ದುರ್ಗಾ ಪೂಜೆ ವೇಳೆ ಕೋಮುಗಲಭೆಗೆ ಕಾರಣವಾಗಿದ್ದ ಪ್ರಮುಖ ಆರೋಪಿ ಅರೆಸ್ಟ್!
ಬಾಂಗ್ಲಾದೇಶ: ಬಾಂಗ್ಲಾದೇಶದಲ್ಲಿ ಕೋಮುಗಲಭೆಯಿಂದ ಉಂಟಾದ ಹಿಂಸಾಚಾರಕ್ಕೆ ಕಾರಣನಾದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
35 ವರ್ಷ ವಯಸ್ಸಿನ ಇಕ್ಬಾಲ್ ಹುಸೇನ್ ಬಂಧಿತ ವ್ಯಕ್ತಿ ಎಂದು ತಿಳಿದು ಬಂದಿದ್ದು, ಕಾಕ್ಸ್ ಬಝಾರ್ ನ ಶುಗಂಧಾ ಬೀಚ್ ಪ್ರದೇಶದಿಂದ ಈತನನ್ನು ಬಂಧಿಸಲಾಗಿದೆ ಎಂದು ಅಲ್ಲಿನ ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಹುಸೇನ್ ಕೊಮಿಲ್ಲಾದ ಸುಹಾನಗರ ಪ್ರದೇಶವನಾಗಿದ್ದು, ಅಕ್ಟೋಬರ್ 13ರಂದು ದುರ್ಗಾ ಪೂಜೆ ಪಂದಲ್ ಒಂದರಲ್ಲಿ ಪವಿತ್ರ ಕುರ್ ಆನ್ ಇರಿಸಿದ್ದ. ಇದು ಎರಡೂ ಧರ್ಮಿಯರ ನಡುವೆ ವಿವಾದಕ್ಕೆ ಕಾರಣವಾಗಿದ್ದು, ಇದೇ ವಿಚಾರಕ್ಕೆ ಬಾಂಗ್ಲಾದೇಶದ ಚಂದಪುರ್, ಹಜಿಗಾಂಜ್, ಚಟ್ಟೋಗ್ರಾಮ್ಸ್, ಕಾಕ್ಸ್ ಬಝಾರ್, ಪೆಕುವಾ, ರಂಗ್ ಪುರನ ಪ್ರಿಗಂಜ್ ಸೇರಿದಂತೆ ಹಲವೆಡೆಗಳಲ್ಲಿ ಕೋಮುಗಲಭೆ ನಡೆದಿತ್ತು ಎನ್ನಲಾಗಿದೆ. ಸಿಸಿ ಟಿವಿಯಲ್ಲಿ ದೊರೆತ ತುಣುಕಿನ ಆಧಾರದಲ್ಲಿ ಇಕ್ವಾಲ್ ಹುಸೇನ್ ನನ್ನು ಬಂಧಿಸಲಾಗಿದೆ ಎಂಧು ತಿಳಿದು ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಇನ್ನಷ್ಟು ಸುದ್ದಿಗಳು…
ಲೈಂಗಿಕ ದೌರ್ಜನ್ಯ: ಆರೋಪಿ ವಕೀಲ ರಾಜೇಶ್ ಭಟ್ ನನ್ನು ರಕ್ಷಿಸಲು ನಡೆದಿತ್ತು ಭಾರೀ ಷಡ್ಯಂತ್ರ!
“ಬಾಯಿ ತೊಳೆದುಕೊಳ್ಳಿ” ಎಂದು ನಳಿನ್ ಕುಮಾರ್ ಗೆ ಫಿನಾಯಿಲ್ ಪಾರ್ಸೆಲ್!
ದಲಿತ ಬಾಲಕಿಯ ಅತ್ಯಾಚಾರ: ಆರೆಸ್ಸೆಸ್ ಮುಖಂಡನ ವಿರುದ್ಧ ದಲಿತ ಸಂಘಟನೆಗಳಿಂದ ಪ್ರತಿಭಟನೆ
ಡ್ರಗ್ಸ್ ದಂಧೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರದ್ದೇ ದೊಡ್ಡಪಾಲು | ಪ್ರಿಯಾಂಕ್ ಖರ್ಗೆ