ನಾನು ಆಕಾಶದ ಕೆಳಗೆ ಭೂಮಿಯ ಮೇಲೆ ಇದ್ದೀನಿ, ಗಲಾಟೆ ಆಗಿದೆ, ಪೆಟ್ಟಾಗಿದೆ ಎಂದು ಆ್ಯಂಬುಲೆನ್ಸ್ ಗೆ ಕರೆ ಮಾಡಿದ ಕುಡುಕ - Mahanayaka

ನಾನು ಆಕಾಶದ ಕೆಳಗೆ ಭೂಮಿಯ ಮೇಲೆ ಇದ್ದೀನಿ, ಗಲಾಟೆ ಆಗಿದೆ, ಪೆಟ್ಟಾಗಿದೆ ಎಂದು ಆ್ಯಂಬುಲೆನ್ಸ್ ಗೆ ಕರೆ ಮಾಡಿದ ಕುಡುಕ

108 ambulance
21/03/2025


Provided by

ಚಿಕ್ಕಮಗಳೂರು: ನಾನು ಆಕಾಶದ ಕೆಳಗೆ ಭೂಮಿಯ ಮೇಲೆ ಇದ್ದೀನಿ ಬೇಗ ಬನ್ನಿ, ಶೃಂಗೇರಿಯಲ್ಲಿ ಗಲಾಟೆಯಾಗಿ ತುಂಬಾ ಪೆಟ್ಟಾಗಿದೆ ಬೇಗ ಬನ್ನಿ ಎಂದು ಕುಡುಕನೊಬ್ಬ  ಆ್ಯಂಬುಲೆನ್ಸ್ ಗೆ ಕರೆ ಮಾಡಿದ ಘಟನೆ ನಡೆದಿದ್ದು, ಕುಡುಕನ ಹುಚ್ಚಾಟಕ್ಕೆ ಆ್ಯಂಬುಲೆನ್ಸ್ ಸಿಬ್ಬಂದಿ ಸುಸ್ತಾಗಿದ್ದಾರೆ.


Provided by

ಕುಡುಕನ ಕರೆಯ ಹಿನ್ನೆಲೆ  ಬಾಳೆಹೊನ್ನೂರಿನಿಂದ 40 ಕಿ.ಮೀ.‌ದೂರದ ಶೃಂಗೇರಿಗೆ 108 ಆಂಬ್ಯುಲೆನ್ಸ್ ಬಂದಿದೆ.  ಆಂಬ್ಯುಲೆನ್ಸ್ ಬರ್ತಿದ್ದಂತೆ ಉಲ್ಟಾ ಹೊಡೆದ ಕುಡುಕ,  ನಂಗೆ ಆಂಬ್ಯುಲೆನ್ಸ್ ಬೇಡ ಎಂದ ಎಂದಿದ್ದಾನೆ.

ಇದೇ ವೇಳೆ,  ನಿಮಗೆ ತಾಕತ್ತಿದ್ರೆ ನನ್ನ ಹಿಡೀರಿ ನೋಡೋಣ ಎಂದು ಆ್ಯಂಬುಲೆನ್ಸ್ ಸಿಬ್ಬಂದಿಗೆ ಮದ್ಯವ್ಯಸನಿ ಸವಾಲು ಹಾಕಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಕುಡುಕನನ್ನ ಹಿಡಿಯಲು ಪೊಲೀಸರ ಹರಸಾಹಸ ಪಟ್ಟರು.


Provided by

ಕೊನೆಗೆ ಶೃಂಗೇರಿ ಪಟ್ಟಣದ ವೈನ್ ಶಾಪ್ ನಲ್ಲಿದ್ದ ಕುಡುಕನನ್ನು ಸ್ಥಳೀಯರು ಪೊಲೀಸರಿಗೆ  ಹಿಡಿದುಕೊಟ್ಟಿದ್ದಾರೆ. ಪೊಲೀಸರ ಕೈಗೆ ಸಿಕ್ಕಿ ಬಿದ್ದ ನಂತರ  ತಪ್ಪಾಯ್ತು  ಬಿಡಿ ಸರ್ ಎಂದು ಆತ ಗೋಗರೆದಿದ್ದಾನೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ