15 ಲಕ್ಷ ರೂ. ಬೆಲೆ ಬಾಳುವ ಬೃಹತ್ ಆಮೆ ಕಳವು | ಉದ್ಯಾನವನದ ಸಿಬ್ಬಂದಿಗಳಿಂದಲೇ ಕೃತ್ಯ?
26/12/2020
ಚೆನೈ: ದಕ್ಷಿಣ ಚೆನೈನ ಮಹಾಬಲಿಪುರಂನಲ್ಲಿ ಮದ್ರಾಸ್ ಕ್ರೊಕೊಡೈಲ್ ಮೊಸಳೆ ಪಾರ್ಕ್ ನಲ್ಲಿದ್ದ ದುಬಾರಿ ಬೆಲೆಬಾಳುವ ಅಲ್ಡಾಬ್ರಾ ಪ್ರಭಾವದ ಆಮೆ ಕಳವಾಗಿರವ ಘಟನೆ ನಡೆದಿದ್ದು, ಇದರ ಮೌಲ್ಯವು 15 ಲಕ್ಷ ರೂಪಾಯಿಗಳು ಎಂದು ಅಂದಾಜಿಸಲಾಗಿದೆ.
ಅಲ್ಡಾಬ್ರಾ ಪ್ರಭೇದದ ಆಮೆಗಳು ದೀರ್ಘಾಯುಷ್ಯ ಹೊಂದಿದ್ದು ಆಮೆಯು ಸುಮಾರು 80-100ಕೆ.ಜಿ. ತೂಕದ ಜಗತ್ತಿನ ದೊಡ್ಡ ಗಾತ್ರದ ಆಮೆಗಳಲ್ಲಿ ಒಂದಾಗಿದೆ. ಈ ಉದ್ಯಾನವನದಲ್ಲಿದ್ದ ಆಮೆಕಾಣೆಯಾಗಿ ಆರು ವಾರಗಳು ಕಳೆದು ತಡವಾಗಿ ಬೆಳಕಿಗೆ ಬಂದಿದೆ.
ಆಮೆಯನ್ನು ಯಾರೋ ಕಳ್ಳತನ ಮಾಡಿದ್ದಾರೆ ಎಂದು ಮೊಸಳೆ ಪಾರ್ಕ್ ಆಡಳಿತ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನನ್ವಯ ತನಿಖೆ ಶುರು ಮಾಡಿರುವ ಪೊಲೀಸರು ಇದರಲ್ಲಿ ಪಾರ್ಕ್ ಸಿಬ್ಬಂದಿಯ ಕೈವಾಡವಿದೆ ಇಂದು ಶಂಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ಪಾರ್ಕ್ ಆಡಳಿತ ಸಿಬ್ಬಂದಿಯನ್ನು ವಿಚಾರಣೆ ಮಾಡುವುದಾಗಿ ತಿಳಿಸಿದ್ದಾರೆ.