ಚಿತ್ರದ ದೃಶ್ಯ ಈ ರೀತಿ ಕತ್ತರಿಸಿಕೊಂಡು ಹೋದರೆ, ಕೊನೆಗೆ ಧೂಮಪಾನದ ಜಾಹೀರಾತು ಮಾತ್ರ ಉಳಿಯುತ್ತದೆ | ಧ್ರುವ ಸರ್ಜಾ ಬೇಸರ
ಸಿನಿಡೆಸ್ಕ್: ಪೊಗರು ಚಿತ್ರದಲ್ಲಿ ಬ್ರಾಹ್ಮಣರ ಅವಹೇಳನ ಮಾಡಲಾಗಿದೆ ಎಂದು ಚಿತ್ರದ ದೃಶ್ಯಗಳನ್ನು ಕತ್ತರಿಸಿರುವ ಬಗ್ಗೆ ಧ್ರುವ ಸರ್ಜಾ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಹೀಗೆ ದೃಶ್ಯ ಕತ್ತರಿಸುತ್ತಾ ಹೋದರೆ, ಕೊನೆಗೆ ಧೂಮಪಾನದ ಬಗ್ಗೆ ಇರುವ ಜಾಹೀರಾತು ಮಾತ್ರವೇ ಚಿತ್ರದಲ್ಲಿ ಉಳಿಯುತ್ತದೆ ಎಂದು ಅವರು ಹೇಳಿದ್ದಾರೆ.
ಎಲ್ಲ ದೃಶ್ಯಗಳನ್ನು ಕತ್ತರಿಸಿದರೆ ನೋಡೋಕೆ ಏನಿರುತ್ತೆ? ಎಂದು ಧ್ರುವ ಪ್ರಶ್ನಿಸಿದ್ದಾರೆ. ಚಿತ್ರದಲ್ಲಿರುವ ದೃಶ್ಯಗಳನ್ನು ಹೀಗೆ ಕತ್ತರಿಸುತ್ತಾ ಹೋದರೆ, ಚಿತ್ರಕ್ಕೂ ಮೊದಲು “ನಾನು ಮುಖೇಶ್..” ಎನ್ನುವ ಜಾಹೀರಾತು ಬರುತ್ತದಲ್ವಾ? ಅದು ಮಾತ್ರವೇ ಉಳಿಯುತ್ತದೆ ಎಂದು ಅವರು ಪರೋಕ್ಷವಾಗಿ ನೋವು ತೋಡಿಕೊಂಡಿದ್ದಾರೆ.
ಈ ಸಿನಿಮಾ ನೋಡಿ. ನಿಮಗೆ ಇಷ್ಟವಾಗುತ್ತದೆ. ಇನ್ನೂ ಈ ಘಟನಾವಳಿಗಳ ಹಿಂದೆ ಯಾರಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಅದರ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಯಾರ ಬಗ್ಗೆಯೂ ಮಾತನಾಡುವಷ್ಟು ದೊಡ್ಡವನೂ ನಾನಲ್ಲ. ಮುಂದೆ ಸಿನಿಮಾ ಮಾಡುವಾಗ ಯಾವುದೇ ತಪ್ಪಾಗದಂತೆ ಮಾಡುತ್ತೇನೆ. ಎಲ್ಲವನ್ನು ಸಮಾನವಾಗಿ ಸ್ವೀಕರಿಸುತ್ತೇನೆ ಎಂದು ಧ್ರುವ ಹೇಳಿದರು.