ದುಬೈನ ಸರಕು ಸಾಗಣೆ ಹಡಗಿನಲ್ಲಿ ಭಾರೀ ಸ್ಫೋಟ: ಅಷ್ಟಕ್ಕೂ ಅಲ್ಲಿ ನಡೆದದ್ದೇನು ಗೊತ್ತಾ?
ದುಬೈ: ದುಬೈನ ಮುಖ್ಯ ಸರಕು ಸಾಗಣೆ ಹಡಗಿನಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಸಮೀಪದ ಮೂರು ಮನೆಗಳ ಕಿಟಕಿ, ಬಾಗಿಲುಗಳು ಅಲುಗಾಡಿವೆ ಎಂದು ಎಮಿರೈಟ್ಸ್ ನ ಮಾಧ್ಯಮ ಕಚೇರಿ ತಿಳಿಸಿದೆ.
ಸ್ಫೋಟಕ್ಕೆ ಕಾರಣಗಳೇನು ಎನ್ನುವುದು ತಿಳಿದು ಬಂದಿಲ್ಲ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಜಿಬೆಲ್ ಅಲಿ ಬಂದರ್ ನಲ್ಲಿ ಈ ಸ್ಫೋಟ ಸಂಭವಿಸಿದ್ದು, ಕಂಟೈನರ್ ನೊಳಗೆ ಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ.
ಈ ಬಂದರು ವಿಮಾನ ವಾಹಕ ನೌಕೆಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದ್ದು, ಜಗತ್ತಿನ ಅತಿ ನಿಬಿಡ ಬಂದರುಗಳಲ್ಲಿ ಒಂದಾಗಿದೆ. ಸ್ಫೋಟದಿಂದ ಹಡಗಿನಲ್ಲಿ ಸೃಷ್ಟಿಯಾಗಿರುವ ಬೆಂಕಿಯನ್ನು ನಂದಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಫ್ಲ್ಯಾಟ್ ಗೆ ನುಗ್ಗಿ ಯುವತಿಯನ್ನು ಕಟ್ಟಿ ಹಾಕಿ ಸಾಮೂಹಿಕ ಅತ್ಯಾಚಾರ: 15 ಲಕ್ಷ ರೂಪಾಯಿ ಕಳವು
الحريق تحت السيطرة ولا توجد أي وفيات أو إصابات جراء الحادث في ميناء جبل علي pic.twitter.com/sgySfjTgKn
— Dubai Media Office (@DXBMediaOffice) July 7, 2021