ಡ್ರಗ್ಸ್ ವಿಚಾರದಲ್ಲಿ ನನ್ನನ್ನು ಟಾರ್ಗೆಟ್ ಮಾಡಲಾಗಿದೆ | ರಾಗಿಣಿ ಹೇಳಿದ್ದೇನು? - Mahanayaka

ಡ್ರಗ್ಸ್ ವಿಚಾರದಲ್ಲಿ ನನ್ನನ್ನು ಟಾರ್ಗೆಟ್ ಮಾಡಲಾಗಿದೆ | ರಾಗಿಣಿ ಹೇಳಿದ್ದೇನು?

ragini
16/06/2021

ವಿಜಯಪುರ: ಡ್ರಗ್ಸ್ ಕೇಸ್ ವಿಚಾರದಲ್ಲಿ ನಾನು ಹೆಚ್ಚು ಮಾತನಾಡುವುದಿಲ್ಲ. ನನ್ನ ಮೇಲೆ ಜನರ ಪ್ರೀತಿ, ವಿಶ್ವಾಸ ಇದೆ. ನಾವು ತಪ್ಪು ಮಾಡಿಲ್ಲ ಅಂದ್ರೆ ಟೆನ್ಷನ್ ಮಾಡ್ಕೋಬಾರ್ದು ಎಂದು ನಟಿ ರಾಗಿಣಿ ದ್ವಿವೇದಿ ಹೇಳಿದರು.

ವಿಜಯಪುರದಲ್ಲಿ ಬಡ ಜನರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು,  ಡ್ರಗ್ಸ್ ವಿಚಾರದಲ್ಲಿ ನನ್ನನ್ನು 100% ಟಾರ್ಗೆಟ್ ಮಾಡಲಾಗಿದೆ.  ಹೆಣ್ಣು ಮಕ್ಕಳು ಅಂದ್ರೆ ಸಾಕು ಪ್ರತಿಯೊಂದು ವಿಚಾರದಲ್ಲಿಯೂ ಅವರು ಟಾರ್ಗೆಟ್ ಮಾಡಲಾಗುತ್ತಿದೆ. ಅವರನ್ನು ಟಾರ್ಗೆಟ್ ಮಾಡುವುದು ಕೂಡ ಸುಲಭ ಎಂದು ಅವರು ಹೇಳಿದರು.

ಪ್ರಶಾಂತ್ ಸಂಬರಗಿ ನನಗೆ ಪರಿಚಯವಿಲ್ಲ, ನಾನು ಅವರೊಂದಿಗೆ ಮಾತನಾಡಿಯೂ ಇಲ್ಲ. ಅವರು ಏನು ಮಾತನಾಡುತ್ತಾರೋ ಮಾತನಾಡಲಿ. ಅದನ್ನು ಕಂಟ್ರೋಲ್ ಮಾಡಲು ಆಗುವುದಿಲ್ಲ ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ