ಜಮ್ಮುವಿನ ವಾಯುಸೇನಾ ನೆಲೆಯ ಮೇಲೆ ದಾಳಿ ನಡೆಸಲು ಡ್ರೋಣ್ ಬಳಕೆ?
ನವದೆಹಲಿ: ಜಮ್ಮುವಿನ ವಾಯುಸೇನಾ ನೆಲೆಯ ಮೇಲೆ ದಾಳಿ ನಡೆದಿದ್ದು, ಸ್ಫೋಟಗಳಿಗೆ ಡ್ರೋಣ್ ಗಳನ್ನು ಬಳಸಿರಬಹುದು ಎಂಬ ಶಂಕೆ ಪ್ರಾಥಮಿಕ ತನಿಖೆಯಿಂದ ವ್ಯಕ್ತವಾಗಿದೆ ಎಂದು ವರದಿಯಾಗಿದೆ.
ಭಾರತೀಯ ವಾಯುಸೇನೆಗೆ ಸೇರಿದ ನಾಗರಿಕ ವಿಮಾನ ನಿಲ್ದಾಣದ ರನ್ ವೇ ಮತ್ತು ವಾಯುಸಂಚಾರ ನಿಯಂತ್ರಣ ಕೊಠಡಿಯ ಮೇಲೆ ದಾಳಿ ನಡೆಸಲು ಇದೇ ಮೊದಲ ಭಾರಿಗೆ ಡ್ರೋಣ್ ಗಳನ್ನು ಬಳಸಿ ಸ್ಫೋಟಕಗಳನ್ನು ಎಸೆಯಲಾಗಿದೆ. ಕಡಿಮೆ ತೀವ್ರತೆಯ ಎರಡು ಸ್ಪೋಟಕಗಳನ್ನು ಇದಕ್ಕಾಗಿ ಬಳಸಿರುವ ಶಂಕೆ ವ್ಯಕ್ತವಾಗಿದೆ.
ವಿಮಾನ ನಿಲ್ದಾಣದ ತಾಂತ್ರಿಕತೆ ಪ್ರದೇಶದ ಹೆಲಿಪ್ಯಾಡ್ ನಲ್ಲಿ ಕೆಲವೆ ಗಂಟೆಗಳ ಅಂತರದಲ್ಲಿ ಶನಿವಾರ ಮಧ್ಯ ರಾತ್ರಿ 1.37 ಮತ್ತು 1.42 ಸುಮಾರಿನಲ್ಲಿ ಸ್ಫೋಟಗಳು ಸಂಭವಿಸಿವೆ. ಮೊದಲ ಸ್ಫೋಟ ಮೇಲ್ಛಾವಣಿಯ ಮೇಲೆ ಮತ್ತೊಂದು ಭೂ ಭಾಗಕ್ಕೆ ಸಮಾನಾಂತರವಾಗಿ ಸಂಭವಿಸಿವೆ. ಭಾನುವಾರ ಬೆಳಗ್ಗೆ ಸ್ಫೋಟದ ಬಗ್ಗೆ ಅರಿವಾಗಿದೆ. ಒಂದು ಸ್ಫೋಟದಿಂದ ಕಟ್ಟಡದ ಮೇಲ್ಛಾವಣಿಗೆ ಹಾನಿಯಾಗಿದೆ.
ವಿಮಾನಗಳನ್ನು ನಿಲ್ಲಿಸುವ ಪ್ರದೇಶವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಉದ್ದೇಶವನ್ನುವನ್ನು ದಾಳಿಕೋರರು ಹೊಂದಿದ್ದರು, ಆದರೆ ಗೋಡೆ ಅಡ್ಡಲಾಗಿದ್ದರಿಂದ ಉದ್ದೇಶಿತ ಗುರಿ ಬಹಳ ದೂರ ಎನಿಸಿ ಹತ್ತಿರದಲ್ಲೇ ಸ್ಫೋಟಿಸಿರಬಹುದು ಎಂದು ರಕ್ಷಣೆ ಮತ್ತು ಭದ್ರತಾ ಸಂಸ್ಥೆಯ ಅಂದಾಜಿಸಿದೆ. ತನಿಖೆ ಮುಂದುವರೆದಿದೆ.