ಸಂಬಳ ನೀಡಿಲ್ಲ ಎಂದು ಲಾರಿಯ ಚಕ್ರ ಕದ್ದೊಯ್ದ ಚಾಲಕ, ಕ್ಲೀನರ್!
ಸಂಬಳ ನೀಡಿಲ್ಲ ಎಂದು ಲಾರಿಯ ಚಾಲಕ ಮತ್ತು ಕ್ಲೀನರ್ ಸೇರಿ ಡಿಸ್ಕ್ ಸಹಿತ ಲಾರಿಯ ಚಕ್ರಗಳನ್ನು ಕಳ್ಳತನ ಮಾಡಿರುವ ಕುರಿತು ಮಂಗಳೂರು ನಗರದ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಚಾಲಕ ಕೇರಳದ ಕೊಲ್ಲಂ ನಿವಾಸಿ ಸಮೀರ್ ಮತ್ತು ಕ್ಲೀನರ್ ಕನಕರಾಜು ಎಂಬುವವರು ಡಿಸ್ಕ್ ಸಹಿತ ಲಾರಿಯ ಚಕ್ರಗಳನ್ನು ಕಳವು ಮಾಡಿರುವ ಕುರಿತು ಈಗಲ್ ಲಾಜೆಸ್ಟಿಕ್ಸ್ ನ ಮ್ಯಾನೇಜರ್ ವೇಲುಮುರುಗನ್ ಟವರ್ಸ್ ನಾಮಕಲ್ಲು ಅವರು ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕಳವಾದ ಡಿಕ್ಸ್ ಸಹಿತ ಚಕ್ರಗಳ ಒಟ್ಟು ಮೌಲ್ಯ 2.06 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಪಣಂಬೂರು ಪೊಲೀಸ್ ಠಾಣೆಯಲ್ಲಿ ಚಾಲಕ ಸಮೀರ್ ಮತ್ತು ಕ್ಲೀನರ್ ಕನಕರಾಜು ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw