ಟಾಲಿವುಡ್ ನಲ್ಲಿಯೂ ಡ್ರಗ್ಸ್ ವಾಸನೆ: ರಾಣಾ ದಗ್ಗುಬಾಟಿ ಸೇರಿದಂತೆ 12 ನಟ-ನಟಿಯರಿಗೆ ಇಡಿ ಸಮನ್ಸ್ - Mahanayaka
5:10 PM Wednesday 11 - December 2024

ಟಾಲಿವುಡ್ ನಲ್ಲಿಯೂ ಡ್ರಗ್ಸ್ ವಾಸನೆ: ರಾಣಾ ದಗ್ಗುಬಾಟಿ ಸೇರಿದಂತೆ 12 ನಟ-ನಟಿಯರಿಗೆ ಇಡಿ ಸಮನ್ಸ್

rana daggubati
25/08/2021

ಹೈದರಾಬಾದ್: ಟಾಲಿವುಡ್ ನಲ್ಲಿ ಕೂಡ ಡ್ರಗ್ಸ್ ಪ್ರಕರಣಗಳಲ್ಲಿ ಸೆಲೆಬ್ರೆಟಿಗಳ ಹೆಸರು ಹೇಳಿ ಬಂದಿದ್ದು, ತೆಲಂಗಾಣ ಅಬಕಾರಿ ಮತ್ತು ನಿಷೇಧ ಇಲಾಖೆಯಿಂದ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಸೇರಿದಂತೆ ಹಲವು ಸೆಲೆಬ್ರೆಟಿಗಳಿಗೆ  ಜಾರಿ ನಿರ್ದೇಶನಾಲಯ(ಇಡಿ) ಸಮನ್ಸ್ ನೀಡಿದೆ.

ರಾಕುಲ್ ಪ್ರೀತ್ ಸಿಂಗ್, ರಾಣಾ ದಗ್ಗುಬಾಟಿ, ರವಿತೇಜ ಮತ್ತು ನಿರ್ದೇಶಕ ಪುರಿ ಜಗನ್ನಾಥ್, ಚಾರ್ಮಿ ಕೌರ್, ನವದೀಪ್, ಮುಮೈತ್ ಖಾನ್, ನಂದು, ತರುಣ್ ಮತ್ತು ತಾನಿಶ್ ಸೇರಿದಂತೆ 12 ನಟ-ನಟಿಯರಿಗೆ ಸಮನ್ಸ್ ಜಾರಿಯಾಗಿದ್ದು, ಸೆಪ್ಟೆಂಬರ್ 6 ರಂದು ರಾಕುಲ್ ಮತ್ತು ಸೆಪ್ಟೆಂಬರ್ 8 ರಂದು ರಾಣಾ ಮತ್ತು ಸೆಪ್ಟೆಂಬರ್ 9 ರಂದು ರವಿತೇಜಗೆ ಹಾಜರಾಗುವಂತೆ ತಿಳಿಸಲಾಗಿದೆ, ಪುರಿ ಜಗನ್ನಾಥ್ ಆಗಸ್ಟ್ 31 ರಂದು ಹಾಜರಾಗಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಮಾದಕ ದ್ರವ್ಯ ಕಳ್ಳಸಾಗಣೆಯಲ್ಲಿ ಇವರ ಹೆಸರು ಕೇಳಿ ಬಂದಿದೆ ಎಂದು ಹೇಳಲಾಗಿದೆ. ಆದರೆ, ಸೂಕ್ತ ಪುರಾವೆಗಳು ಇನ್ನೂ ಸಿಕ್ಕಿಲ್ಲದ ಹಿನ್ನೆಲೆಯಲ್ಲಿ ಪುರಾವೆಗಳು ಸಿಗುವವರೆಗೆ ನಟ-ನಟಿಯರನ್ನು ಸಾಕ್ಷಿಗಳಾಗಿ ಪರಿಗಣಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತೆಲಂಗಾಣದಲ್ಲಿ ಅಬಕಾರಿ ಮತ್ತು ನಿಷೇಧ ಇಲಾಖೆಯು 30 ಲಕ್ಷ ರೂ. ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡ ಬಳಿಕ ಈ ಬೆಳವಣಿಗೆ ನಡೆದಿದ್ದು, ಹಲವು ನಟನಟಿಯರು ಇದರಲ್ಲಿ ಶಾಮೀಲಾಗಿರುವ ಮಾಹಿತಿ ಅಧಿಕಾರಿಗಳಿಗೆ ಲಭ್ಯವಾಗಿದೆ ಎಂದು ಹೇಲಾಗಿದೆ. ಸ್ಯಾಂಡಲ್ ವುಡ್ ಬಳಿಕ ಇದೀಗ ಟಾಲಿವುಡ್ ನಲ್ಲಿಯೂ ಡ್ರಗ್ಸ್ ಸುದ್ದಿಯಲ್ಲಿದೆ.

ಇನ್ನಷ್ಟು ಸುದ್ದಿಗಳು…

ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: ರಾಜ್ಯ ಸರ್ಕಾರವನ್ನು ತರಾಟೆಗೆತ್ತಿಕೊಂಡ ಸಿದ್ದರಾಮಯ್ಯ

ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: ಘಟನೆಯನ್ನು ವಿವರಿಸಿದ ಸಂತ್ರಸ್ತ ವಿದ್ಯಾರ್ಥಿನಿಯ ಸ್ನೇಹಿತ

ಕ್ಯಾನ್ಸರ್ ಪೀಡಿತ ಮುಸ್ಲಿಮ್ ಮಹಿಳೆಯರಿಗೆ ನೀಡಲಾಗುವ ಸಹಾಯಧನ ಯೋಜನೆ ಹಿಂಪಡೆಯಬೇಕು, ಎಲ್ಲರಿಗೂ ಯೋಜನೆ ಜಾರಿಗೆ ತನ್ನಿ | ಯತ್ನಾಳ್ ಒತ್ತಾಯ

ಈಗ ಮನಮೋಹನ್ ಸಿಂಗ್ ಪ್ರಧಾನಿಯಾಗಿರುತ್ತಿದ್ದರೆ, ಭಾರತೀಯರು ರಕ್ಷಣೆಗಾಗಿ ಪರದಾಡಬೇಕಿತ್ತು | ನಳಿನ್ ಕುಮಾರ್ ಕಟೀಲ್

ಅಂಬೇಡ್ಕರ್ ಸಂಶೋಧಕಿ, ದಲಿತ ಚಳುವಳಿಗಾರ್ತಿ ಡಾ.ಗೇಲ್ ಓಮ್ವೇಡ್ ನಿಧನ

ಭಾರತವು ಕಂಪೆನಿಗಳ ಗುಲಾಮಗಿರಿಯತ್ತ ಸಾಗುತ್ತಿದೆ | ಈಸ್ಟ್ ಇಂಡಿಯಾ ಕಂಪೆನಿಯನ್ನು ನೆನಪಿಸಿದ ರಾಹುಲ್ ಗಾಂಧಿ

ಕಾಂಗ್ರೆಸ್ ಭಯೋತ್ಪಾದನೆಯ ಮನಸ್ಥಿತಿಗಳನ್ನು ಪ್ರೋತ್ಸಾಹಿಸುತ್ತದೆ | ಸಚಿವೆ ಶೋಭಾ ಕರಂದ್ಲಾಜೆ

ಇತ್ತೀಚಿನ ಸುದ್ದಿ