ಡ್ರೋಣ್ ಮೂಲಕ ಆಹಾರ ವಿತರಿಸಲು ಮುಂದಾದ ಸ್ವಿಗ್ಗಿ! - Mahanayaka

ಡ್ರೋಣ್ ಮೂಲಕ ಆಹಾರ ವಿತರಿಸಲು ಮುಂದಾದ ಸ್ವಿಗ್ಗಿ!

swigy
04/05/2022

ಬೆಂಗಳೂರು: ಬೆಂಗಳೂರು ಮೂಲದ ಆಹಾರ ವಿತರಣಾ ಸೇವೆ ಒದಗಿಸುತ್ತಿರುವ ಸಂಸ್ಥೆಯಾಗಿರುವ ಸ್ವಿಗ್ಗಿ ಇದೀಗ ಡ್ರೋಣ್ ಮೂಲಕ ಅಗತ್ಯವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಲು ನಿರ್ಧರಿಸಿದೆ. ಇದರ ಪ್ರಾಯೋಗಿಕ ಹಂತವನ್ನು ಬೆಂಗಳೂರು ಮತ್ತು ದೆಹಲಿ ಎನ್ ಸಿಆರ್ ನಲ್ಲಿ ಮೊದಲ ಬಾರಿಗೆ ಪ್ರಯೋಗ ನಡೆಸಲಿದೆ.

ಕಂಪನಿಯು ಸ್ವಿಗ್ಗಿ ಬೈಟ್ ಎಂಬ ಶೀರ್ಷಿಕೆಯ ಬ್ಲಾಗ್ ಪೋಸ್ಟ್ ನಲ್ಲಿ ಡ್ರೋಣ್ ಪ್ರಯೋಗಗಳನ್ನು ಎರಡು ಹಂತಗಳಲ್ಲಿ ಮಾಡಲಾಗುವುದು ಎಂದು ಹೇಳಿದೆ. ಚೆನ್ನೈ ಮೂಲದ ಗರುಡಾ ಏರೋಸ್ಪೇಸ್ ಬೆಂಗಳೂರಿನಲ್ಲಿ ಮತ್ತು ಸ್ಕೈಯರ್ ಮೊಬಿಲಿಟಿ ದೆಹಲಿ-ಎನ್ ಸಿಆರ್, ಇವೆರಡೂ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷಿಯಿದೆ.

ಸ್ವಿಗ್ಗಿಯ ಬ್ಲಾಗ್ ಪೋಸ್ಟ್ ಪ್ರಕಾರ, ಕಂಪನಿಯು ಡ್ರೋಣ್ ಸೇವೆಯ ಪ್ರಸ್ತಾವನೆಗಾಗಿ ವಿನಂತಿಗೆ ಪ್ರತಿಕ್ರಿಯೆಯಾಗಿ 345 ನೋಂದಣಿಗಳನ್ನು ಸ್ವೀಕರಿಸಿದೆ. ಕಾನೂನು, ಹಣಕಾಸು ಮತ್ತು ತಾಂತ್ರಿಕ ಅಂಶಗಳನ್ನು ಒಳಗೊಂಡಿರುವ ವ್ಯಾಪಕವಾದ ಮೌಲ್ಯಮಾಪನ ಪ್ರಕ್ರಿಯೆಯ ನಂತರ, ಪ್ರಯೋಗಗಳನ್ನು ನಡೆಸಲು ಕಂಪನಿಯು ನಾಲ್ಕು ಸಂಸ್ಥೆಗಳನ್ನು ಅಂತಿಮಗೊಳಿಸಿದೆ.

ಕಂಪನಿಯು ಡಾರ್ಕ್ ಸ್ಟೋರ್ ಗಳಿಂದ ಕಾಮನ್ ಪಾಯಿಂಟ್ಗೆ ವಸ್ತುಗಳನ್ನು ತಲುಪಿಸಲು ಡ್ರೋಣ್ ಗಳನ್ನು ಬಳಸಲಿದೆ. ಸಾಮಾನ್ಯವಾಗಿ ಗ್ರಾಹಕರಿಗೆ ಕಾಮನ್ ಪಾಯಿಂಟ್ ನಿಂದ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತದೆ. ಈ ಕೆಲಸವನ್ನು ಎಂದಿನಂತೆ ಡೆಲಿವರಿ ಪಾಟ್ನಾರ್ ಗಳೇ ಮಾಡಲಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರೈಲು ನಿಲ್ಲಿಸಿ ಎಣ್ಣೆ ಹೊಡೆಯಲು ಹೋದ ಲೋಕೋ ಪೈಲೆಟ್

ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಶಾ ನೀಡಿದ ಕಟ್ಟುನಿಟ್ಟಿನ ಸೂಚನೆ ಏನು?

ದೂರು ನೀಡಲು ಬಂದಿದ್ದ ಅತ್ಯಾಚಾರ ಸಂತ್ರಸ್ತೆಯ ಮೇಲೆ ಪೊಲೀಸ್ ಅಧಿಕಾರಿಯಿಂದ ಅತ್ಯಾಚಾರ!

ಅಂತ್ಯಕ್ರಿಯೆಗೆ ಕೆಲವೇ ನಿಮಿಷ ಇರುವಾಗ ಶವಪೆಟ್ಟಿಗೆಯೊಳಗಿನಿಂದ ಕೇಳಿತು ಬಡಿಯುವ ಶಬ್ದ!

ಕೊನೆಗೂ ತಾಯಿಯನ್ನು ಭೇಟಿಯಾದ ಯೋಗಿ ಆದಿತ್ಯನಾಥ್

 

 

ಇತ್ತೀಚಿನ ಸುದ್ದಿ