ರಿಷಬ್ ಶೆಟ್ಟಿಯನ್ನು ಹೊಗಳಿ, ಪುನೀತ್ ರಾಜ್ ಕುಮಾರ್ ವಿರುದ್ಧ ಕಿಡಿಕಾರಿದ ಆರೆಸ್ಸೆಸ್ ಕಾರ್ಯಕರ್ತೆ!
ಡಾ.ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್ ಸೇರಿದಂತೆ ಇಡೀ ಕುಟುಂಬ ಎಷ್ಟೋ ಕುಟುಂಬಗಳಿಗೆ ಉದ್ಯೋಗ ನೀಡುತ್ತಿದೆ. ತಮ್ಮ ಸ್ವಂತ ಪ್ರೊಡಕ್ಷನ್ ಮೂಲಕ ಎಷ್ಟೋ ಕಲಾವಿದರನ್ನು ಪರಿಚಯಿಸಿದ್ದಾರೆ. ಎಷ್ಟೋ ಯುವ ಪ್ರತಿಭೆಗಳಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಅವರಂತೂ ರಾಜ್ಯದ ಜನತೆಗೆ ನೀಡಿದ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ ಇಂತಹ ಪುನೀತ್ ರಾಜ್ ಕುಮಾರ್ ವಿರುದ್ಧ ಆರೆಸ್ಸೆಸ್ ಕಾರ್ಯಕರ್ತೆಯೊಬ್ಬರು ಟ್ವಿಟ್ಟರ್ ನಲ್ಲಿ ಮನಸ್ಸಿಗೆ ತೋಚಿದಂತೆ ಬರೆದು ವಿಕೃತಿ ಮೆರೆದಿರುವ ಘಟನೆ ನಡೆದಿದೆ.
ಆರೆಸ್ಸೆಸ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಫಾಲೋವರ್ ಎಂಬ ಜ್ಯೋತಿ ಸುಪರ್ಣಾ ಚಿಂಚೋಳಿ(Jyoti Suparna Chincholi) ಟ್ವಿಟ್ಟರ್ ಖಾತೆಯಲ್ಲಿ ಡಾ.ರಾಜ್ ಕುಮಾರ್ ಕುಟುಂಬ ಮತ್ತು ಪುನೀತ್ ರಾಜ್ ಕುಮಾರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲಾಗಿದೆ. ಟ್ವೀಟ್ ನಲ್ಲಿ ಬಾಲಿವುಡ್ ನಲ್ಲಿ ಕರಣ್ ಜೋಹರ್ ಇರುವ ರೀತಿ, ಕರ್ನಾಟಕದಲ್ಲಿ ಡಾ.ರಾಜ್ ಕುಮಾರ್ ಅವರ ನೆಪೋಕಿಡ್ಸ್ ದೇವರಿದ್ದಂತೆ. ಯಾರಾದರೂ ಸ್ಯಾಂಡಲ್ ವುಡ್ ನಲ್ಲಿ ಉಳಿಯಬೇಕಾದರೆ ಇವರಿಗೆ ಸಲಾಂ ಹೊಡೆಯಬೇಕು. ರಿಷಬ್ ಶೆಟ್ಟಿ ಕೂಡ ಪುನೀತ್ ರಾಜ್ ಕುಮಾರ್ ಅವರಿಗೆ ಈ ಪಾತ್ರವನ್ನು ನೀಡಿದ್ದೆ ಎಂದು ಹೇಳಬೇಕಾಯಿತು ಎಂದು ಟ್ವೀಟ್ ಮಾಡಿದ್ದಾರೆ.
ಪುನೀತ್ ನಿಧನದಿಂದ ನನಗೆ ಬೇಸರ ಆಗಿದೆ. ಆದರೆ, ವಾಸ್ತವ ಏನೆಂದರೆ, ಪ್ರತಿಭಾವಂತ ನಟ, ನಿರ್ದೇಶಕ, ಬರಹಗಾರ ರಿಷಬ್ ಶೆಟ್ಟಿ ಅವರು ಸ್ಯಾಂಡಲ್ ವುಡ್ ನಲ್ಲಿ ದಶಕಗಳ ಕಾಲ ಕಷ್ಟಪಡಬೇಕಾಯಿತು. ದಶಕದ ಹಿಂದೆಯೇ ಅವರು ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದು ಕನ್ನಡಿಗರು ಹೆಮ್ಮೆ ಪಡುವಂತೆ ಮಾಡುತ್ತಿದ್ದರು ಎಂದು ಟ್ವೀಟ್ ಮಾಡಿದ್ದಾರೆ.
ಪ್ರಾಮಾಣಿಕವಾಗಿ ಹೇಳಿ ಪುನೀತ್ ಗೆ ಈ ಪಾತ್ರ ಮಾಡಲು ಸಾಧ್ಯವಾಗುತ್ತಿತ್ತಾ? ದೈವಾರಾಧನೆ ಮತ್ತು ಬೂತಕೋಲದಲ್ಲಿ ರಿಷಬ್ ಅವರ ಮೂಲ ಸಂಸ್ಕೃತಿ ಆಗಿರುವುದರಿಂದ ಅವರಿಗೆ ಈ ದೈವಿ ಪರ್ಫಾರ್ಮೆನ್ಸ್ ನೀಡಲು ಸಾಧ್ಯವಾಯಿತು ಎಂದಿದ್ದಾರೆ.
ರಿಷಬ್ ಶೆಟ್ಟಿ ಅವರನ್ನು ಹೊಗಳುವ ಭರದಲ್ಲಿ ಜ್ಯೋತಿ ಅವರು ಪುನೀತ್ ರಾಜ್ ಕುಮಾರ್ ಹಾಗೂ ಕುಟುಂಬಸ್ಥರ ವಿರುದ್ಧ ಈ ರೀತಿಯ ಶಬ್ದಗಳನ್ನು ಬಳಸಿದ್ದಾರೆ.
https://twitter.com/yamini_jyoti/status/1588553224923271168?s=20&t=21K-KBxLbbHiVTsQVA1wyw
https://twitter.com/yamini_jyoti/status/1588554788819853312?s=20&t=21K-KBxLbbHiVTsQVA1wyw
https://twitter.com/yamini_jyoti/status/1588554029688578049?s=20&t=21K-KBxLbbHiVTsQVA1wyw
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka