ಅವಳಿ  ಮಕ್ಕಳ ಜೊತೆ ದುರಂತಕ್ಕೆ ಹೊರಟ ಮಹಿಳೆ ಮತ್ತು ಮಕ್ಕಳ ರಕ್ಷಣೆ - Mahanayaka

ಅವಳಿ  ಮಕ್ಕಳ ಜೊತೆ ದುರಂತಕ್ಕೆ ಹೊರಟ ಮಹಿಳೆ ಮತ್ತು ಮಕ್ಕಳ ರಕ್ಷಣೆ

udupi news
08/08/2022

ಉಡುಪಿ: ನಗರದ  ಸಿಟಿ ಬಸ್ ನಿಲ್ದಾಣದಲ್ಲಿ ತನ್ನ ಎರಡು ಪುಟ್ಟ ಮಕ್ಕಳೊಂದಿಗೆ ಕೌಟುಂಬಿಕ ಕಲಹದಿಂದ ಬೇಸತ್ತು ರೈಲು ಮುಖಾಂತರ ಎಲ್ಲಿಯಾದರೂ ಹೊರಟು ಹೋಗುತ್ತೇನೆ ಎಂದ ಮಹಿಳೆಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ ಸಖಿ ಸೆಂಟರಿಗೆ ದಾಖಲಿಸಿದ ಘಟನೆ ಜುಲೈ  7ರ  ರಾತ್ರಿ ನಡೆದಿದೆ.


Provided by

ಮಹಿಳೆಯು ಮೂಲತಃ ಹೊರರಾಜ್ಯದವಳಾಗಿದ್ದು, ಗಂಡನೊಂದಿಗೆ ಮನಸ್ಥಾಪಗೊಂಡು ಬೇಸತ್ತು ನಗರ ಬಸ್ ನಿಲ್ದಾಣದಲ್ಲಿ ರೈಲ್ವೆ ನಿಲ್ದಾಣಕ್ಕೆ ಹೋಗಲು ಕಣ್ಣೀರಿಡುತ್ತಿದಳು, ಬಸ್ ನಿರ್ವಾಹಕರೊಬ್ಬರಿಂದ ಮಾಹಿತಿ ಪಡೆದ ವಿಶು ಶೆಟ್ಟಿ, ಕೂಡಲೇ ಸ್ಥಳಕ್ಕೆ ಧಾವಿಸಿ ಮಹಿಳೆ ಮತ್ತು ಮಕ್ಕಳನ್ನು ರಕ್ಷಿಸಿ ತನ್ನ ವಾಹನದಲ್ಲಿ ಕರೆದುಕೊಂಡು ಹೋಗಿ ಸಖಿ ಸೆಂಟರಿಗೆ ದಾಖಲಿಸಿದ್ದಾರೆ.

ರಕ್ಷಣಾ ಕಾರ್ಯದಲ್ಲಿ 112ಪೊಲೀಸ್ ಸಹಾಯ ದೊರಕಿದೆ, ಮಾಹಿತಿಯನ್ನು ನಗರ ಪೊಲೀಸ್ ಠಾಣೆಗೆ ನೀಡಲಾಗಿದೆ. ಸಖಿ ಸೆಂಟರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಯೋಜನೆಯಾಗಿದ್ದು 24×7ರಂತೆ     ನಿಟ್ಟೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ, ಯಾವುದೇ ಸಮಯದಲ್ಲಿ ಅಸಹಾಯಕತೆಗೆ ಒಳಗಾದ ಮಹಿಳೆಯರು ಸಖಿ ಸೆಂಟರನ್ನು ಸಂಪರ್ಕಿಸಿ ಸಮಾಲೋಚನೆ, ಕಾನೂನು ನೆರವು, ವಸತಿಯನ್ನು ಪಡೆಯಬಹುದು.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ