ಮಹಿಳಾ ಪೊಲೀಸ್ ಪೇದೆಯ ಕಾರಿನಲ್ಲಿ ಪತ್ತೆಯಾಯ್ತು ಡ್ರಗ್ಸ್!

ಚಂಡೀಗಢ: ಮಹಿಳಾ ಪೊಲೀಸ್ ಪೇದೆಯೊಬ್ಬಳ ಕಾರಿನಲ್ಲಿ 17.71 ಗ್ರಾಂ. ಮಾದಕ ದ್ರವ್ಯ ಪತ್ತೆಯಾಗಿರುವ ಘಟನೆ ಪಂಜಾಬ್ ನ ಭಟಿಂಡಾದಲ್ಲಿ ನಡೆದಿದ್ದು, ಬಂಧನದ ಬಳಿಕ ಪೇದೆಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಅಮನದೀಪ್ ಕೌರ್ ಬಂಧಿತ ಮಹಿಳಾ ಪೇದೆಯಾಗಿದ್ದಾಳೆ. ಬಟಿಂಡಾದ ಬಾದಲ್ ಫ್ಲೈಓವರ್ ಬಳಿ ನಿಂತಿದ್ದ ಕೌರ್ ಅವರ ಕಾರನ್ನು ಪರಿಶೀಲನೆ ನಡೆಸಿದ ವೇಳೆ ಕಾರಿನಲ್ಲಿ 17.71 ಗ್ರಾಂ. ತೂಕದ ಮಾದಕ ದ್ರವ್ಯ ಪತ್ತೆಯಾಗಿದೆ.
ತಕ್ಷಣವೇ ಅಮನದೀಪ್ ಕೌರ್ ಹಾಗೂ ಮಾದಕ ವಸ್ತು ಮತ್ತು ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲಾಯಿತು.
ಮಾದಕ ದ್ರವ್ಯಗಳ ವಿರುದ್ಧ ಸಮರ ಸಾರಬೇಕಿದ್ದ ಪೊಲೀಸ್ ಪೇದೆಯ ಬಳಿಯೇ ಮಾದಕ ದ್ರವ್ಯ ಪತ್ತೆಯಾಗಿರುವ ಘಟನೆ ಪೊಲೀಸ್ ಇಲಾಖೆಗೆ ಮುಜುಗರ ಸೃಷ್ಟಿಸಿದೆ. ಹೀಗಾಗಿ ಮಹಿಳಾ ಪೇದೆ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಲು ಇಲಾಖೆ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/HEkqDgrW2BlJLad5kZ1DX7