ರಸ್ತೆ ಇಡೀ ತೂರಾಡಿದ ಆಟೋ: ಆಟೋದಿಂದ ಬಿದ್ದು–ಎದ್ದು ಆಟೋ ಹುಡುಕಿದ ಚಾಲಕ!

ಚಿಕ್ಕಮಗಳೂರು: ವ್ಯಕ್ತಿಯೋರ್ವ ಚಲಾಯಿಸುತ್ತಿದ್ದ ಆಟೋ, ತನ್ನ ಮಾಲಿಕನಂತೆಯೇ ತೂರಾಡುತ್ತಾ ರಸ್ತೆಯಲ್ಲಿ ಸಂಚರಿಸಿ ಕೊನೆಗೆ ತನ್ನ ಮಾಲಿಕನನ್ನು ಹೊರಗೆಸೆದು ತಾನು ಗುಂಡಿಗೆ ಬಿದ್ದ ಘಟನೆಯೊಂದು ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಘಟನೆ ನಡೆದಿರೋದು ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಚಂಡಗೋಡು ಗ್ರಾಮದಲ್ಲಿ. ಆಟೋ ಚಾಲಕ ಆಟೋವನ್ನು ರಸ್ತೆ ಇಡೀ ಚಲಾಯಿಸಿದ್ದಾನೆ. ಕೊನೆಗೆ ನಿಯಂತ್ರಣ ತಪ್ಪಿ ತಾನೇ ಆಟೋದಿಂದ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಆಟೋ ಹೊಂಡಕ್ಕೆ ಬಿದ್ದಿದೆ.
ವ್ಯಕ್ತಿ ಮದ್ಯ ಸೇವಿಸಿ ಆಟೋ ಚಲಾಯಿಸಿರುವಂತೆ ಕಂಡು ಬಂದಿದೆ. ಈ ಆಟೋದಲ್ಲಿ ಯಾರಾದ್ರೂ ಇದ್ದಿದ್ರೆ ಅಥವಾ ಎದುರಿನಿಂದ ಯಾವುದಾದ್ರು ವಾಹನ ಬಂದಿದ್ದಿದ್ರೆ, ಅವರ ಪ್ರಾಣಕ್ಕೂ ಅಪಾಯ ಸಂಭವಿಸುತ್ತಿತ್ತು.
ವಿಡಿಯೋ ನೋಡಿ:
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw