧನ್ಯವಾದಗಳು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ