ದೃಶ್ಯಂ 2 ಚಿತ್ರದ ಚಿತ್ರೀಕರಣ ಆರಂಭ | ಮೊದಲ ಭಾಗದ ಮುಂದುವರಿದ ಕಥೆ ಹೇಗಿರುತ್ತದೆ? - Mahanayaka
3:26 AM Wednesday 11 - December 2024

ದೃಶ್ಯಂ 2 ಚಿತ್ರದ ಚಿತ್ರೀಕರಣ ಆರಂಭ | ಮೊದಲ ಭಾಗದ ಮುಂದುವರಿದ ಕಥೆ ಹೇಗಿರುತ್ತದೆ?

drushyam 2 kannada
13/04/2021

ಸಿನಿಡೆಸ್ಕ್: ದೃಶ್ಯಂ 2 ಕನ್ನಡ ಚಿತ್ರದ ರಿಮೇಕ್ ಚಿತ್ರೀಕರಣ ಈ ತಿಂಗಳಿನಲ್ಲಿ ಆರಂಭವಾಗಲಿದ್ದು, ಮಲಯಾಲಂ ಚಿತ್ರದ ರಿಮೇಕ್ ಕನ್ನಡದಲ್ಲಿ ಬರಲಿದೆ. ದೃಶ್ಯಂ ಮೊದಲ ಭಾಗ ಕನ್ನಡದಲ್ಲಿ ಕೂಡ ಹಿಟ್ ಆಗಿತ್ತು. ಇದೀಗ ಎರಡನೇ ಭಾಗಕ್ಕೆ ಬಣ್ಣ ಹಚ್ಚಲು ರವಿಚಂದ್ರನ್ ಸಿದ್ಧರಾಗಿದ್ದಾರೆ.

ಒಂದನೇ ಭಾಗದಲ್ಲಿ ಚಿತ್ರದ ಕಥಾನಾಯಕ ಪೊನ್ನಪ್ಪ(ರವಿಚಂದ್ರನ್ ) ತನ್ನ ಕುಟುಂಬದ ರಕ್ಷಣೆಗಾಗಿ ಏನು ಮಾಡಲು ಬೇಕಾದರೂ ಸಿದ್ಧರಾಗುತ್ತಾರೆ. ತನ್ನ ಪತ್ನಿ ಹಾಗೂ ಮಗಳ ಕೈಯಿಂದ ಅಚಾನಕ್ ಆಗಿ ನಡೆದ ಒಂದು ಕೊಲೆ ಪೊನ್ನಪ್ಪನ ಬದುಕನ್ನೇ ಬದಲಿಸಿ ಬಿಡುತ್ತದೆ.  ಪೊನ್ನಪ್ಪ ಈ ಪ್ರಕರಣದಿಂದ ತನ್ನ ಪತ್ನಿ ಹಾಗೂ ಮಕ್ಕಳನ್ನು ಕಾಪಾಡಲು ಕೊಲೆಯಾದ ಯುವಕನ ಮೃತದೇಹವನ್ನು ಹೊಸದಾಗಿ ನಿರ್ಮಾಣವಾಗುತ್ತಿರುವ ಪೊಲೀಸ್ ಸ್ಟೇಷನ್ ನ ಅಡಿಯಲ್ಲಿಯೇ ಹೂತು ಹಾಕುತ್ತಾನೆ. ಈ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಪೊಲೀಸರನ್ನು ದಿಕ್ಕು ತಪ್ಪಿಸುವ ಮೂಲಕ ತನ್ನ ಕುಟುಂಬವನ್ನು ಕಾಪಾಡುತ್ತಾನೆ.

ಮೊದಲ ಭಾಗದ ಕಥೆ ಎರಡನೇ ಭಾಗದಲ್ಲಿ ಮುಂದುವರಿಯುತ್ತದೆ. ಸತ್ಯವನ್ನು ಎಷ್ಟು ಮುಚ್ಚಿಡಲು ಪ್ರಯತ್ನಿಸಿದರೂ ಅದು ಒಂದಲ್ಲ ಒಂದು ದಿನ ಹೊರ ಬರುತ್ತದೆ. ಎರಡನೇ ಭಾಗದಲ್ಲಿ ಪೊಲೀಸರು ಪೊಲೀಸ್ ಠಾಣೆಯ ಅಡಿಯಲ್ಲಿರುವ ಯುವಕನ ಅಸ್ತಿಯನ್ನು ಹೊರ ತೆಗೆಯುತ್ತಾರೆ. ಈ ಸಂದರ್ಭದಲ್ಲಿ ನಾಯಕ ಹೇಗೆ ತನ್ನ ಕುಟುಂಬವನ್ನು ಕಾಪಾಡಿಕೊಳ್ಳುತ್ತಾನೆ ಎನ್ನುವುದು ಎರಡನೇ ಭಾಗದ ಮುಖ್ಯ ಕಥೆಯಾಗಿದೆ.

ಇತ್ತೀಚಿನ ಸುದ್ದಿ