ಕೈ ಬಸ್ ಯಾತ್ರೆಯಲ್ಲಿ ಕುಣಿದು ಕುಪ್ಪಳಿಸಿದ ಕುಡುಕರು!! ಜನರತ್ತ ಸೇಬುಗಳನ್ನು ಎಸೆದ ಡಿಕೆಶಿ
ಚಾಮರಾಜನಗರ: ಕಾಂಗ್ರೆಸ್ ಪ್ರಜಾ ಧ್ವನಿ ಬಸ್ ಯಾತ್ರೆಯಲ್ಲಿ ಮದ್ಯಪಾನಿಗಳು ಕುಣಿದು ಕುಪ್ಪಳಿಸಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ನಡೆಯಿತು.
ಹನೂರು ಕ್ಷೇತ್ರದಲ್ಲಿ ಇಂದು ಡಿ.ಕೆ.ಶಿವಕುಮಾರ್ ನೇತೃತ್ವದ ಪ್ರಜಾಧ್ವನಿ ಯಾತ್ರೆ ಆರಂಭಕ್ಕೂ ಮುನ್ನ ವೇದಿಕೆಯಲ್ಲಿ ಕಲಾವಿದರೊಬ್ಬರು ಹಾಡನ್ನು ಹಾಡುತ್ತಿದ್ದರಿಂದ ಉತ್ತೇಜನಗೊಂಡ 7-8 ಮಂದಿ ಕುಡುಕರು ವೇದಿಕೆ ಬಳಿಯೇ ಕುಣಿದು ಕುಪ್ಪಳಿಸಿದರು. ತಾವು ಇಚ್ಛೆಪಡದ ಹಾಡು ಹಾಡಿದ ಕಲಾವಿದನ ಮೇಲೆ ಗರಂ ಆದ ಘಟನೆಯೂ ಜರುಗಿತು.
ಹನೂರು ಪಟ್ಟಣಕ್ಕೆ ಬಸ್ ಯಾತ್ರೆ ಪ್ರವೇಶಿಸಿದ ವೇಳೆ ಜನರು ಡಿಕೆಶಿ ಹಾಗೂ ಶಾಸಕ ನರೇಂದ್ರಗೆ ಬೃಹತ್ ಸೇಬಿನ ಹಾರ ಹಾಕಿದರು. ಈ ವೇಳೆ ಡಿಕೆಶಿ ಹಾರದಲ್ಲಿನ ಸೇಬುಗಳನ್ನು ಕಿತ್ತು ಜನರಿಗೆ ಎಸೆದರು.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw