ಊಟವಾದ ತಕ್ಷಣ ಕೋಲ್ಡ್ ವಾಟರ್ ಕುಡಿಯ ಬಾರದು ಯಾಕೆ ಗೊತ್ತಾ? - Mahanayaka

ಊಟವಾದ ತಕ್ಷಣ ಕೋಲ್ಡ್ ವಾಟರ್ ಕುಡಿಯ ಬಾರದು ಯಾಕೆ ಗೊತ್ತಾ?

chilled water
15/04/2022

ಬೇಸಿಗೆಯ ವೇಳೆ ಎಲ್ಲರೂ ಕೋಲ್ಡ್ ನೀರು ಅಥವಾ ಪಾನೀಯಗಳನ್ನು ಬಯಸುತ್ತಾರೆ. ಬೇಸಿಗೆ ಸಂದರ್ಭದಲ್ಲಿ ಬಿಸಿಲಿನ ಬೇಗೆಗೆ ಬಿಸಿ ಬಿಸಿ ಊಟ ಮಾಡಿದರೆ, ಶರೀರದಿಂದ ಜಲಪಾತದಂತೆ ಬೆವರು ಸುರಿಯುತ್ತದೆ. ಇಂತಹ ಸಂದರ್ಭದಲ್ಲಿ ಎಲ್ಲರೂ ತಂಪಾದ ಪಾನೀಯಗಳನ್ನು ಬಯಸುತ್ತಾರೆ. ಆದರೆ, ಊಟವಾದ ತಕ್ಷಣವೇ ಕೋಲ್ಡ್ ನೀರು ಕುಡಿಯುವುದು ಆರೋಗ್ಯಕ್ಕೆ ಅಷ್ಟೊಂದು ಉತ್ತಮವಾದದ್ದಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.


Provided by

ಊಟದ ತಕ್ಷಣವೇ  ಕೋಲ್ಡ್ ವಾಟರ್ ಕುಡಿಯುವುದರಿಂದ ದೇಹದಲ್ಲಿರುವ ಕೊಬ್ಬಿನಾಂಶ ಹಾಗೆಯೇ ಉಳಿದು ಬಿಡುತ್ತದೆ. ಹೊಟ್ಟೆಯ ಬೊಜ್ಜು ಹೆಚ್ಚಾಗುತ್ತದೆ. ಜೊತೆಗೆ ತಿಂದಿರುವ ಆಹಾರ ಪದಾರ್ಥಗಳು ಜೀರ್ಣವಾಗಲು ಕಷ್ಟವಾಗಬಹುದು.

ದೇಹದ ಅಂಗಗಳಿಗೆ ಏಕಾಏಕಿ ಕೋಲ್ಡ್ ನೀರು ಹರಿದರೆ, ದೇಹದ ತಾಪಮಾನದಲ್ಲಿ ಆಗುವ ಬದಲಾವಣೆಯಿಂದ ತಲೆ ತಿರುಗುವ ಸಮಸ್ಯೆ ಸೃಷ್ಟಿಯಾಗಬಹುದು. ಜೊತೆಗೆ ತಣ್ಣೀರು ದೇಹದ ಚಯಾಪಚಯಕ್ಕೆ ಇದು ಅಡ್ಡಿಪಡಿಸುತ್ತದೆ.


Provided by

ಕೋಲ್ಡ್ ನೀರು ತಲೆನೋವು, ಮೈಗ್ರೇನ್ ಗೆ ಕಾರಣವಾಗಬಹುದು. ಕೋಲ್ಡ್ ನೀರು ಕುಡಿಯುವುದರಿಂದ ಶರೀರ ಸುಧಾರಿಸುತ್ತದೆ ಎನ್ನುವುದು ಹೆಚ್ಚಿನ ಜನರ ಭ್ರಮೆಯಾಗಿದೆ. ಆದರೆ, ಕೋಲ್ಡ್ ನೀರು ಕುಡಿಯುವುದರಿಂದ ಶರೀರ ದುರ್ಬಲವಾಗುತ್ತದೆ. ಮೆದುಳಿನ ಕಾರ್ಯಗಳನ್ನು ಇದು ಫ್ರೀಜ್ ಮಾಡುತ್ತದೆ. ಈ ವೇಳೆ ತಲೆ ತಿರುಗುವ ಅನುಭವವಾಗಬಹುದು.

ತಣ್ಣಗಿನ ನೀರನ್ನು ಕುಡಿಯುವುದರಿಂದಾಗಿ ನರಗಳ ಕಾರ್ಯಕ್ಕೆ ಅಡ್ಡಿಯಾಗುತ್ತದೆ. ಇದರಿಂದಾಗಿ ಹೃದಯ ಬಡಿತದಲ್ಲಿ ಅಸ್ಥಿರತೆ ಉಂಟಾಗಬಹುದು. ನರಗಳ ಕಾರ್ಯಕ್ಕೆ ಅಡ್ಡಿಯಾದರೆ, ಹೃದಯದ ಬಡಿತ ನಿಧಾನವಾಗುವ ಅಪಾಯವಿರಬಹುದು.

ಯಾವುದೇ ವಿಚಾರವು ಮಿತಿ ಮೀರಿದರೆ ಅಪಾಯಕ್ಕೆ ಕಾರಣವಾಗಬಹುದು. ಹಾಗೆಯೇ ಕೋಲ್ಡ್ ನೀರು ಸೇವನೆಯ ವೇಳೆ ಕೂಡ ನಾವು ಜಾಗೃತರಾಗಬೇಕು. ಮಿತಿ ಬಿಟ್ಟು ಕೋಲ್ಡ್ ನೀರು ಕುಡಿಯಬಾರದು. ತೀವ್ರ ಆಯಾಸದ ವೇಳೆ ಏಕಾಏಕಿ, ಕೋಲ್ಡ್ ನೀರು ಕುಡಿಯುವ ಅಭ್ಯಾಸ ಕೂಡ ಉತ್ತಮವಲ್ಲ. ಜಾಗೃತರಾಗಿರೋಣ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿ…

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ತಂದೆ ಹಾವನ್ನು ಹೊಡೆದು ಕೊಂದ ಕೆಲವೇ ಗಂಟೆಗಳಲ್ಲಿ ಪುತ್ರನನ್ನು ಕಚ್ಚಿ ಕೊಂದ ಇನ್ನೊಂದು ಹಾವು

ಮಂಗಳೂರು: ABVP ಕಾನೂನು ವಿದ್ಯಾರ್ಥಿಗಳ ರಾಜ್ಯ ಸಮ್ಮೇಳನ

ನಿಮಗಿನ್ನೂ ಅವಕಾಶವಿದೆ: ಹಿಜಾಬ್ ಪರ ವಿದ್ಯಾರ್ಥಿನಿ ಸಿಎಂಗೆ ಹೇಳಿದ್ದೇನು?

ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದರೂ ನನ್ನನ್ನು ದೇವಸ್ಥಾನದೊಳಗೆ ಬಿಡಲ್ಲ: ಡಾ.ಜಿ.ಪರಮೇಶ್ವರ್

ಇತ್ತೀಚಿನ ಸುದ್ದಿ