ಮೋದಿ, ಯೋಗಿಯನ್ನು ಹೊಗಳಿದ ವ್ಯಕ್ತಿಯನ್ನು ಕೊಂದ ಕ್ಯಾಬ್ ಚಾಲಕ..!
ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರನ್ನು ಹೊಗಳಿದ ವ್ಯಕ್ತಿಯನ್ನು ಕ್ಯಾಬ್ ಚಾಲಕನೋರ್ವ ಬರ್ಬರವಾಗಿ ಹತ್ಯೆ ಮಾಡಿ ಘಟನೆ ಉತ್ತರಪ್ರದೇಶದ ಮಿರ್ಜಾಪುರ್ ನಲ್ಲಿ ಜಿಲ್ಲೆಯಲ್ಲಿ ನಡೆದಿದೆ.
ಮೃತನನ್ನು ರಾಜೇಶ್ ಧಾರ್ ದುಬೆ ಎಂದು ಗುರುತಿಸಲಾಗಿದೆ. ಮಿರ್ಜಾಪುರ್ ಜಿಲ್ಲೆಯ ಚನ್ಬೆಯ ನಿವಾಸಿ ಅಮ್ಜದ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೃತ ರಾಜೇಶ್ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಆಗುವ ವೇಳೆ ವಾಹನದಲ್ಲಿದ್ದ ಇತರೆ ಪ್ರಯಾಣಿಕರ ಜೊತೆ ರಾಜಕೀಯದ ಬಗ್ಗೆ ಚರ್ಚೆ ನಡೆಸಿದ್ದಾರೆ. ಹೀಗೆ ಚರ್ಚೆ ವೇಳೆ ರಾಜೇಶ್ ಅವರು ಮೋದಿ ಹಾಗೂ ಯೋಗಿಯನ್ನು ಹಾಡಿ ಹೊಗಳಿದ್ದಾರೆ.
ಇದರಿಂದ ಸಿಟ್ಟುಗೊಂಡ ಕ್ಯಾಬ್ ಚಾಲಕ ಅಮ್ಜದ್, ರಾಜೇಶ್ ಹೊಗಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಅಲ್ಲದೆ ಪ್ರಧಾನಿ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ. ಇದರಿಂದ ಕೋಪಗೊಂಡ ರಾಜೇಶ್, ಮೋದಿ, ಯೋಗಿ ಬಗ್ಗೆ ಮತ್ತೆ ಹೊಗಳಿ ಮಾತನಾಡಲು ಶುರು ಮಾಡಿದ್ದಾರೆ. ಇದರಿಂದ ಮತ್ತಷ್ಟು ಕೋಪಗೊಂಡ ಅಮ್ಜದ್, ರಾಜೇಶ್‍ನನ್ನು ವಾಹನದಿಂದ ತಳ್ಳಿದ್ದಾನೆ.
ಇದೇ ವೇಳೆ ವಾಹನದ ಸೈಡ್ ಮಿರರ್ ಹಿಡಿದು ಒಳಗೆ ಬರಲು ರಾಜೇಶ್ ಪ್ರಯತ್ನಿಸಲು ಮುಂದಾದಾಗ ಚಾಲಕ ವೇಗವಾಗಿ ವಾಹನ ಚಾಲನೆ ಮಾಡಿದ್ದಾನೆ. ಪರಿಣಾಮ ವಾಹನದಡಿ ಸಿಲುಕಿ ರಾಜೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೊಲೆ ನಡೆದ ಸುದ್ದಿ ಹಬ್ಬುತ್ತಿದ್ದಂತೆಯೇ ಸಾರ್ವಜನಿಕರು ಪ್ರಯಾಗ್‍ರಾಜ್–ಮಿರ್ಜಾಪುರ್ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw