ಡ್ರಗ್ಸ್ ನೀಡಿ ನನ್ನ ಮಗಳಿಗೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ: ಮಂಗಳೂರು ಕಮಿಷನರ್ ಗೆ ದೂರು ನೀಡಿದ ತಾಯಿ
ಮಂಗಳೂರು: ತನ್ನ ಮಗಳನ್ನು ಮಾದಕ ವ್ಯಸನಿಯಾಗಿ ಪರಿವರ್ತಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದ್ದು, ಈ ವಿಚಾರವಾಗಿ ತನಗೆ ಆರೋಪಿಯು ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಸಂಬಂಧ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರನ್ನು ಭೇಟಿ ಮಾಡಿ ನ್ಯಾಯ ದೊರಕಿಸಿಕೊಡುವಂತೆ ಮಹಿಳೆ ಮನವಿ ಮಾಡಿಕೊಂಡಿದ್ದು, ಇಲ್ಲವಾದಲ್ಲಿ ತಾನು ಆತ್ಮಹತ್ಯೆಗೆ ಶರಣಾಗುವುದಾಗಿ ಕಮಿಷನರ್ ಎದುರು ಕಣ್ಣೀರು ಹಾಕಿದ್ದಾರೆ ಎಂದು ವರದಿಯಾಗಿದೆ.
ಬಿಜೈ ನಿವಾಸಿ ಗ್ರೇಸಿ ಪಿಂಟೋ ಎಂಬವರು ಈ ಆರೋಪ ಮಾಡಿದ್ದು, ತನ್ನ 27 ವರ್ಷ ವಯಸ್ಸಿನ ಪುತ್ರಿಯನ್ನು ಸುರತ್ಕಲ್ ನ ಶರೀಫ್ ಸಿದ್ದೀಕ್ ಎಂಬಾತ ನಾಲ್ಕು ವರ್ಷಗಳಿಂದ ಪುಸಲಾಯಿಸಿ ಅಮಲು ಪದಾರ್ಥ ನೀಡಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಇದರಿಂದ ನೊಂದು ನನ್ನ ಪತಿ ಎರಡು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಫೇಸ್ ಬುಕ್ ನಲ್ಲಿ ನನ್ನ ಮಗಳಿಗೆ ಪರಿಚಯವಾದ ಆತ, ತನ್ನ ಮಗಳನ್ನು ಮದುವೆಯಾಗಿದ್ದಾನೆ ಎಂದು ಹೇಳುತ್ತಿದ್ದಾನೆ. ಆದರೆ ಇದಕ್ಕೆ ಯಾವುದೇ ಸಾಕ್ಷ್ಯ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಇನ್ನೂ ಈ ಸಂಬಂಧ ಮಹಿಳೆಯ ಮಾತುಗಳನ್ನು ಆಲಿಸಿರುವ ಎನ್.ಶಶಿಕುಮಾರ್, ಕೂಲಂಕುಶವಾಗಿ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ಘಟನೆಯ ಬಗ್ಗೆ ವಿವರಿಸಿರುವ ಕಮಿಷನರ್, ಆರೋಪಿಗೆ ಈಗಾಗಲೇ ಮೂರು ಮದುವೆಯಾಗಿದ್ದು, ಮುಂಬೈ, ಗೋವಾ ಹಾಗೂ ಪ್ರಸ್ತುತ ಸುರತ್ಕಲ್ ನಲ್ಲಿ ಇನ್ನೊಂದು ಪತ್ನಿಯ ಜೊತೆಗೆ ವಾಸವಿದ್ದಾನೆ. ಆರೋಪಿಯ ವಿರುದ್ಧ ಈ ಹಿಂದೆ ಸಿಂಥೆಟಿಕ್ ಡ್ರಗ್ ಎಂಡಿಎಂಎ ಮಾರಾಟ ಮಾಡುವ ಸಂಬಂಧ 2 ಪ್ರಕರಣಗಳು ದಾಖಲಾಗಿದ್ದು, ಇದು ಮೂರನೇ ಪ್ರಕರಣವಾಗಿದೆ. ಯುವತಿಗೆ ದೌರ್ಜನ್ಯವಾಗಿರುವ ಬಗ್ಗೆ ಆಕೆಯಿಂದ ಹೇಳಿಕೆ ಪಡೆಯಬೇಕಿದೆ ಎಂದು ತಿಳಿಸಿದ್ದಾರೆ.
ಇನ್ನೂ ನಿನ್ನೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.ಆತನ್ನು ವಶಕ್ಕೆ ಪಡೆದು ಸಮಗ್ರ ತನಿಖೆ ನಡೆಸಲಾಗುವುದು ಜೊತೆಗೆ, ಈತನಿಂದ ಇನ್ನಷ್ಟು ಯುವತಿಯರು ವಂಚನೆಗೊಳಗಾಗಿರುವ ಬಗ್ಗೆ ಹಾಗೂ ಡ್ರಗ್ಸ್ ಪೂರೈಕೆ ದಂಧೆ ಮತ್ತೆ ಮುಂದುವರಿಸಿದ್ದಾನೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
90 ಎಲೆಕ್ಟ್ರಿಕ್ ಬಸ್ ಗಳಿಗೆ ಸಿಎಂ ಬೊಮ್ಮಾಯಿ ಚಾಲನೆ: ಈ ಬಸ್ಸಿನ ವಿಶೇಷತೆ ಏನು?
ರಾಜ್ಯದಲ್ಲಿ ಆಯಾ ಶಾಲೆಗಳಲ್ಲಿಯೇ ಮಕ್ಕಳಿಗೆ ಕೋವಿಡ್ ಲಸಿಕೆ: ಸಿಎಂ ಬಸವರಾಜ ಬೊಮ್ಮಾಯಿ
ಮಹಾತ್ಮ ಗಾಂಧಿಯವರ ಚಿಂತನೆ ಹಿಡಿದಿಡಲು ಸಾಧ್ಯವಿಲ್ಲ: ರಾಹುಲ್ ಗಾಂಧಿ
ಚಂಡೀಗಢ: ನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಭರ್ಜರಿ ಜಯ
ಭಾರೀ ಪ್ರವಾಹ:18 ಸಾವು, 280ಕ್ಕೂ ಹೆಚ್ಚು ಮಂದಿಗೆ ಗಾಯ; 35 ಸಾವಿರ ಜನರ ಸ್ಥಳಾಂತರ
ಭಾರೀ ಪ್ರವಾಹ:18 ಸಾವು, 280ಕ್ಕೂ ಹೆಚ್ಚು ಮಂದಿಗೆ ಗಾಯ; 35 ಸಾವಿರ ಜನರ ಸ್ಥಳಾಂತರ