ದೂರು ನೀಡಲು ಬಂದ ಯುವತಿಯನ್ನು 3 ದಿನ ನಿರಂತರ ಅತ್ಯಾಚಾರ ನಡೆಸಿದ ಸಬ್ ಇನ್ಸ್ ಪೆಕ್ಟರ್
ಅಲ್ವಾರ್: ತನ್ನ ಕೌಟುಂಬಿಕ ಸಮಸ್ಯೆಯನ್ನು ನಿವಾರಿಸಿ ಎಂದು ಪೊಲೀಸರ ಮೊರೆ ಹೋದ 26 ವರ್ಷ ವಯಸ್ಸಿನ ಯುವತಿಯನ್ನು ಸಬ್ ಇನ್ಸ್ ಪೆಕ್ಟರ್ ವೋರ್ವ ಅತ್ಯಾಚಾರ ನಡೆಸಿದ ಘಟನೆ ರಾಜಸ್ಥಾನದಿಂದ ವರದಿಯಾಗಿದೆ.
ರಾಜಸ್ಥಾನದ ಖೇರ್ಲಿ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ ಪೆಕ್ಟರ್ 57 ವರ್ಷ ವಯಸ್ಸಿನ ಭರತ್ ಸಿಂಗ್ ಅತ್ಯಾಚಾರ ನಡೆಸಿದ ಆರೋಪಿಯಾಗಿದ್ದಾನೆ. ಕುಟುಂಬ ಕಲಹದ ಹಿನ್ನೆಲೆಯಲ್ಲಿ ದೂರು ನೀಡಲು ಬಂದಿದ್ದ ಯುವತಿಯನ್ನು ಭರತ್ ಸಿಂಗ್ ಮೂರು ದಿನಗಳ ಕಾಲ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ಘಟನೆ ಸಂಬಂಧ ಜೈಪುರ ಶ್ರೇಣಿ ಇನ್ಸ್‌ಪೆಕ್ಟರ್ ಜನರಲ್ (ಐಜಿ) ಹವಾ ಸಿಂಗ್ ಗುಮರಿಯಾ ಮತ್ತು ಅಲ್ವಾರ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ತೇಜಸ್ವಿನಿ ಗೌತಮ್ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದು, ಭರತ್ ಸಿಂಗ್ ಯುವತಿ ಮೇಲೆ ಅತ್ಯಾಚಾರ ನಡೆಸಿರುವುದು ನಿಜ ಎಂದು ವರದಿ ನೀಡಿದ್ದಾರೆ.
ಇನ್ನೂ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು ಎಂಧು ಪೊಲೀಸರು ಹೇಳಿದ್ದು, ಈ ವೇಳೆ ಸಂತ್ರಸ್ತ ಯುವತಿ ಭೀತಿಗೊಂಡು ವೈದ್ಯಕೀಯ ಪರೀಕ್ಷೆಗೆ ನಿರಾಕರಿಸಿದ್ದಾಳೆ ಎಂದು ಹೇಳಲಾಗಿದೆ. ಆದರೆ ಪೊಲೀಸರು ಈ ಬಗ್ಗೆ ಯುವತಿಗೆ ತಿಳುವಳಿಕೆ ನೀಡುತ್ತಿದ್ದಾರೆ.