ಮತ್ತೆ ಏನನ್ನೋ ಕಂಡು ಹಿಡಿಯಲು ಹೊರಟ ಡ್ರೋಣ್ ಪ್ರತಾಪ್: ನೆಟ್ಟಿಗರಿಗೆ ಹೆಚ್ಚಿದ ಕುತೂಹಲ - Mahanayaka

ಮತ್ತೆ ಏನನ್ನೋ ಕಂಡು ಹಿಡಿಯಲು ಹೊರಟ ಡ್ರೋಣ್ ಪ್ರತಾಪ್: ನೆಟ್ಟಿಗರಿಗೆ ಹೆಚ್ಚಿದ ಕುತೂಹಲ

dron prathap
02/11/2022

ಬೆಂಗಳೂರು: ನಾನು ವಿಜ್ಞಾನಿ ಡ್ರೋಣ್ ತಯಾರಿಸಿದ್ದೇನೆ ಎಂದು ವ್ಯಾಪಕ ಸುದ್ದಿಗೆ, ವಿವಾದಕ್ಕೆ ಕಾರಣವಾಗಿದ್ದ ಡ್ರೋಣ್ ಪ್ರತಾಪ್ ಬಹಳಷ್ಟು ಕಾಲಗಳವರೆಗೆ  ತೆರೆಯಮರೆಗೆ ಸರಿದಿದ್ದರು. ಇದೀಗ ಮತ್ತೆ ಡ್ರೋಣ್ ಪ್ರತಾಪ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.


Provided by

ಡ್ರೋಣ್ ವಿಚಾರವಾಗಿ ಪ್ರತಾಪ್ ಹೇಳಿದ್ದೆಲ್ಲ ಸುಳ್ಳು ಅನ್ನೋದು ತಿಳಿದು ಬಂದಿತ್ತು. ಈ ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಆ ಬಳಿಕ ಡ್ರೋಣ್ ಪ್ರತಾಪ್ ಯಾವುದೇ ಸುದ್ದಿಯಲ್ಲಿರಲಿಲ್ಲ. ಇದೀಗ ಎರಡು ವರ್ಷಗಳ ಬಳಿಕ ಡ್ರೋಣ್ ಪ್ರತಾಪ್ ಮತ್ತೊಮ್ಮೆ ಇನ್ ಸ್ಟಾಗ್ರಾಮ್ ನಲ್ಲಿ ಪ್ರತ್ಯಕ್ಷವಾಗಿದ್ದು, ಹೊಸದೊಂದು ಫೋಟೋವನ್ನು ಶೇರ್ ಮಾಡುವ ಮೂಲಕ ಮತ್ತೆ ಚರ್ಚೆಗೀಡಾಗಿದ್ದಾರೆ.

ಈ ಬಾರಿ ಹೊಸದಾಗಿ ಏನೋ ಕಂಡು ಹಿಡಿಯುತ್ತಿರುವಂತೆ ಫೋಟೋವನ್ನು ಹಾಕಿದ್ದಾರೆ. ಕೈಗೆ ಹಳದಿ ರಕ್ಷಾ ಕವಚ ಧರಿಸಿದ್ದು, ಟೇಬಲ್​ ಮೇಲೊಂದು ಲ್ಯಾಪ್​ಲಾಪ್​ ಇಟ್ಟು, ಅದಕ್ಕೆ ಡಾಟಾ ಕೇಬಲ್​ ಅವಳವಡಿಸಿರುವ ಯಾವುದೋ ಒಂದು ಸಾಧನವನ್ನು ತಮ್ಮ ಮುಂದಿಟ್ಟುಕೊಂಡುಕೊಂಡಿದ್ದಾರೆ. ಒಂದು ಕೈಯಲ್ಲಿ ಸಾಲ್ಡರಿಂಗ್ ಗೇರ್​ ಹಿಡಿದು ನಗುತ್ತಾ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka


 

VIDEO: ಕಾಂತಾರದ ಜನಪದ ಹಾಡು ಹಾಡಿದ್ದು ಇವರೇ ನೋಡಿ:

ಇತ್ತೀಚಿನ ಸುದ್ದಿ