ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಡ್ರೀಮ್ ಡೀಲ್ ಶಾಖೆ ಉದ್ಘಾಟನೆಗೆ ಸಜ್ಜು
ಕರಾವಳಿಯಲ್ಲಿ ಜನಪ್ರಿಯತೆ ಪಡೆದ ಡ್ರಿಮ್ ಡೀಲ್ ಗ್ರೂಪ್ ನ ಉಳಿತಾಯ ಯೋಜನೆ ಈಗ ರಾಜ್ಯಮಟ್ಟಕ್ಕೂ ವಿಸ್ತರಿಸಿದೆ. ತಮ್ಮ ತಂಡದ ಸದಸ್ಯರ ಪರಿಶ್ರಮದಿಂದ ಡ್ರೀಮ್ ಡೀಲ್ ಇದೀಗ ರಾಜ್ಯದ 15ಕ್ಕೂ ಹೆಚ್ಚು ಕಡೆಗಳಲ್ಲಿ ಶಾಖೆಗಳನ್ನು ತೆರೆದಿದೆ.
ಮೈಸೂರು, ಚಿಕ್ಕಮಗಳೂರು, ಬೆಳ್ತಂಗಡಿ, ಬೆಂಗಳೂರು, ಭಟ್ಕಳ, ಹೀಗೆ 15 ಕಡೆಗಳಲ್ಲಿ ‘ಗ್ರೀಮ್ ಡೀಲ್ ಗ್ರೂಪ್’ ತನ್ನ ಶಾಖೆಯನ್ನು ಹೊಂದಿದ್ದು ಇತ್ತೀಚಿಗೆ ಶಿವಮೊಗ್ಗ, ದಾವಣಗೆರೆ, ಕೋಲಾರದಲ್ಲಿ ತನ್ನ ಹೊಸ ಶಾಖೆಗಳನ್ನು ತೆರೆದಿದೆ. ಮುಂದಿನ ದಿನಗಳಲ್ಲಿ ಹಾಸನ, ಬಾಗೇಪಲ್ಲಿ, ರಾಮನಗರ,ಮಂಡ್ಯ, ರಾಯಚೂರಿನಲ್ಲಿ ಶಾಖೆಗಳು ಉದ್ಘಾಟನೆಗೊಳ್ಳಲಿದೆ.
ವಿವಿಧ ಉಳಿತಾಯ ಯೋಜನೆ ಮೂಲಕ ತನ್ನ ಗ್ರಾಹಕರಿಗೆ ಬಂಪರ್ ಡ್ರಾ ಅಷ್ಟೇ ಅಲ್ಲದೇ, ಅದ್ಭುತ ಉಳಿತಾಯ ಯೋಜನೆಯನ್ನು ಪರಿಚಯಿಸುತ್ತಿದೆ. ಈಗಾಗಲೇ ಹಲವು ಹಂತದ ಉಳಿತಾಯ ಯೋಜನೆಗಳ ಡ್ರಾ ಕೂಟವನ್ನು ಪ್ರತಿ ತಿಂಗಳು ಯಶಸ್ವಿಯಾಗಿ ನಡೆಸುತ್ತಾ ಬಂದಿದೆ.
ಗ್ರಾಹಕರು ನಮ್ಮೊಂದಿಗೆ ಇರಿಸಿರುವ ನಂಬಿಕೆಯೇ ನಮ್ಮ ಬೆಳವಣಿಗೆಗೆ ಪ್ರೇರಣೆಯಾಗಿದೆ. ಸಂಸ್ಥೆಯು ಆರ್ ಬಿಐ ನಿಯಮಾವಳಿಯಂತೆ ಹಾಗೂ ಎಲ್ಲ ಮಾದರಿಯ ತೆರಿಗೆ ಕ್ರಮಗಳನ್ನು ಅನುಸರಿಸಿಕೊಂಡು ನಡೆಯುತ್ತಿದೆ. ಯೂಟ್ಯೂಬ್‌ನಲ್ಲಿ ನೇರಪ್ರಸಾರದ ಮೂಲಕ ಲೈವ್ ಡ್ರಾ,ಉಳಿತಾಯ ಯೋಜನೆಗೆ ಮಾಸಿಕ ಹಣ ಪಾವತಿಸುವ ಪ್ರತಿಯೊಬ್ಬನಿಗೂ ತಮ್ಮ ಆಯ್ಕೆಯ ಬಹುಮಾನ ಪಡೆಯುವ ಅವಕಾಶವೂ ಇದರಲ್ಲಿದೆ.
ಯಾವುದೇ ವದಂತಿಗಳಿಗೆ, ಗೊಂದಲಗಳಿಗೆ ಜನರು ಒಳಗಾಗುವ ಪ್ರಶ್ನೆಯೇ ಇಲ್ಲಿಲ್ಲ. ಎಲ್ಲವೂ ಕಾನೂನು ಪ್ರಕಾರವಾಗಿಯೇ ನಡೆಯುತ್ತಿದೆ ಎಂದು ಡೀಮ್ ಡೀಲ್ ಗ್ರೂಪ್ ಸಂಸ್ಥೆ ಸ್ಪಷ್ಟಪಡಿಸಿದೆ.
ಸ್ಟಾರ್ಟ್ ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯಂತೆ ಮಂಗಳೂರಿನ ವಿದ್ಯಾವಂತ ಯುವಕರ ತಂಡವೊಂದು ಇ–ಕಾಮರ್ಸ್ ಫ್ಲಾಟ್ ಫಾರಂ ಒಂದನ್ನು ಹುಟ್ಟು ಹಾಕಿದೆ. ಅಲ್ಲದೇ ಈ ಸಂಸ್ಥೆಯ ಮೂಲಕ ಸುಮಾರು 4 ಸಾವಿರ ಮಂದಿಗೆ ಉದ್ಯೋಗ ನೀಡಿದೆ. ಈ ಫ್ಲಾಟ್‌ಫಾರಂ ಮೂಲಕ ಅವರದೇ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದ್ದು, ಇದರ ಪ್ರಚಾರದ ಭಾಗವಾಗಿ ಗ್ರಾಹಕರಿಗೆ ಅದ್ಭುತ ಕೊಡುಗೆಗಳನ್ನು ನೀಡುತ್ತಿದೆ.