ಆಸ್ಪತ್ರೆಯಲ್ಲಿ ದುಬಾರಿಯಾದ ಇಡ್ಲಿ | 125 ರೂ.ಗೆ ಕೊಡುತ್ತಿರೋದು 2 ಇಡ್ಲಿ - Mahanayaka
9:11 PM Wednesday 11 - December 2024

ಆಸ್ಪತ್ರೆಯಲ್ಲಿ ದುಬಾರಿಯಾದ ಇಡ್ಲಿ | 125 ರೂ.ಗೆ ಕೊಡುತ್ತಿರೋದು 2 ಇಡ್ಲಿ

idli
17/05/2021

ಚಾಮರಾಜನಗರ: ಜಿಲ್ಲೆಯ ಸಂತೇಮರಹಳ್ಳಿ ಕೊವಿಡ್ ಆಸ್ಪತ್ರೆಯ ಇಡ್ಲಿ ಈಗ ಭಾರೀ ಫೇಮಸ್ ಆಗಿದೆ. ಇಲ್ಲಿ ಒಂದು ಇಡ್ಲಿಯ ಬೆಲೆ 62 ರೂಪಾಯಿ, 2 ಇಡ್ಲಿಗೆ 125 ರೂಪಾಯಿಯಂತೆ.

ಇದು ಸಂತೇಮರಹಳ್ಳಿ ಕೊವಿಡ್ ಆಸ್ಪತ್ರೆಯ ಅವ್ಯವಸ್ಥೆಯಾಗಿದ್ದು, ಪೌಷ್ಠಿಕ ಆಹಾರದ ಹೆಸರಿನಲ್ಲಿ ರೋಗಿಗಳನ್ನು ಅರೆ ಹೊಟ್ಟೆಯಲ್ಲಿ ಕೂರಿಸುತ್ತಿರುವ ಆರೋಪ ಕೇಳಿ ಬಂದಿದೆ.  ಬೆಳಗ್ಗಿನ ಉಪಾಹಾರಕ್ಕೆ ಟೆಂಡರ್ ದಾರರು 125 ರೂಪಾಯಿ ಚಾರ್ಜ್ ಮಾಡುತ್ತಿದ್ದಾರೆ. ಆದರೆ, ರೋಗಿಗಳಿಗೆ ಕೇವಲ 2 ಇಡ್ಲಿಗಳನ್ನು ನೀಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಆಕ್ರೋಶ ಹೊರ ಹಾಕಿದ್ದು, ಬೆಳಗ್ಗೆ 2 ಇಡ್ಲಿ ನೀಡಿದರೆ, ಆ ಬಳಿಕ ಮಧ್ಯಾಹ್ನದವರೆಗೆ ರೋಗಿಗಳು ಕಾಯಬೇಕು. ಬಿಪಿ, ಶುಗರ್  ಇರುವ ರೋಗಿಗಳು ಸ್ಥಿತಿ ಏನು ಎಂದು ಅವರು ಪ್ರಶ್ನಿಸಿದ್ದಾರಲ್ಲದೇ, ಇಲ್ಲಿನ ಶೌಚಾಲಯ ಕೂಡ ಕೊಳಕಾಗಿದ್ದು, ಅದನ್ನೂ ಸರಿಪಡಿಸುವವರಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ