ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ವಿವಾದಿತ ಡ್ರೋನ್ ವಿಜ್ಞಾನಿ ಡ್ರೋನ್ ಪ್ರತಾಪ್
Drone Prathap: ಡ್ರೋನ್ ವಿಜ್ಞಾನಿ ಅಂತ ಸಾಕಷ್ಟು ಟ್ರೋಲ್ ಆಗಿದ್ದ, ಬಿಗ್ ಬಾಸ್ ಮಾಜಿ ಸ್ಪರ್ಧಿ ಡ್ರೋನ್ ಪ್ರತಾಪ್ ಇದೀಗ ಚಿತ್ರನಟರಾಗಲು ಮುಂದಾಗಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದ ಪ್ರತಾಪ್ ರನ್ನರ್ ಅಪ್ ಸ್ಥಾನ ಗಿಟ್ಟಿಸಿಕೊಂಡಿದ್ದರು.
ಮಂಡ್ಯದ ಕೆ. ಆರ್ ಪೇಟೆ ತಾಲೂಕಿನಲ್ಲಿನ ಶ್ರೀ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿದ ಡ್ರೋನ್ ಪ್ರತಾಪ್, ವೇದಿಕೆ ಕಾರ್ಯಕ್ರಮಕ್ಕೆ ಬಿಳಿ ಪಂಚೆ, ಬಿಳಿ ಅಂಗಿ ಧರಿಸಿ ಆಗಮಿಸಿದ್ದಾರೆ. ಬಳಿಕ, ಮಾತನಾಡಿದ ಪ್ರತಾಪ್, ಒಂದು ಸಿನಿಮಾಕ್ಕೆ ನಾಯಕ ನಟನಾಗಿ ಅಭಿನಯಿಸುತ್ತಿದ್ದೇನೆ. ಅದೆಲ್ಲದಕ್ಕೂ ನಿಮ್ಮ ಆಶೀರ್ವಾದ ಬೇಕು. ನನ್ನ ಒಂದು ಬಿಜಿನೆಸ್ ಜತೆಗೆ ಸಿನಿಮಾರಂಗಕ್ಕೂ ಕಾಲಿಡುತ್ತಿದ್ದೇನೆ. ಶ್ರೀ ಆಂಜನೇಯ ಸ್ವಾಮಿಯ ಆಶೀರ್ವಾದದೊಂದಿಗೆ ಎಂದಿದ್ದಾರೆ.
ಅದಾದ ಬಳಿಕ ದೇವಸ್ಥಾನದಲ್ಲಿ ನಡೆದ ಅನ್ನಸಂತರ್ಪಣೆಯಲ್ಲಿ ಭಾಗವಹಿಸಿ, ಎಲ್ಲರಿಗೂ ಊಟ ಬಡಿಸಿದ್ದಾರೆ. ಸದ್ಯ ಸಿನಿಮಾ ಒಪ್ಪಿಕೊಂಡಿರುವ ವಿಚಾರವನ್ನಷ್ಟೇ ಘೋಷಣೆ ಮಾಡಿರುವ ಡ್ರೋನ್ ಪ್ರತಾಪ್, ಮುಂದಿನ ದಿನಗಳಲ್ಲಿ, ಆ ಸಿನಿಮಾದ ಕುರಿತು ಮಾಹಿತಿ ರಿವೀಲ್ ಮಾಡಲಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: