ಕುಡಿದ ಮತ್ತಿನಲ್ಲಿ ಮಹಿಳೆಯನ್ನು ಕೊಂದ: ಮೂವರಿಗೆ ಗಾಯಗೊಳಿಸಿದ ಚಾಲಕ

ಕುಡಿದ ಮತ್ತಿನಲ್ಲಿ ಚಾಲಕನೊಬ್ಬ ತನ್ನ ಕಾರಿನಿಂದ ನಾಲ್ವರಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಮೃತಪಟ್ಟು, ಇತರರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಜರಾತ್ ನ ವಡೋದರಾದಲ್ಲಿ ನಡೆದಿದೆ.
ಈ ಅಪಘಾತದ ವೀಡಿಯೊ ವೈರಲ್ ಆಗಿದೆ. ಕುಡಿದ ಚಾಲಕ ಕಾರಿನಿಂದ ಹೊರಬಂದು “ಮತ್ತೊಂದು ಸುತ್ತು” ಎಂದು ಕೂಗಿ ಈ ಕೃತ್ಯ ಎಸಗಿದ್ದಾನೆ. ಜನರು ಆರೋಪಿಯನ್ನು ಹಿಡಿಯಲು ಪ್ರಯತ್ನಿಸಿದರೂ ಆತ ತಪ್ಪಿಸೋಕೇ ಪ್ರಯತ್ನಿಸಿದ್ದಾನೆ.
ಕರೇಲಿಬಾಗ್ ಪ್ರದೇಶದ ಬಳಿ ಗುರುವಾರ ರಾತ್ರಿ ಈ ಅಪಘಾತ ಸಂಭವಿಸಿದೆ. ಚಾಲಕನನ್ನು ರಕ್ಷಿತ್ ಚೌರಾಸಿಯಾ ಎಂದು ಗುರುತಿಸಲಾಗಿದೆ. ಅವರು ಉತ್ತರ ಪ್ರದೇಶದ ವಾರಣಾಸಿ ನಿವಾಸಿಯಾಗಿದ್ದು, ವಡೋದರಾದಲ್ಲಿ ವಿದ್ಯಾರ್ಥಿಯಾಗಿದ್ದ.
ಅಪಘಾತದ ಸಮಯದಲ್ಲಿ ಚೌರಾಸಿಯಾ ಅವರೊಂದಿಗೆ ಪ್ರಯಾಣಿಸುತ್ತಿದ್ದ ಕಾರಿನ ಮಾಲೀಕರಾಗಿರುವ ಪ್ರಕರಣದ ಎರಡನೇ ಆರೋಪಿಯನ್ನು ಸಹ ಬಂಧಿಸಲಾಗಿದೆ. ಆತನನ್ನು ವಡೋದರಾದಲ್ಲಿ ವಾಸಿಸುವ ಮಿತ್ ಚೌಹಾಣ್ ಎಂದು ಗುರುತಿಸಲಾಗಿದ್ದು, ಖಾಸಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದಾನೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj