ದುರ್ಗಾ ದೌಡ್ ಕಾರ್ಯಕ್ರಮದಲ್ಲಿ ಖಡ್ಗ, ತಲವಾರು ಪ್ರದರ್ಶನ: ಶ್ಯಾಮರಾಜ್ ಬಿರ್ತಿ ಖಂಡನೆ - Mahanayaka
11:23 PM Wednesday 5 - February 2025

ದುರ್ಗಾ ದೌಡ್ ಕಾರ್ಯಕ್ರಮದಲ್ಲಿ ಖಡ್ಗ, ತಲವಾರು ಪ್ರದರ್ಶನ: ಶ್ಯಾಮರಾಜ್ ಬಿರ್ತಿ ಖಂಡನೆ

durgadwod
02/10/2022

ಇಂದು ನಡೆದ ದುರ್ಗಾ ದೌಡ್ ಕಾರ್ಯಕ್ರಮದಲ್ಲಿ ಖಡ್ಗ ತಲವಾರು ಜಳಪಿಸಿ ಉಡುಪಿಯಲ್ಲಿ ಭಯದ ವಾತಾವರಣ ಸೃಷ್ಟಿಸಲು ಕಾರಣರಾದ ಗೂಂಡಾಗಳ ಮೇಲೆ ಈ ಕೂಡಲೇ ಕೇಸು ದಾಖಲಿಸಬೇಕು. ಸೌಹಾರ್ದ ಬದುಕಿಗೆ , ಬಹುತ್ವಕ್ಕೆ ಹೆಸರುವಾಸಿಯಾದ ಉಡುಪಿಯನ್ನು ಉತ್ತರ ಪ್ರದೇಶದ ಗೂಂಡಾ ರಾಜ್ಯ ಮಾಡಲು ಹೊರಟಿರುವ ಕೋಮುವಾದಿಗಳ ನಡೆಯನ್ನು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಜಿಲ್ಲಾ ಸಂಘಟನಾ ಸಂಚಾಲಕರಾದ  ಶ್ಯಾಮರಾಜ್ ಬಿರ್ತಿ ತೀವ್ರವಾಗಿ ಖಂಡಿಸಿದರು.

ಉಡುಪಿಯನ್ನು ಮಂಗಳೂರು ಮಾಡಲು ಹೊರಟಿರುವ ಧರ್ಮಾಂಧ ಶಕ್ತಿಗಳ ನಡೆಯು ಯಾವ ಕಾರಣಕ್ಕೂ ಸಹಿಸಲಸಾಧ್ಯ. ಉಡುಪಿಯ ಎಲ್ಲಾ ಜಾತ್ಯಾತೀತ ವಾದಿಗಳು ಈ ಘಟನೆಯ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು ಎಂದರು.

ಕರ್ನಾಟಕ ಗ್ರಹ ಸಚಿವರಾದ ಆರಗ ಜ್ಞಾನೇಂಧ್ರ ರವರು ಈ ಕೂಡಲೇ ಉಡುಪಿ ಪೋಲೀಸ್ ವರಿಷ್ಠಾಧಿಕಾರಿಯವರಿಗೆ ಈ ಕಿಡಿಗೇಡಿ ಆರೋಪಿಗಳನ್ನು ಬಂಧಿಸಲು ಸೂಚನೆ ನೀಡಬೇಕೆಂದು ಈ ಮೂಲಕ ಆಗ್ರಹಿಸುತ್ತೇನೆ  ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ