ವಿಶೇಷ ಮಕ್ಕಳೊಂದಿಗೆ ಡಾ. ಶಿಂಧೆ ಜನ್ಮದಿನ ಆಚರಣೆ
ಔರಾದ್ : ನಿವೃತ್ತ ಮುಖ್ಯಮಂತ್ರಿಗಳ ಅಪರ ಕಾರ್ಯದರ್ಶಿ, ಕಾಂಗ್ರೆಸ್ ಮುಖಂಡ ಡಾ. ಭೀಮಸೇನರಾವ ಶಿಂಧೆ ಅವರು ಬುಧವಾರ ತಮ್ಮ 67ನೇ ಹುಟ್ಟುಹಬ್ಬವನ್ನು ಪಟ್ಟಣದ ಶ್ವೇತಾ ಮಹಿಳಾ ವಿಕಾಸ ಸಮಿತಿಯ ಅಮೂಲ್ಯ ವಿಶೇಷ ಮಕ್ಕಳ ವಸತಿ ಶಾಲೆಯಲ್ಲಿ ಮಕ್ಕಳಿಂದ ಕೇಕ್ ಕತ್ತರಿಸಿ, ಅವರಿಗೆ ಹಣ್ಣು ಹಂಪಲು, ಸಿಹಿ ವಿತರಿಸುವ ಮೂಲಕ ವಿಶೇಷವಾಗಿ ಆಚರಿಸಿಕೊಂಡರು. ಡಾ.ಭೀಮಸೇನರಾವ ಶಿಂಧೆ ಅವರ ಅಭಿಮಾನಿಗಳ ಬಗಳದಿಂದ ಏರ್ಪಡಿಸಿದ್ದ, ಹುಟ್ಟುಹಬ್ಬವನ್ನು ಡಾ.ಶಿಂಧೆ ಬುದ್ಧಿಮಾಂದ್ಯ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡರು.
ಈ ವೇಳೆ ಮಾತನಾಡಿದ ಕಾರ್ಯಕರ್ತರು ಡಾ.ಭೀಮಸೇನರಾವ ಶಿಂಧೆ ಅವರು ತಹಶೀಲ್ದಾರ, ಜಿಲ್ಲಾಧಿಕಾರಿ, ಮುಖ್ಯಮಂತ್ರಿಗಳ ಅಪರ ಕಾರ್ಯದರ್ಶಿ ಸೇರಿದಂತೆ ಅನೇಕ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಬಡವರ ಪರ ಅನೇಕ ಕೆಲಸಗಳು ಮಾಡಿದ್ದಾರೆ. ತಮ್ಮ ರಾಜಕೀಯ ಜೀವನದಲ್ಲಿ ಎಲ್ಲ ವಿಚಾರದಲ್ಲೂ ಸಮತೋಲನ ಕಾಯ್ದುಕೊಳ್ಳುವ ಮೂಲಕ ಪ್ರಬುದ್ಧ ರಾಜಕಾರಣಿಯಾಗಿದ್ದಾರೆ. ಶಿಂಧೆ ಅವರ ಹುಟ್ಟುಹಬ್ಬವನ್ನು ವಿಶೇಷ ಮಕ್ಕಳೊಂದಿಗೆ ಆಚರಣೆ ಮಾಡುತ್ತಿರುವುದು ಔಚಿತ್ಯಪೂರ್ಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ನಿವೃತ್ತ ಮುಖ್ಯಮಂತ್ರಿಗಳ ಅಪರ ಕಾರ್ಯದರ್ಶಿ, ಕಾಂಗ್ರೆಸ್ ಮುಖಂಡ ಡಾ. ಭೀಮಸೇನರಾವ ಶಿಂಧೆ ನಾನು ಪ್ರಸಕ್ತ ವರ್ಷ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳಬಾರದು ಎಂದು ತೀರ್ಮಾನ ಮಾಡಿದ್ದೆ. ಆದರೆ ನಮ್ಮ ಕಾರ್ಯಕರ್ತರು ವಿಶೇಷ ಮಕ್ಕಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಇದು ನನಗೆ ಖುಷಿ ತಂದಿದೆ. ಅಡಂಬರ, ತೋರಿಕೆ ಕೆಲಸ ಮಾಡಬಾರದು.
ಜನ ಎಲ್ಲವನ್ನು ಗಮನಿಸುತ್ತಾರೆ. ಸರಳ ಹುಟ್ಟುಹಬ್ಬವನ್ನು ಅಮೂಲ್ಯ ವಿಶೇಷ ಮಕ್ಕಳೊಂದಿಗೆ ಆಚರಿಸಿಕೊಂಡಿರುವುದು ನಾನು ಮರೆಯುವಂತಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.
ವಿಶೇಷ ಮಕ್ಕಳು, ಅಂಧ, ಅನಾಥ ಹಾಗೂ ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳ ಶಿಕ್ಷಣ, ಪಾಲನೆ ಹಾಗೂ ತರಬೇತಿ ನೀಡುತ್ತಿರುವ ಸಂಘ, ಸಂಸ್ಥೆಗಳಿಗೆ ಸರಕಾರ ವಿಶೇಷ ಗಮನ ನೀಡಿ ಸಹಾಯ ಸಹಕಾರ ನೀಡಲು ಸರಕಾರಕ್ಕೆ ಪತ್ರ ಬರೆಯುವದಾಗಿ ಭರವಸೆ ನೀಡಿದರು.
ಪ್ರಮುಖರಾದ ಬಸವರಾಜ ದೇಶಮುಖ, ಶರಣಪ್ಪ ಪಾಟೀಲ್, ರಾಜಕುಮಾರ ಹಂಬಲಪೂರೆ, ಸುಭಾಷ ಚಂದ್ರ ಬೋಸ್ ಯುವಕ ಸಂಘದ ತಾಲೂಕು ಅಧ್ಯಕ್ಷ ರತ್ನದೀಪ ಕಸ್ತೂರೆ, ದಲಿತ ಸೇನೆ ತಾಲೂಕು ಅಧ್ಯಕ್ಷ ಸುನಿಲ ಮೀತ್ರಾ, ಚಂದು ಡಿಕೆ, ರವಿ ಕೌಠಾ, ದತ್ತು ಚಿಕ್ಲಿ ಸೇರಿದಂತೆ ಅನೇಕರಿದ್ದರು.
ಸಂಘಟನೆಗಳಿಂದಲ್ಲೂ ಬರ್ತ್ ಡೇ ಆಚರಣೆ:
ಡಾ.ಭೀಮಸೇನರಾವ ಶಿಂಧೆ ಅವರ ಹುಟ್ಟುಹಬ್ಬವನ್ನು ಸುಭಾಸ್ ಚಂದ್ರ ಬೋಸ್ ಯುವಕ ಸಂಘ ಮತ್ತು ದಲಿತ ಸೇನೆ ಸಂಘಟನೆಯಿಂದ ಹುಟ್ಟುಹಬ್ಬವನ್ನು ಆಚರಿಸಿದರು. ಇದಕ್ಕೂ ಮೊದಲು ಡಾ. ಶಿಂಧೆ ಪಟ್ಟಣದ ಉದ್ಭವಲಿಂಗ ಶ್ರೀ ಅಮರೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಸಿದ್ದರು. ನಂತರ ತಮ್ಮ ನಿವಾಸಕ್ಕೆ ಆಗಮಿಸಿದ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರಿಗೆ ಸತ್ಕಾರ ಸ್ವೀಕರಿಸಿದರು. ದಿನವಿಡೀ ನಿವಾಸಕ್ಕೆ ಹುಟ್ಟುಹಬ್ಬದ ಶುಭಾಶಯ ತಿಳಿಸಲು ಜನರು ಆಗಮಿಸಿದರು. ಕಾಂಗ್ರೆಸ್ ತಾಲೂಕು ಅಧ್ಯಕ್ಷ ರಾಜಕುಮಾರ ಹಲಬರ್ಗೆ, ತಾಪಂ ಮಾಜಿ ಸದಸ್ಯ ಶಿವಕುಮಾರ ಮೇತ್ರೆ, ಸುಧಾಕಾರ ಕೊಳ್ಳುರ್, ಶಿವಶಂಕರ ಎಕಲಾರ ಸೇರಿದಂತೆ ಅನೇಕರಿದ್ದರು.
ವರದಿ: ರವಿಕುಮಾರ ಶಿಂದೆ
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth