ಕೇಂದ್ರ ರಕ್ಷಣಾ ಸಚಿವಾಲಯದಲ್ಲಿ SSLC, PUC ಹಾಗೂ ಡಿಗ್ರಿ ಪಾಸಾದವರಿಗೆ ಹಲವು ಉದ್ಯೋಗವಕಾಶ
DRDO Recruitment– 2025: ಕೇಂದ್ರ ರಕ್ಷಣಾ ಸಚಿವಾಲಯದ ಅಡಿ ಕಾರ್ಯನಿರ್ವಹಿಸುತ್ತಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ 10th, 12th, ಡಿಪ್ಲೋಮಾ ಹಾಗೂ ಪದವಿ ಪಾಸಾದವರಿಗೆ ವಿವಿಧ 113 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಗ್ರೂಪ್ ಸಿ ವೃಂದದ ಹುದ್ದೆಗಳಾಗಿದ್ದು, ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಳಗೆ ನೀಡಿರುವ ಸಂಪೂರ್ಣ ಅರ್ಹತೆಗಳನ್ನು ತಿಳಿದುಕೊಂಡು ಫೆಬ್ರವರಿ 06, 2025ರ ಒಳಗಾಗಿ ಅರ್ಜಿ ಸಲ್ಲಿಸಿರಿ.
ನೇಮಕಾತಿ ಮಾಡಿಕೊಳ್ಳುತ್ತಿರುವ ಹುದ್ದೆಗಳ ವಿವರ :
ಕುಕ್ : 04 ಹುದ್ದೆಗಳು
ಲ್ಯಾಬ್ ಅಟೆಂಡೆಂಟ್ : 01 ಹುದ್ದೆ
ವಾಷರ್ ಮನ್ : 02 ಹುದ್ದೆ
ಕಾರ್ಪೆಂಟರ್ ಆ್ಯಂಡ್ ಜಾಯ್ಕರ್ : 02 ಹುದ್ದೆ
ಟಿನ್ ಸ್ಮಿತ್ : 01 ಹುದ್ದೆ
ಎಂಟಿಎಸ್ : 29 ಹುದ್ದೆಗಳು
ಟ್ರೇಡ್ಸ್ ಮನ್ : 31 ಹುದ್ದೆ
ಅಕೌಂಟೆಂಟ್ : 01 ಹುದ್ದೆ
ಸ್ಟೋರ್ ಕೀಪರ್ : 24 ಹುದ್ದೆಗಳು
ಫೋಟೋಗ್ರಾಫರ್ : 01 ಹುದ್ದೆ
ಫೈರ್ ಮನ್ : 05 ಹುದ್ದೆಗಳು
ಸ್ಟೆನೋಗ್ರಾಫರ್ (ಗ್ರೇಡ್ 1) : 01 ಹುದ್ದೆ
ಕೆಳದರ್ಜೆಯ ಗುಮಾಸ್ತ : 11 ಹುದ್ದೆಗಳು
ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆ :
ರಕ್ಷಣಾ ಸಚಿವಾಲಯದ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ SSLC, PUC, ಡಿಪ್ಲೋಮ ಅಥವಾ ಡಿಗ್ರೀ ಮುಗಿಸಿರಬೇಕು. ಯಾವ ಹುದ್ದೆಗೆ ಯಾವ ಶೈಕ್ಷಣಿಕ ಅರ್ಹತೆ ಎಂದು ತಿಳಿದುಕೊಳ್ಳಲು ಅಭ್ಯರ್ಥಿಗಳು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅಧಿಸೂಚನೆ ಪರಿಶೀಲಿಸಿ.
ವಯೋಮಿತಿ ಅರ್ಹತೆಗಳೇನಿರಬೇಕು?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಠ 27 ವರ್ಷದ ಒಳಗಿರಬೇಕು. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಟ ವಯೋಮಿತಿಯಲ್ಲಿ ವರ್ಷದೊಳಗಿರಬೇಕು ವರ್ಗಗಳಿಗೆ ಅನುಗುಣವಾಗಿ 3 ವರ್ಷದಿಂದ 15 ವರ್ಷದ ಸಡಿಲಿಕೆ ನೀಡಲಾಗುತ್ತದೆ.
ಆಯ್ಕೆಯಾದವರಿಗೆ ಸಿಗುವ ವೇತನವೇಷ್ಟು?
ಅಂತಿಮವಾಗಿ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಮಾಸಿಕ 18,000ರೂ. ಯಿಂದ 92,300 ರೂ. ವರೆಗೆ ಸಿಗಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06 ಫೆಬ್ರವರಿ 2025
ಅಧಿಸೂಚನೆ ಡೌನ್ಲೋಡ್ ಲಿಂಕ್: https://drive.google.com/file/d/1Ypyqw5vunKEYp8Jfr6xoeirZ0ZpPqe9Q/view?usp=
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: