ದುಬೈನಿಂದ ಬಂದಿದ್ದ ಮಹಿಳೆ ಅಪಾರ್ಟ್ ನಲ್ಲಿ ಬರ್ಬರವಾಗಿ ಹತ್ಯೆ | ಬ್ಯಾಂಕ್ ನಿಂದ ಬಂದ ಮೇಲೆ ಪ್ಲಾಟ್ ಗೆ ನುಗ್ಗಿದ್ದು ಯಾರು? - Mahanayaka
10:04 PM Saturday 10 - January 2026

ದುಬೈನಿಂದ ಬಂದಿದ್ದ ಮಹಿಳೆ ಅಪಾರ್ಟ್ ನಲ್ಲಿ ಬರ್ಬರವಾಗಿ ಹತ್ಯೆ | ಬ್ಯಾಂಕ್ ನಿಂದ ಬಂದ ಮೇಲೆ ಪ್ಲಾಟ್ ಗೆ ನುಗ್ಗಿದ್ದು ಯಾರು?

vishala
14/07/2021

ಉಡುಪಿ:  ಕೆಲವು ದಿನಗಳ ಹಿಂದೆಯಷ್ಟೇ ದುಬೈನಿಂದ ಉಡುಪಿ ಜಿಲ್ಲೆಯ ಬ್ರಹ್ಮಾವರದ ತನ್ನ ಊರಿಗೆ ಮರಳಿದ್ದ 35 ವರ್ಷ ವಯಸ್ಸಿನ ಮಹಿಳೆ  ಅಪಾರ್ಟ್ ಮೆಂಟ್ ನಲ್ಲಿಯೇ ಬರ್ಬರವಾಗಿ ಹತ್ಯೆಯಾಗಿರುವ ಘಟನೆ  ಸೋಮವಾರ ನಡೆದಿದೆ.

35 ವರ್ಷ ವಯಸ್ಸಿನ ವಿಶಾಲಾ ಮೃತಪಟ್ಟ ಮಹಿಳೆಯಾಗಿದ್ದು, ದುಬೈನಲ್ಲಿ ಪತಿಯ ಜೊತೆಗೆ ನೆಲೆಸಿದ್ದ ಇವರು  ತಮ್ಮ ಕುಮ್ರಗೋಡುವಿನ ಫ್ಲಾಟ್ ಗೆ ಆಗಮಿಸಿದ್ದರು. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ದಾಖಲೆಗಳಿಗೆ ಅವರು ಸಹಿ ಹಾಕಬೇಕಾಗಿದ್ದರಿಂದಾಗಿ ಅವರು ದುಬೈನಿಂದ ಆಗಮಿಸಿದ್ದರು ಎನ್ನಲಾಗಿದೆ.

ಸೋಮವಾರ ತಮ್ಮ ಮಗಳನ್ನು ಕುಂದಾಪುರದ ಅಜ್ಜ- ಅಜ್ಜಿಯ ಮನೆಗೆ ಕಳುಹಿಸಿದ್ದ ವಿಶಾಲ ಮನೆಯಲ್ಲಿ ಒಬ್ಬಂಟಿಯಾಗಿದ್ದರು ಎನ್ನಲಾಗಿದೆ. ಬ್ಯಾಂಕ್ ನಲ್ಲಿ ಕೆಲಸ ಇದ್ದುದರಿಂದ ಆಟೋದಲ್ಲಿ  ಅವರು ಬ್ಯಾಂಕ್ ಗೆ ತೆರಳಿದ್ದರು. ಬ್ಯಾಂಕ್ ನ ಲಾಕರ್ ನಲ್ಲಿದ್ದ ಚಿನ್ನಾಭರಣಗಳನ್ನು ತೆಗೆದುಕೊಂಡು ಅದೇ ಆಟೋದಲ್ಲಿ ಬಂದಿದ್ದರು. ಇದಾದ ಬಳಿಕ ಅವರು ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ ಎಂದು ಹೇಳಲಾಗಿದೆ.

ಬ್ಯಾಂಕ್ ಕೆಲಸ ಮುಗಿದ ಬಳಿಕ ಮಗಳನ್ನು ಕರೆದುಕೊಂಡು ಹೋಗುವುದಾಗಿ ವಿಶಾಲಾ ತನ್ನ ಕುಂದಾಪುರದಲ್ಲಿರುವ ತಂದೆ ತಾಯಿಗೆ ಹೇಳಿದ್ದರು. ಆದರೆ, ಅವರು ರಾತ್ರಿಯಾದರೂ ಬಾರದೇ ಇದ್ದಾಗ  ಕರೆ ಮಾಡಿದ್ದು, ಅವರು ರಿಸಿವ್ ಮಾಡದಿದ್ದಾಗ ಗಾಬರಿಯಿಂದ ದುಬೈನಲ್ಲಿರುವ ಅವರ ಪತಿಗೆ ವಿಚಾರ ತಿಳಿಸಿದ್ದಾರೆ. ಈ ವೇಳೆ ಪತಿ ರಾಮಕೃಷ್ಣ ಗಾಣಿಗ ಅವರು ಫ್ಲಾಟ್ ಗೆ ಹೋಗಿ ನೋಡಿ ಬನ್ನಿ ಎಂದು ಹೇಳಿದ್ದಾರೆ.

ತಕ್ಷಣವೇ ಅಪಾರ್ಟ್ ಮೆಂಟ್ ಗೆ ಬಂದ ಅವರಿಗೆ ಬಾಗಿಲು ಲಾಕ್ ಮಾಡಿದ ಸ್ಥಿತಿ ಕಂಡು ಬಂದಿದ್ದು, ತಮ್ಮ ಕೀ ಬಳಸಿ ಅವರು ಮನೆಯೊಳಗೆ ಹೋಗಿ ನೋಡಿದಾಗ ವಿಶಾಲಾ ಅವರು ಹಾಲ್ ನಲ್ಲಿ ಹತ್ಯೆಗೀಡಾಗಿದ್ದು, ಬೆಡ್ ರೂಮ್ ಹಾಗೂ ಬೀರುವಿನಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿತ್ತು. ಚಿನ್ನಾಭರಣಗಳು ನಾಪತ್ತೆಯಾಗಿದ್ದವು ಎಂದು ತಿಳಿದು ಬಂದಿದೆ.

ಇನ್ನೂ ಘಟನೆಯ ಬಳಿಕ ಆಟೋ ಚಾಲಕನ್ನು ಪೊಲೀಸರು  ಕರೆದು ವಿಚಾರಣೆ ನಡೆಸಿದ್ದಾರೆ. ತಾನು  ಫ್ಲಾಟ್ ಗೆ  ಬಿಟ್ಟು ವಾಪಸ್ ಹೋದ ಮೇಲೆ ಏನು ನಡೆದಿದೆ ಎನ್ನುವುದು ನನಗೆ ಗೊತ್ತಿಲ್ಲ ಎಂದು ಆಟೋ ಚಾಲಕ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಹೇಳಲಾಗಿದೆ.

ಇನ್ನಷ್ಟು ಸುದ್ದಿಗಳು:

ಬುದ್ಧಿವಾದ ಹೇಳಿದ್ದಕ್ಕೆ ತಮ್ಮನನ್ನು ಹತ್ಯೆ ಮಾಡಿ, ಬೆಡ್ ಶೀಟ್ ನಲ್ಲಿ ಮುಚ್ಚಿ ಪರಾರಿಯಾದ ಅಣ್ಣ!

ಸ್ನೇಹಿತನಿಗೆ ಸಾಲಕೊಟ್ಟು ಪ್ರಾಣ ಕಳೆದುಕೊಂಡ ಯುವಕ! | 4 ಸಾವಿರ ರೂ.ಗಾಗಿ ಭೀಕರ ಹತ್ಯೆ

ಟಿಕ್ ಟಾಕ್ ನಲ್ಲಿ ಲವ್: ಮದುವೆಯಾದ 7 ತಿಂಗಳಲ್ಲೇ ಯುವತಿ ಆತ್ಮಹತ್ಯೆ

ಮದ್ಯ ಕುಡಿಯಲು ಹಣ ನೀಡಲಿಲ್ಲ ಎಂದು ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿದ ಪತಿ

ಇತ್ತೀಚಿನ ಸುದ್ದಿ