ಬಂಗಾಳದಲ್ಲಿ ಬಿಜೆಪಿ ಟ್ಯಾಗ್‌ಗಳನ್ನು ಹೊಂದಿದ ಇವಿಎಂಗಳ ಬಳಕೆ: ಟಿಎಂಸಿ ಗಂಭೀರ ಆರೋಪ - Mahanayaka

ಬಂಗಾಳದಲ್ಲಿ ಬಿಜೆಪಿ ಟ್ಯಾಗ್‌ಗಳನ್ನು ಹೊಂದಿದ ಇವಿಎಂಗಳ ಬಳಕೆ: ಟಿಎಂಸಿ ಗಂಭೀರ ಆರೋಪ

25/05/2024

ಪಶ್ಚಿಮ ಬಂಗಾಳದ ಬಂಕೂರ ಜಿಲ್ಲೆಯಲ್ಲಿ ಬಿಜೆಪಿ ಟ್ಯಾಗ್‌ಗಳನ್ನು ಹೊಂದಿದ ಇವಿಎಂಗಳನ್ನು ಬಳಸಲಾಗಿದೆ ಎಂದು ತೃಣಮೂಲ ಕಾಂಗ್ರೆಸ್‌ ಆರೋಪಿಸಿದೆ. ಇದಕ್ಕೆ ಚುನಾವಣಾ ಆಯೋಗ ಪ್ರತಿಕ್ರಿಯಿಸಿದ್ದು, ಈ ಪ್ರಕ್ರಿಯೆಯ ಸಂಪೂರ್ಣ ವೀಡಿಯೋ ಚಿತ್ರೀಕರಣ ನಡೆಸಲಾಗಿದೆ ಎಂದು ಹೇಳಿದೆ.

“ಇವಿಎಂಗಳನ್ನು ತಿರುಚಿ ಮತದಾನ ಪ್ರಕ್ರಿಯೆಯಲ್ಲಿ ಅಕ್ರಮ ನಡೆಲು ಬಿಜೆಪಿ ಯತ್ನಿಸುತ್ತಿರುವ ಬಗ್ಗೆ ಸಿಎಂ ಮಮತಾ ಬ್ಯಾನರ್ಜಿ ದೂರುತ್ತಿದ್ದಾರೆ. ಬಂಕೂರಾದ ರಘುನಾಥಪುರದಲ್ಲಿ 5 ಇವಿಎಂಗಳಲ್ಲಿ ಬಿಜೆಪಿ ಟ್ಯಾಗ್‌ ಕಂಡು ಬಂದವು,” ಎಂದು ಟಿಎಂಸಿ ಟ್ವೀಟ್‌ ಮಾಡಿ ಬಿಜೆಪಿ ಎಂದು ಬರೆಯಲಾದ ಟ್ಯಾಗ್‌ ಹೊಂದಿದ್ದ ಎರಡು ಇವಿಎಂಗಳ ಚಿತ್ರ ಪೋಸ್ಟ್‌ ಮಾಡಿತ್ತು.

ಇದಕ್ಕೆ ಚುನಾವಣಾ ಆಯೋಗ ಪ್ರತಿಕ್ರಿಯಿಸಿದೆ. “ಕಮಿಷನಿಂಗ್‌ ವೇಳೆ ಸಮಾನ ವಿಳಾಸ ಟ್ಯಾಗ್‌ಗಳಿಗೆ ಅಭ್ಯರ್ಥಿಗಳು ಸಹಿ ಹಾಕಿದ್ದಾರೆ ಹಾಗೂ ಈ ಸಂದರ್ಭ ಅವರ ಏಜಂಟರೂ ಉಪಸ್ಥಿತರಿರುತ್ತಾರೆ. ಆ ಸಂದರ್ಭ ಕಮಿಷನಿಂಗ್‌ ಸಭಾಂಗಣದಲ್ಲಿ ಬಿಜೆಪಿ ಅಭ್ಯರ್ಥಿಯ ಪ್ರತಿನಿಧಿ ಮಾತ್ರ ಉಪಸ್ಥಿತರಿದ್ದುದರಿಂದ, ಅವರ ಸಹಿ ಮಾತ್ರ ಪಡೆದುಕೊಳ್ಳಲಾಗಿತ್ತು. ಆದರೆ ಮತದಾನ ವೇಳೆ ಉಪಸ್ಥಿತರಿದ್ದ ಎಲ್ಲಾ ಏಜೆಂಟರ ಸಹಿ ಪಡೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.


Provided by

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ